ಅಂಗಾಂಗ ದಾನ ಹಲವರಿಗೆ ಜೀವದಾನ. ಯಾರೋ ಒಬ್ಬ ವ್ಯಕ್ತಿ ನೀಡಿದ ದೇಹದ ಭಾಗದಿಂದ ಬೇರೆಯೊಬ್ಬರು ಹೊಸ ಜೀವನವನ್ನು ಪಡೆಯಬಹುದು. ಮೂತ್ರಪಿಂಡಗಳು, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣುಗಳು, ಶ್ವಾಸಕೋಶಗಳು ಮುಂತಾದ ಅಂಗಗಳನ್ನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಜೀವವನ್ನು ಉಳಿಸಬಹುದು.