ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಅಂದ್ರೆ ಮನೆ ಅಲಂಕಾರ, ಮನೆಯ ಹೆಸರು, ಹೂವಿನ ಅಲಂಕಾರ, ಲೈಟಿಂಗ್ಸ್ ಇವೆಲ್ಲವೂ ಕಾಣಿಸುತ್ತವೆ. ಆದರೆ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆ ಗೃಹಪ್ರವೇಶ ಕಾರ್ಯಕ್ರಮವನ್ನ ವಿಭಿನ್ನವಾಗಿ ಮಾಡಿದ್ದಾರೆ. ಅವರ ಈ ವಿಶಿಷ್ಟ ಐಡಿಯಾ ಗಮನ ಸೆಳೆದಿದೆ.
ವಂದೇ ಮಾತರಂ ಸೆಲ್ಫಿ ಸ್ಪಾಟ್: ಶಾಲಾ ಶಿಕ್ಷಕಿಯ ವಿಭಿನ್ನ ಗೃಹಪ್ರವೇಶ ಕಾರ್ಯಕ್ರಮ
ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಅಂದ್ರೆ ಮನೆ ಅಲಂಕಾರ, ಮನೆಯ ಹೆಸರು, ಹೂವಿನ ಅಲಂಕಾರ, ಲೈಟಿಂಗ್ಸ್ ಇವೆಲ್ಲವೂ ಕಾಣಿಸುತ್ತವೆ. ಆದರೆ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆ ಗೃಹಪ್ರವೇಶ ಕಾರ್ಯಕ್ರಮವನ್ನ ವಿಭಿನ್ನವಾಗಿ ಮಾಡಿದ್ದಾರೆ. ಅವರ ಈ ವಿಶಿಷ್ಟ ಐಡಿಯಾ ಗಮನ ಸೆಳೆದಿದೆ.
25
ಮನೆ ಮುಂದೆ ‘ವಂದೇ ಮಾತರಂ’ ಸೆಲ್ಫಿ ಸ್ಪಾಟ್ ಹಾಕಿಸಿ ಗೃಹಪ್ರವೇಶ
ಮೂಲತಃ ಸಿದ್ದಾಪುರದವರಾದ ಅನ್ನಪೂರ್ಣ ಸಜ್ಜನ್ ಅವರು ಕಾರಟಗಿ ಸರ್ಕಾರಿ ಶಾಲೆಯಲ್ಲಿ ಹಿರಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿದ್ದಾಪುರದ ಬಳಿಯ ರವಿನಗರದಲ್ಲಿ ಇತ್ತೀಚೆಗೆ ಹೊಸ ಮನೆ ನಿರ್ಮಿಸಿರುವ ಅವರು ಗುರುವಾರ ಗೃಹಪ್ರವೇಶ ಕಾರ್ಯಕ್ರಮ ಆಯೋಜಿಸಿದ್ದರು. ಗೃಹಪ್ರವೇಶಕ್ಕೆ ಬರುವ ಅತಿಥಿಗಳು ಸೆಲ್ಫಿ ತೆಗೆಸಿಕೊಳ್ಳುವುದು ಸಾಮಾನ್ಯ. ಈ ವಿಚಾರವೇ ಶಿಕ್ಷಕಿಗೆ ಸೆಲ್ಫಿ ಸ್ಪಾಟ್ ಐಡಿಯಾ ಬಂದಿದೆ..
ಮನೆಗೆ ಆಗಮಿಸಿದ ಅತಿಥಿಗಳಿಗೆ ವಂದೇ ಮಾತರಂ ಮಹತ್ವ ತಿಳಿಸುವ ಉದ್ದೇಶದಿಂದ ಮನೆಯ ಮುಂಭಾಗದಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಸಾಲುಗಳನ್ನು ಒಳಗೊಂಡ ಸೆಲ್ಫಿ ಸ್ಪಾಟ್ ನಿರ್ಮಿಸಿದ್ದಾರೆ. ಮನೆ ನೋಡಲು ಬಂದವರು ಸೆಲ್ಫಿ ಸ್ಪಾಟ್ ಕಂಡು ಕುತೂಹಲದಿಂದ ಅಲ್ಲೇ ನಿಂತು ಫೋಟೋ ತೆಗೆಸಿಕೊಂಡರು, ಸೆಲ್ಫಿ ತೆಗೆದುಕೊಂಡರು.
