Heli Tourism in Mangaluru: ಆಗಸದಿಂದ ಮಂಗ್ಳೂರು ಬ್ಯೂಟಿ ನೋಡಲು ಸುವರ್ಣಾವಕಾಶ

Suvarna News   | Asianet News
Published : Feb 25, 2022, 10:47 AM ISTUpdated : Feb 25, 2022, 10:56 AM IST

ಮಂಗಳೂರು(ಫೆ.25): ನೇತ್ರಾವತಿ ನದಿ ತೀರದ ಸಹ್ಯಾದ್ರಿ ಕ್ರೀಡಾಂಗಣ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್ ಆಯೋಜಿಸುವ ಫುಜ್ಲಾನಾ ಜಿಪಿಎಲ್ ಉತ್ಸವಕ್ಕೆ-2022(Fujlana GPL Festival 2022) ಕ್ಕೆ ಸಿದ್ಧಗೊಂಡಿದ್ದು, ಈ ಬಾರಿಯ ಟೂರ್ನಿಯಲ್ಲಿ ‘ಹೆಲಿ ಟೂರಿಸಂ’(Heli Tourism) ವಿಶೇಷ ಆಕರ್ಷಣೆಯಾಗಿದೆ.

PREV
16
Heli Tourism in Mangaluru: ಆಗಸದಿಂದ ಮಂಗ್ಳೂರು ಬ್ಯೂಟಿ ನೋಡಲು ಸುವರ್ಣಾವಕಾಶ

ಫೆ. 25ರಿಂದ 27ರವರೆಗೆ ಈ ಟೂರ್ನಿ ನಡೆಯಲಿದ್ದು, ಕರ್ನಾಟಕ(Karnataka), ಮಹಾರಾಷ್ಟ್ರ(Maharashtra), ಕೇರಳ(Kerala), ತೆಲಂಗಾಣದ(Telangana) ಸೇರಿ ಕರಾವಳಿ ಕರ್ನಾಟಕವನ್ನು ಒಳಗೊಂಡ 16 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.

26

ಜಿಪಿಎಲ್ ಉತ್ಸವದಲ್ಲಿ  ಹೊನಲು ಬೆಳಕಿನ ಕ್ರಿಕೆಟ್(Cricket) ಪಂದ್ಯಾಟ ಒಂದು ಭಾಗವಾದರೆ, ಇಡೀ ಉತ್ಸವ ವೈವಿಧ್ಯತೆ ಮೂಲಕ ಗಮನ ಸೆಳೆಯಲಿದೆ. 

36

ಇಂದಿನಿಂದ(ಶುಕ್ರವಾರ) ಭಾನುವಾರದವರೆಗೆ ಹೆಲಿ ಟೂರಿಸಂ ಅವಕಾಶವನ್ನು ನೀಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿರುವ(Mangaluru Airport) ಎಟಿಸಿ (Air Traffic Control) ನಿಯಂತ್ರಣದಲ್ಲಿ ಈ ಹೆಲಿಕಾಪ್ಟರ್(Helicopter) ಪ್ರಯಾಣಿಸಲಿದ್ದು, ಒಬ್ಬರಿಗೆ 10 ನಿಮಿಷಕ್ಕೆ 4 ಸಾವಿರ ರೂ. ದರ ವಿಧಿಸಲಾಗಿದೆ.

46

ಏಕಕಾಲಕ್ಕೆ 6ಮಂದಿಗೆ ಸಂಚರಿಸಬಹುದಾಗಿದೆ. ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಿಂದ ಹೊರಟ ಈ ಹೆಲಿಕಾಪ್ಟರ್ ಉಳ್ಳಾಲ ಸೇತುವೆ, ಧಕ್ಕೆ, ಬೆಂಗರೆ, ಮಂಗಳೂರು(Mangaluru) ನಗರದಾದ್ಯಂತ ಸುತ್ತಾಡಿ ಮತ್ತೆ ಸಹ್ಯಾದ್ರಿ ಕ್ಯಾಂಪಸ್‌ನಲ್ಲೇ ಭೂಸ್ಪರ್ಶ ಆಗಲಿದೆ. ಸಾರ್ವಜನಿಕರ ಸ್ಪಂದನೆಯನ್ನು ಗಮನಿಸಿ ಸೋಮವಾರದವರೆಗೆ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಫುಜ್ಲಾನಾ ಜಿಪಿಎಲ್ ಟೂರ್ನಿಯ ಮುಖ್ಯಸ್ಥರಾದ ನರೇಶ್ ಶೆಣೈ.

56

ಹೆಲಿ ಟೂರಿಸಂಗೆ ಈಗಾಗಲೇ 120ಮಂದಿ ಬುಕ್ಕಿಂಗ್ ಮಾಡಿದ್ದು, ಅವರಿಗೆ ಸಮಯ ನಿಗದಿಪಡಿಸುವ ಅವಧಿಯಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಈ ಹೆಲಿಕಾಪ್ಟರ್ ನಗರ ಸಂಚಾರ(City View) ನಡೆಸಲಿದೆ. 

66

ಹೆಲಿ ಟೂರಿಸಂ ಮಾತ್ರವಲ್ಲದೆ ನೇತ್ರಾವತಿಯಲ್ಲಿ ಬೋಟಿಂಗ್ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು ಕಿಡ್‌ರೆನ್ ನಿರ್ಮಿಸಲಾಗಿದೆ. ಗೂಡುದೀಪ ಸ್ಪರ್ಧೆ, ಕಸದಿಂದ ರಸ, ಆಭರಣಗಳ ತಯಾರಿ, ಮೆಹಂದಿ, ಕ್ಲೇ ಮಾಡೆಲಿಂಗ್, ಹೂ ಅಲಂಕಾರ, ಕೇಶ ವಿನ್ಯಾಸ, ಡ್ರಾಯಿಂಗ್, ಕೊಲಾಜ್, ಜಿಎಸ್‌ಬಿ ಟ್ಯಾಲೆಂಟ್, ಅಡುಗೆ, ಪೋಸ್ಟರ್ ತಯಾರಿಕೆ, ಫ್ಯಾನ್ಸಿ ಡ್ರೆಸ್, ಟಗ್ ಆಫ್ ವಾರ್, ರಂಗೋಲಿ, ಮ್ಯೂಸಿಕ್ ವರ್ಕ್ ಶಾಪ್, ಹೌಸಿ ಹೌಸಿ ಸಹಿತ ಇನ್ನು ಹಲವು ಬಗೆಯ ಸ್ಪರ್ಧೆ ಆಯೋಜಿಸಲಾಗಿದೆ.

Read more Photos on
click me!

Recommended Stories