ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಮೈಸೂರಿನಲ್ಲಿ ನಾಡಹಬ್ಬ ದಸರಾ ಉದ್ಘಾಟಿಸಿದ ಬಳಿಕ ಚಾಮುಂಡಿ ತಾಯಿ ದರ್ಶನ ಮಾಡಿ ಹುಬ್ಬಳಿ ಧಾರವಾಡದತ್ತ ತೆರಳಿದರು.
ಅಲ್ಲಿ ಅವರು ಹುಬ್ಬಳ್ಳಿ ಪಾಲಿಕೆಯಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಆಯೋಜಿಸಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದಾದ ಬಳಿಕ ಐಐಐಟಿ ಉದ್ಘಾಟನೆಗೆ ಧಾರವಾಡಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಗೆ ಕೌದಿ ಹಾಗೂ ರೇಷ್ಮೆ ಸೀರೆ ಉಡುಗೊರೆಯಾಗಿ ನೀಡಿದ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ . ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಉಪಸ್ಥಿತರಿದ್ದರು.
ಮೈಸೂರಿನಲ್ಲೂ ಮೈಸೂರು ದಸರಾ ಸಮಿತಿ ದ್ರೌಪದಿ ಅವರಿಗೆ ಮೈಸೂರಿನಲ್ಲೇ ತಯಾರಿಸಿದ ಮೈಸೂರು ರೇಷ್ಮೆ ಸೀರೆಯನ್ನು ನೀಡಿದ್ದರು. ಇದನ್ನು ದಸರಾಗೆ ಆಹ್ವಾನಿಸುವ ವೇಳೆಯೇ ರಾಷ್ಟ್ರಪತಿಗಳಿಗೆ ನೀಡಲಾಗಿತ್ತು.
ಇಂದು ದಸರಾಗೆ ಆಗಮಿಸಿದ ರಾಷ್ಟ್ರಪತಿ ಅದೇ ಸೀರೆಯನ್ನು ಉಟ್ಟು ದಸರಾಗೆ ಆಗಮಿಸಿ, ಮೈಸೂರು ಸಿಲ್ಕ್ ಸೀರೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇನ್ನು ಧಾರವಾಡದಲ್ಲಿ ಐಐಐಟಿಯ ಹೊಸ ಕ್ಯಾಂಪಸ್ ಉದ್ಘಾಟಿಸಿ ರಾಷ್ಟ್ರಪತಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.