35
‘ವಂದೇ ಮಾತರಂ’ ಜೊತೆ ಸೆಲ್ಫಿ
ಮನೆ ಓಪನಿಂಗ್‌ಗೆ ಬಂದ ಅತಿಥಿಗಳು ಹಾಗೂ ಸ್ಥಳೀಯರು ವಂದೇ ಮಾತರಂ ಗೀತೆಯ ಹಿನ್ನೆಲೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು, ದೂರದಿಂದ ಬಂದ ಅತಿಥಿಗಳು 'ಗೃಹಪ್ರವೇಶ' ಹೀಗೂ ಮಾಡಬಹುದಾ..' ಅಂತಾ ಅಚ್ಚರಿಪಟ್ಟರು. ಕೆಲವರು ಶಿಕ್ಷಕಿ ಅನ್ನಪೂರ್ಣ ಸಜ್ಜನ್ ಅವರ ಈ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಭಕ್ತಿಯ ಸಂದೇಶ ಸಾರಿದ ಪ್ರಯತ್ನ
ಶಿಕ್ಷಕಿಯ ಈ ಪ್ರಯತ್ನದ ಹಿಂದೆ ದೇಶಭಕ್ತಿ ಹಾಗೂ ವಂದೇ ಮಾತರಂ ಗೀತೆಯ ಮಹತ್ವವನ್ನು ಜನರಿಗೆ ನೆನಪಿಸುವ ಉದ್ದೇಶವಿದೆ. ಸ್ಕೌಟ್ಸ್ ಗೈಡ್ ಕೊಪ್ಪಳ ವಿಭಾಗದ ಪ್ರಮುಖರಾಗಿರುವ ಅವರಿಗೆ ಸಹಜವಾಗಿ ದೇಶದ ಬಗ್ಗೆ ಅಪಾರ ಭಕ್ತಿ. ಹೀಗಾಗಿಯೇ ಗೃಹಪ್ರವೇಶದಂತಹ ವೈಯಕ್ತಿಕ ಕಾರ್ಯಕ್ರಮವನ್ನೇ ದೇಶಭಕ್ತಿಯ ಸಂದೇಶ ಸಾರುವ ವೇದಿಕೆಯನ್ನಾಗಿ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ದೇಶಾದ್ಯಂತ ವಂದೇ ಮಾತರಂ ಗೀತೆಯ ಸುತ್ತ ರಾಜಕೀಯ ಚರ್ಚೆ ಹಾಗೂ ಪರ-ವಿರೋಧದ ಹೇಳಿಕೆಗಳು ಕೇಳಿಬರುತ್ತಿವೆ. ಕೆಲ ನಾಯಕರು ಎರಡು ಚರಣಗಳಿಗೆ ಸೀಮಿತಗೊಳಿಸುವ ನಿಲುವು ವ್ಯಕ್ತಪಡಿಸುತ್ತಿದ್ದರೆ, ಇದನ್ನ ವಿರೋಧಿಸಿ ಕೆಲವರು ಪೂರ್ಣ ಗೀತೆ ಹಾಡುವ ವಿಚಾರವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟದ ನೆನಪು
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಭಾರತೀಯರನ್ನು ಒಗ್ಗೂಡಿಸಿದ ಗೀತೆಯಾಗಿ ವಂದೇ ಮಾತರಂಗೆ ವಿಶೇಷ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಗೀತೆಯ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವ ಸಮಯದಲ್ಲಿ ಕಾರಟಗಿ ಸರ್ಕಾರಿ ಶಾಲೆಯ ಶಿಕ್ಷಕಿಯ ಈ ವಿಭಿನ್ನ ‘ಸೆಲ್ಫಿ ಸ್ಪಾಟ್’ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
55
ಅತಿಥಿಗಳ ಮೆಚ್ಚುಗೆ
ಗೃಹಪ್ರವೇಶ ಬಂದವರಲ್ಲಿ ಬಹುತೇಕರು ಸೆಲ್ಫಿ ಸ್ಪಾಟ್ ಮುಂದೆ ನಿಂತು ಫೋಟೋ ತೆಗೆದುಕೊಂಡರು. ಮನೆಯ ಶುಭಾರಂಭದ ಜೊತೆಗೆ ದೇಶಭಕ್ತಿಯ ಸಂದೇಶವನ್ನೂ ಸಾರಿದ ಶಿಕ್ಷಕಿಯ ಈ ಪ್ರಯತ್ನಕ್ಕೆ ಅತಿಥಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.