ಲಕ್ಕುಂಡಿ ಉತ್ಖನನ: ಮನೆಯೊಳಗೆ ಪತ್ತೆಯಾಯ್ತು 10ನೇ ಶತಮಾನದ ಈಶ್ವರ ದೇಗುಲ; ಪುರಾತತ್ವ ಇಲಾಖೆ ಫುಲ್ ಖುಷ್!

Published : Jan 20, 2026, 06:48 PM IST

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಉತ್ಖನನದ ವೇಳೆ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದೆ. ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಈ ದೇವಸ್ಥಾನದ ಆವರಣವನ್ನೇ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ.

PREV
16

ಗದಗ (ಜ.20:): ಐತಿಹಾಸಿಕ ತಾಣ ಲಕ್ಕುಂಡಿ ಅಕ್ಷರಶಃ ಅಚ್ಚರಿಗಳ ತವರು. ಇಲ್ಲಿನ ಮಣ್ಣಿನ ಕಣಕಣದಲ್ಲೂ ಇತಿಹಾಸ ಅಡಗಿದೆ ಎನ್ನುವುದಕ್ಕೆ ಇದೀಗ ಮತ್ತೊಂದು ಜೀವಂತ ಸಾಕ್ಷಿ ಲಭ್ಯವಾಗಿದೆ. ಗ್ರಾಮದ ಕುಂಬಾರ ಓಣಿಯಲ್ಲಿರುವ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದ್ದು, ಇಡೀ ನಾಡಿನ ಗಮನ ಸೆಳೆಯುತ್ತಿದೆ.

26

ಲಕ್ಕುಂಡಿಯ ಕುಂಬಾರ ಓಣಿಯಲ್ಲಿರುವ ಚೌಕಿಮಠ ಎಂಬುವವರ ಮನೆ ಹೊರನೋಟಕ್ಕೆ ಸಾಮಾನ್ಯ ಮನೆಯಂತೆ ಕಂಡರೂ, ಅದರ ಒಳಾಂಗಣ ಮಾತ್ರ ಅದ್ಭುತ ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡಿದೆ.

36

ಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಅಲ್ಲಿ ಸುಂದರವಾದ ಮಂಟಪ ಹಾಗೂ ಮಹಾಂತೇಶ್ವರ ದೇವರ ಮೂರ್ತಿ ಕಣ್ಮನ ಸೆಳೆಯುತ್ತದೆ. ಇನ್ನೂ ಅಚ್ಚರಿಯ ವಿಷಯವೆಂದರೆ, ಕುಟುಂಬದ ಸದಸ್ಯರು ಓಡಾಡುವ ಮನೆಯ ಹಾಲ್‌ನ ಪಕ್ಕದಲ್ಲೇ ಪುರಾತನ ಈಶ್ವರನ ಗರ್ಭಗುಡಿಯಿದೆ!

46

ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು 10ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಐತಿಹಾಸಿಕ ದೇವಸ್ಥಾನದ ಆವರಣವನ್ನೇ ಅವರು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ.

56

ಪುರಾತನ ಕೆತ್ತನೆಗಳುಳ್ಳ ಸ್ತಂಭಗಳು, ಕಲ್ಲಿನ ಗೋಡೆಗಳ ನಡುವೆಯೇ ಈ ಕುಟುಂಬದ ದಿನಚರಿ ಸಾಗುತ್ತದೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಈ ಪರಂಪರೆಯನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ.

66

ಲಕ್ಕುಂಡಿಯಲ್ಲಿ ಈಗಷ್ಟೇ ಪುರಾತತ್ವ ಇಲಾಖೆಯಿಂದ ಉತ್ಖನನ ಕಾರ್ಯ ಚುರುಕುಗೊಂಡಿರುವ ಬೆನ್ನಲ್ಲೇ, ಈ 'ಮನೆ-ಮಂದಿರ'ದ ಸುದ್ದಿ ಭಾರಿ ಕುತೂಹಲ ಮೂಡಿಸಿದೆ. ಹಳೆಯ ಕಾಲದ ವಾಸ್ತುಶಿಲ್ಪ ಮತ್ತು ಆಧುನಿಕ ಜೀವನ ಶೈಲಿ ಒಂದೇ ಸೂರಿನಡಿ ಇರುವುದು ಇಲ್ಲಿನ ವಿಶೇಷ. 10ನೇ ಶತಮಾನದ ಚಾಲುಕ್ಯ ಶೈಲಿಯ ಕೆತ್ತನೆಗಳು ಇಂದಿಗೂ ಸುಸ್ಥಿತಿಯಲ್ಲಿದ್ದು, ಇತಿಹಾಸ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿವೆ.

Read more Photos on
click me!

Recommended Stories