
ದೇಶದಲ್ಲಿ ಎಲ್ ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ಎಲ್ ನಿನೋ ಪ್ರಭಾವದಿಂದ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಕೂಡ ಉದ್ಭವಿಸಲಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ? ಈ ರೀತಿ ಏನಾಗಬೇಕು?
ಜಗತ್ತಿನ ಹವಾಮಾನವನ್ನು ತಲೆಕೆಳಗಾಗಿ ಮಾಡುತ್ತಿರುವ ಎಲ್ ನಿನೋ ಪ್ರಭಾವ ಹೇಗೆ ಕಡಿಮೆಯಾಗುತ್ತದೆ? ಸಾಮಾನ್ಯ ವಾತಾವರಣದ ಸ್ಥಿತಿಗೆ ಹವಾಮಾನ ಯಾವಾಗ ಬದಲಾವಣೆ ಆಗಲಿದೆ ಎಂಬ ಪ್ರಶ್ನೆಗಳು ತಜ್ಞರು ಸೇರಿದಂತೆ ಸಾಮಾನ್ಯ ಜನರನ್ನು ಕಾಡುತ್ತಿದೆ. ಎಲ್ ನಿನೋ ಕಾರಣದಿಂದ ಜಗತ್ತಿನಾದ್ಯಂತ ಉಷ್ಣತೆ, ತೀವ್ರ ಬರ ಸ್ಥಿತಿ, ಕೆಲವು ಕಡೆ ಭಾರೀ ಮಳೆ-ಪ್ರವಾಹಗಳು ಉಂಟಾಗುತ್ತಿವೆ. ಆದರೆ ಪ್ರಕೃತಿಯ ಈ ಋತುವಿನಲ್ಲಿ ಎಲ್ ನಿನೋ ಯಾವಾಗ ಪ್ರಭಾವ ಕಡಿಮೆಯಾಗುವ ಪ್ರಭಾವ ಸಮುದ್ರ ವಾತಾವರಣ ಪ್ರಕ್ರಿಯೆಯಿಂದ ನಡೆಯುತ್ತದೆ.
'ಎಲ್ ನಿನೋ' (El Niño) ಎಂಬುದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ವಾಡಿಕೆಗಿಂತ ಗಮನಾರ್ಹವಾಗಿ ಹೆಚ್ಚು ಬಿಸಿಯಾಗುವ ವಿದ್ಯಮಾನವಾಗಿದೆ. ಸಮುದ್ರದ ಮೇಲ್ಮೈ ತಾಪಮಾನವು ಮತ್ತೆ ತಣ್ಣಗಾಗಲು ಪ್ರಾರಂಭಿಸಿದಾಗ ಇದರ ತೀವ್ರತೆಯು ಕುಗ್ಗಲು ಆರಂಭವಾಗುತ್ತದೆ. ಎಲ್ ನಿನೋ (El Niño) ತನ್ನ ಉತ್ತುಂಗವನ್ನು ತಲುಪಿದ ನಂತರ, ಸಾಗರದ ಆಳದಿಂದ ತಣ್ಣನೆಯ ನೀರಿನ ಪ್ರವಾಹಗಳು ಮೇಲಕ್ಕೆ ಏರಲು ಪ್ರಾರಂಭಿಸುತ್ತವೆ. ಇದರ ಪರಿಣಾಮವಾಗಿ, ಬೆಚ್ಚಗಾದ ಮೇಲ್ಮೈ ನೀರಿನ ತಾಪಮಾನವು ಕ್ರಮೇಣ ಕಡಿಮೆಯಾಗಿ ಸಾಮಾನ್ಯ ಮಟ್ಟಕ್ಕೆ ಮರಳುತ್ತದೆ. ಹವಾಮಾನಶಾಸ್ತ್ರದಲ್ಲಿ, ಈ ಪ್ರಕ್ರಿಯೆಯನ್ನು "ತಟಸ್ಥ ಹಂತ" (neutral phase) ಎಂದು ಕರೆಯಲಾಗುತ್ತದೆ.
ಎಲ್ ನಿನೋ ಪ್ರಭಾವ ಉಂಟಾದ ಸಂದರ್ಭದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬೀಸುವ ಗಾಳಿಯ ವೇಗ ಕಡಿಮೆಯಾಗುತ್ತದೆ. ಆದರೆ ಎಲ್ ನಿನೋ ಬಲ ಕಡಿಮೆಯಾಗುವ ಸಂದರ್ಭದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಮಾರುತಗಳು ಮತ್ತೆ ಬಲಪಡೆದುಕೊಂಡು ಚಲಿಸಲು ಪ್ರಾರಂಭಿಸುತ್ತವೆ. ಈ ಬಲವಾದ ಗಾಳಿಯೂ ಸಮುದ್ರದ ಮೇಲ್ಮೈ ಇರುವ ಬೀಸಿ ನೀರನ್ನು ಪಶ್ಚಿಮ ಪೆಸಿಫಿಕ್ (ಏಷ್ಯಾ, ಆಸ್ಟ್ರೇಲಿಯಾ) ಕಡೆಗೆ ಬೀಸುವಂತೆ ಮಾಡುತ್ತದೆ. ಪೂರ್ವ ಪೆಸಿಫಿಕ್ ತೀರದಲ್ಲಿ ಖಾಲಿಯಾಗುವ ಸ್ಥಳದಲ್ಲಿ ಸಮುದ್ರದ ಅಳದಲ್ಲಿರುವ ತಣ್ಣನೆಯ ನೀರು ಮೇಲಕ್ಕೆ ಬಂದು ಸೇರುತ್ತದೆ. ಇದು ಪ್ರಾರಂಭವಾದ ಸಂದರ್ಭದಲ್ಲಿ ಎಲ್ ನಿನೋ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾಗಲಿದೆ.
