ಡಿಜಿಪಿ ರಾಮಚಂದ್ರರಾವ್ ಪ್ರಕರಣಕ್ಕೆ ಬೆಳಗಾವಿ ನಂಟಿನ ಶಂಕೆ ವ್ಯಕ್ತವಾಗಿದೆ. ಎಂಟು ವರ್ಷಗಳ ಹಿಂದೆ ಅವರು ಬೆಳಗಾವಿ ಐಜಿಯಾಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೋದಲ್ಲಿರುವ ಮಹಿಳೆಯೂ ಬೆಳಗಾವಿಯವರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಡಿಜಿಪಿ ರಾಮಚಂದ್ರರಾವ್ ಅವರ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದು, ಇದೀಗ ಈ ಕೇಸ್‌ಗೆ ಕುಂದಾನಗರಿ ಬೆಳಗಾವಿ ಲಿಂಕ್ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಮಹಿತಿ ಕಲೆ ಹಾಕಲಾಗುತ್ತಿದೆ.
25
ಬೆಳಗಾವಿ ಐಜಿ ಕಚೇರಿ
ಬೆಳಗಾವಿ ಐಜಿ ಕಚೇರಿಯಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ಅಸಹ್ಯ ಕೃತ್ಯ ನಡೆದಿವೆ ಎನ್ನುವ ಶಂಕೆ ವ್ಯಕ್ತವಾಗಿದೆ. ಎಂಟು ವರ್ಷಗಳ ಹಿಂದೆ ರಾಮಚಂದ್ರ ರಾವ್ ಬೆಳಗಾವಿ ಐಜಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿಯೇ ರಾಮಚಂದ್ರರಾವ್ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
35
ಐಜಿ ಚೇಂಬರ್ ಸಂಪೂರ್ಣ ನವೀಕರಣ
ಸದ್ಯ ಬೆಳಗಾವಿ ಐಜಿ ಚೇಂಬರ್ ಸಂಪೂರ್ಣ ನವೀಕರಣಗೊಂಡಿದೆ. ವಿಡಿಯೋದಲ್ಲಿರುವ ಮಹಿಳೆ ಸಹ ಬೆಳಗಾವಿ ನಗರದವರೇ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮಹಿಳೆ ಜೊತೆ ರಾಮಚಂದ್ರರಾವ್ ಸಂಪರ್ಕ ದಲ್ಲಿರುವ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಘಟನೆ ಬಗ್ಗೆ ಪೋಲಿಸ್ ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಯಾರೆ ತಪ್ಪು ಮಾಡಿದ್ರೂ ಕ್ರಮ ನಿಶ್ಚಿತ: ಸಚಿವೆ ಹೆಬ್ಬಾಳ್ಕರ್
ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದು, ಯಾರೇ ಆಗಿರಲಿ ತಪ್ಪು ಮಾಡಿದರೆ ಕಾನೂನು ರೀತಿ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದರೆ ಅದು ಎಷ್ಟೇ ದೊಡ್ಡ ಅಧಿಕಾರಿ ಆಗಿದ್ದರೂ ಸಹ ಕ್ಷಮೆ ಇಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಕಾನೂನಿನ ಪ್ರಕಾರ ತನಿಖೆ ನಡೆಯಲಿದ್ದು, ನ್ಯಾಯ ಸಿಗಬೇಕು ಎಂಬುದು ಸರ್ಕಾರದ ನಿಲುವು ಎಂದು ತಿಳಿಸಿದರು.
55
4 ತಿಂಗಳಲ್ಲಿ ನಿವೃತ್ತಿ
ರಾಮಚಂದ್ರ ರಾವ್ ಅವರು ಇನ್ನು ಕೇವಲ 4 ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದರು. ಅಷ್ಟರಲ್ಲಿ ರಂಗಿನಾಟದ ವಿಡಿಯೋ ಮತ್ತು ಆಡಿಯೋಗಳು ಹೊರಬಂದಿವೆ. ಕೆಲ ತಿಂಗಳುಗಳ ಹಿಂದೆ ಅವರ ಮಲ ಮಗಳು ನಟಿ ರನ್ಯಾ ರಾವ್ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಳು.