ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು (20652) ಆನೆಯೊಂದು ಮರವನ್ನು ಉರುಳಿಸಿದ್ದರಿಂದ ಆನಂದಪುರ ನಿಲ್ದಾಣದಲ್ಲಿ ನಿಂತಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ರೈಲು ಸಂಚಾರದಲ್ಲಿ ಹಲವು ಗಂಟೆಗಳ ವಿಳಂಬ ಉಂಟಾಗಿದೆ.
ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿರುವ ಎಕ್ಸ್‌ಪ್ರೆಸ್ ರೈಲು (20652) ಕಳೆದ 30 ನಿಮಿಷಗಳಿಂದ ಆನಂದಪುರ ನಿಲ್ದಾಣದಲ್ಲಿಯೇ ನಿಂತುಕೊಂಡಿದೆ. ಮುಂದಿನ ಎರಡರಿಂದ ಮೂರು ಗಂಟೆ ರೈಲು ಆನಂದಪುರ ನಿಲ್ದಾಣದಲ್ಲಿಯೇ ನಿಲ್ಲಲಿದೆ ಎಂದು ತಿಳಿದು ಬಂದಿದೆ. (AI ರಚಿತ ಚಿತ್ರ)
25
ರೈಲು ಸಂಚಾರದಲ್ಲಿ ಅಡಚಣೆ
ಆನೆಯೊಂದು ಮರವೊಂದನ್ನು ಬೀಳಿಸಿದ್ದು, ಅದು ರೈಲು ಹಳಿಗಳ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ. ಮರ ತೆರವುಗೊಳಿಸಲು ರೈಲು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಇದಕ್ಕೆ ಎರಡರಿಂದ ಮೂರು ಗಂಟೆ ಸಮಯ ಬೇಕಾಗಬಹುದು ಎಂದು ರೈಲಿನಲ್ಲಿರುವ ಪೊಲೀಸರು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ.
35
ರೈಲು ಹಳಿ ಪರಿಶೀಲನೆ
ಮರ ತೆರವುಗೊಳಿಸಿದ ಬಳಿಕ ಅಧಿಕಾರಿಗಳು ರೈಲು ಹಳಿಗಳನ್ನು ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ರೈಲು ಹಳಿಗೆ ಡ್ಯಾಮೇಜ್ ಆಗಿದ್ರೆ ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ರೈಲ್ವೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. (AI ರಚಿತ ಚಿತ್ರ)
ಇಂದು ಬೆಳಗ್ಗೆ ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20652 ಎಂದಿನಂತೆ ಬೆಳಗ್ಗೆ 5.20ಕ್ಕೆ ತನ್ನ ಪ್ರಯಾಣ ಆರಂಭಿಸಿತ್ತು. ಯಾವುದೇ ಅಡಚನೆ ಇಲ್ಲದಿದ್ದರೆ ರೈಲು ಇಂದು ಮಧ್ಯಾಹ್ನ 12 ಗಂಟೆಗೆ ತಲುಪಬೇಕಿತ್ತು. ಬೆಳಗ್ಗೆ 8 ಗಂಟೆಯಾದ್ರೂ ರೈಲು ಆನಂದಪುರದಲ್ಲಿಯೇ ನಿಂತಿದೆ. (AI ರಚಿತ ಚಿತ್ರ)
55
ರೈಲು ವಿಳಂಬ ಸಾಧ್ಯತೆ
ಮಾರ್ಗದಲ್ಲಿ ಅಡಚನೆಯುಂಟಾಗಿದ್ದರಿಂದ ರೈಲು ವಿಳಂಬವಾಗುವ ಮಾಹಿತಿಯನ್ನು ನಿಲ್ದಾಣಗಳಲ್ಲಿ ನೀಡಲಾಗುತ್ತಿದೆ. ಗೌರಿ ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ ಹಿಂದಿರುಗಿ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರು ಆನಂದಪುರ ರೈಲು ನಿಲ್ದಾಣದಲ್ಲಿಯೇ ಸಿಲುಕಿದ್ದಾರೆ. (AI ರಚಿತ ಚಿತ್ರ)