ಸಾಗರದಲ್ಲಿ ಉಂಟಾಗುವ 'ಕೆಲ್ವಿನ್ ಅಲೆಗಳು' (Kelvin waves) ವಾತಾವರಣದ ಬದಲಾವಣೆಗಳಿಗೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ಸಾಗರದ ಮೇಲ್ಮೈ ಅಡಿಯಲ್ಲಿ ಚಲಿಸುವ ಈ ಕೆಲ್ವಿನ್ ಅಲೆಗಳು ಪಶ್ಚಿಮದಿಂದ ಪೂರ್ವಕ್ಕೆ ಸಾಗುವಾಗ, ತಮ್ಮ ಹಾದಿಯಲ್ಲಿರುವ ಬೆಚ್ಚಗಿನ ನೀರಿನ ಪದರಗಳ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಇದರ ಪರಿಣಾಮವಾಗಿ, ಸಾಗರದ ನೀರಿನಲ್ಲಿರುವ ಉಷ್ಣತೆಯು ಕ್ರಮೇಣ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ ಅಥವಾ ಇತರ ಪ್ರದೇಶಗಳಿಗೆ ಹರಡುತ್ತದೆ, ಇದರಿಂದಾಗಿ ತಾಪಮಾನದಲ್ಲಿ ಇಳಿಕೆಯಾಗುತ್ತದೆ.
ಎಲ್ ನಿನೋ ಪ್ರಭಾವ ಕಡಿಮೆಯಾದ ಬಳಿಕ ಸಾಮಾನ್ಯ ವಾತಾವರಣ ನಿರ್ಮಾಣವಾಗುತ್ತದೆ, ಈ ಬಳಿಕ ಸಮುದ್ರ ಪ್ರದೇಶಗಳು ಸಾಮಾನ್ಯಕ್ಕಿಂತ ಹೆಚ್ಚು ತಣ್ಣಗಾಗಿ ನಿನಾ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಲ್ ನಿನೋ ಭಾರತದಲ್ಲಿ ಮಳೆಯ ಪ್ರಭಾವ, ಮಳೆಗಾಲದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ನಿರ್ಮಾಣವಾಗಲು ಕಾರಣವಾದರೆ. ಎಲ್ ನಿನೋ ಪ್ರಭಾವ ಕಡಿಮೆಯಾಗಿ ಎಲ್ ನಿನಾ ಸ್ಥಿತಿ ನಿರ್ಮಾಣವಾದರೆ ನೈರುತ್ಯ ಮಾನ್ಸೂನ್ ಮಾರುತಗಳು ಅತ್ಯಂತ ವೇಗವಾಗಿ ದೇಶದಾದ್ಯಂತ ವಿಸ್ತರಣೆಯಾಗಿ ಭಾರೀ ಮಳೆಯಾಗುತ್ತದೆ.
ಭಾರತದ ಕೃಷಿಯ ಮೇಲೆ ಹಾಗೂ ಜಲಾಶಯಗಳ ನೀರಿನ ಸಂಗ್ರಹಕ್ಕೆ ರಿಲೀಫ್ ನೀಡುತ್ತದೆ. ಎಲ್ ನಿನೋ ಮುಗಿದ ಬಳಿಕ ಲಾ ನಿನಾ ಆರಂಭವಾಗಲು ಕೆಲವು ತಿಂಗಳಿಂದ ಗರಿಷ್ಠ 1-2 ವರ್ಷಗಳು ತೆಗೆದುಕೊಳ್ಳುತ್ತದೆ. ಇದು ವರ್ಷಗಳ ಕಾಲ ನಡೆಯುವ ಸುದೀರ್ಘ ಪ್ರಕ್ರಿಯೆ ಆಗಿದ್ದು, ಕೆಲವು ಸಂದರ್ಭಗಳಲ್ಲಿ ಕೇವಲ ಒಂದು ವರ್ಷದಲ್ಲಿಯೇ ಬದಲಾವಣೆಗಳು ನಡೆಯುತ್ತದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 01ರ ವರೆಗೂ ಮಳೆ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳುವ ನಿರೀಕ್ಷೆ ಇದ್ದು, ಕರ್ನಾಟಕದಾದ್ಯಂ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.