Anand Mahindra: ಹೊನ್ನಾವರದ ಅಂದಕ್ಕೆ ಮನಸೋತ ಆನಂದ್ ಮಹೀಂದ್ರಾ; ಕರ್ನಾಟಕದ 'ನಿಸರ್ಗ' ವೈಭವಕ್ಕೆ ಉದ್ಯಮಿ ಫಿದಾ!

Published : Jun 15, 2026, 06:41 PM IST

ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavara Beauty) ಸೌಂದರ್ಯಕ್ಕೆ ಮನಸೋತಿದ್ದಾರೆ. ಕೇರಳದ ಹಿನ್ನೀರಿಗೆ ಹೋಲಿಸಿದ ಅವರು, ಶರಾವತಿ ನದಿ, ಮ್ಯಾಂಗ್ರೋವ್ ಕಾಡುಗಳು ಮತ್ತು ಹೊನ್ನಾವರದ ಪರಿಸರ (Nature) ಮಹತ್ವವನ್ನು ಶ್ಲಾಘಿಸಿದ್ದಾರೆ.

PREV
15

ದೇಶದ ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ (India's Famous businessman Anand Mahindra) ಅವರು ಸಾಮಾಜಿಕ ಜಾಲತಾಣದಲ್ಲಿ, ಆಗಾಗ್ಗೆ ಭಾರತದ ಸುಂದರ ತಾಣಗಳನ್ನು ಪರಿಚಯಿಸುತ್ತಿರುತ್ತಾರೆ. ಇದೀಗ ಅವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavara, Uttara kannada, Karnataka) ಸೌಂದರ್ಯಕ್ಕೆ (Nature Beauty) ಮನಸೋತಿದ್ದು, ಈ ಕುರಿತು ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ.

25

ತಮ್ಮ ಟ್ವೀಟ್‌ನಲ್ಲಿ ಆನಂದ್ ಮಹಿಂದ್ರಾ ಅವರು ಈ ಕೆಳಗಿನಂತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ:

ಅನ್ವೇಷಿಸದ ಮತ್ತು ಕಡಿಮೆ ಜನಸಂದಣಿ ಇರುವ ತಾಣಗಳಿಗಾಗಿ ನನ್ನ ಹುಡುಕಾಟವನ್ನು ಮುಂದುವರೆಸುತ್ತಿದ್ದೇನೆ.... ನಾವು ಆಗಾಗ್ಗೆ ಕೇರಳದ ಹಿನ್ನೀರಿನ (Backwaters) ವೈಭವವನ್ನು ಸಂಭ್ರಮಿಸುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಅಷ್ಟೇ ಗಮನ ಸೆಳೆಯಬೇಕಾದ ಒಂದು ಗುಪ್ತ (Hiden dimond) ರತ್ನವಿದೆ.

35

ಜೋಗ್ ಜಲಪಾತದಲ್ಲಿ (Jog Falls) ಆರ್ಭಟಿಸುವ ಅದೇ ಶರಾವತಿ ನದಿಯು (Sharavati River) ಅಂತಿಮವಾಗಿ ಮತ್ತು ಶಾಂತವಾಗಿ ಹೊನ್ನಾವರದ ಅರೇಬಿಯನ್ ಸಮುದ್ರವನ್ನು (Arabian sea) ಸೇರುತ್ತದೆ. ಈ ಚಿತ್ರಗಳು ವರ್ಧಿಸಲ್ಪಟ್ಟಿವೆಯೇ (Enhanced) ಎಂಬ ಬಗ್ಗೆ ನನಗೆ ಖಚಿತವಿಲ್ಲ, ಆದರೆ ಹೊನ್ನಾವರವು ಒಂದು ಮಾಂತ್ರಿಕ ಭೂದೃಶ್ಯವಾಗಿದೆ (Honnavara Magical Land) ಎಂಬುದು ಸ್ಪಷ್ಟವಾಗಿದೆ.

45

ಅಲ್ಲಿ ಮ್ಯಾಂಗ್ರೋವ್ ಕಾಡುಗಳು (Mangrove forest),  ಅಂಕುಡೊಂಕಾದ ಜಲಮಾರ್ಗಗಳು ಮತ್ತು ಕನ್ನಡಿಯಂತಹ (Backwater's like mirrors) ಹಿನ್ನೀರುಗಳಿವೆ. ಮ್ಯಾಂಗ್ರೋವ್‌ಗಳು ಪ್ರಕೃತಿಯ ಅತ್ಯಂತ ಪರಿಣಾಮಕಾರಿ ಕರಾವಳಿ ರಕ್ಷಕಗಳಲ್ಲಿ ಒಂದಾಗಿರುವುದರಿಂದ, ಹೊನ್ನಾವರದ ಸೌಂದರ್ಯವು ಅದರ ಪರಿಸರ ಮಹತ್ವಕ್ಕೆ ಸಮಾನವಾಗಿದೆ ಎಂದು ಆನಂದ್ ಮಹೀಂದ್ರಾ ಅವರು ಬಣ್ಣಿಸಿದ್ದಾರೆ.

55

ತಮ್ಮ #SundayWanderer ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಹೊನ್ನಾವರದ ಸುಂದರ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಕರ್ನಾಟಕದ ಕರಾವಳಿ ಪ್ರವಾಸೋದ್ಯಮಕ್ಕೆ (Karnataka Tourism) ಮಹಿಂದ್ರಾ ಅವರು ಮೆಚ್ಚುಗೆ ಸೂಚಿಸಿದ್ದಾರೆ.

Read more Photos on
click me!

Recommended Stories