Road Accidents: ಬೆಂಗ್ಳೂರಲ್ಲಿ ಅಪಘಾತ ತಗ್ಗಿಸಲು ಅಭಿಯಾನ: ಸಚಿವ ಶ್ರೀರಾಮುಲು

First Published | Feb 22, 2022, 5:47 AM IST

ಬೆಂಗಳೂರು(ಫೆ.23):  ರಾಜಧಾನಿಯಲ್ಲಿ ರಸ್ತೆ ಅಪಘಾತ(Accident) ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶ್ವದ ಅತ್ಯುತ್ತಮ ರಸ್ತೆ ಸುರಕ್ಷತೆ ಕ್ರಮಗಳ ಜಾರಿಗೆ ರಾಜ್ಯ ಸರ್ಕಾರ(Government of Karnataka) ‘ಬ್ಲೂಮ್‌ಬರ್ಗ್‌ ಫಿಲಾಂತ್ರೊಫಿನ್‌ ಜಾಗತಿಕ ರಸ್ತೆ ಸುರಕ್ಷತಾ ಅಭಿಯಾನ (BIGRS)’ ಜತೆ ಒಪ್ಪಂದ ಮಾಡಿಕೊಂಡಿದೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu), ಬೆಂಗಳೂರನ್ನು(Bengaluru) ರಸ್ತೆ ಅಪಘಾತ ಮುಕ್ತ ನಗರವಾಗಿ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಅಭಿಯಾನದ(Campaign) ಜತೆಗೂಡಿ ಜಾಗತಿಕ ಮಟ್ಟದ ಅತ್ಯುತ್ತಮ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಇದರಿಂದ ರಸ್ತೆ ಅಪಘಾತದ ಸಾವು ನೋವುಗಳು ತಗ್ಗಲಿವೆ ಎಂದು ತಿಳಿಸಿದರು.

ಪ್ರತಿ ವರ್ಷ ವಿಶ್ವದಾದ್ಯಂತ 13 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. 2 ರಿಂದ 5 ಕೋಟಿ ಮಂದಿ ಗಂಭೀರ ಗಾಯವಾಗುತ್ತಿದ್ದಾರೆ. 2020ರಲ್ಲಿ ಬೆಂಗಳೂರಿನಲ್ಲಿ 2990 ಮಂದಿ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂದಿದ್ದಾರೆ. ವಿಶ್ವಾದ್ಯಂತ(World) ಪ್ರಮುಖ ನಗರಗಳ ಅಪಘಾತಗಳ ಕುರಿತು ಅಧ್ಯಯನ ನಡೆಸಿ ದತ್ತಾಂಶ ಸಂಗ್ರಹಿಸಿ ಸುರಕ್ಷತಾ ಕ್ರಮಗಳನ್ನು ಸಿದ್ಧಪಡಿಸಿದ್ದು, ಇವುಗಳ ಜಾರಿಯಿಂದ ಸಾವು ನೋವು ಹತೋಟಿಗೆ ತರಬಹುದು. ಅಭಿಯಾನಲ್ಲಿ ಭಾಗವಹಿಸುತ್ತಿರುವ ವಿಶ್ವದ ಪ್ರಮುಖ 30 ನಗರಗಳ ಪೈಕಿ ಬೆಂಗಳೂರು ಒಂದಾಗಿದೆ ಎಂದು ಮಾಹಿತಿ ನೀಡಿದ ಬಿಐಜಿಆರ್‌ಎಸ್‌ ಸದಸ್ಯ ಕೆಲ್ಲಿ ಲಾರ್ಸನ್‌

Latest Videos


2025ರ ವರೆಗೂ ಈ ಒಪ್ಪಂದ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ವೇಗದ ಚಾಲನೆ, ಮದ್ಯಪಾನ ರಹಿತ ಚಾಲನೆ, ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಕುರಿತು ಕಾನೂನು ಕ್ರಮಗಳನ್ನು ಜಾರಿಗೊಳಿಸುವುದು. 

ಸುರಕ್ಷತಾ ರಸ್ತೆಗಳು, ಸಾರಿಗೆ ವ್ಯವಸ್ಥೆಗಳ ವಿನ್ಯಾಸ ಸೇರಿದಂತೆ ಪ್ರಮುಖ ತಂತ್ರಗಳನ್ನು ಬಿಐಜಿಆರ್‌ಎಸ್‌ ಬಳಸಿಕೊಂಡು ಬೆಂಗಳೂರಿನ ಅಪಘಾತವನ್ನು ಕಡಿಮೆ ಮಾಡಲಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!