ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ?

Published : Feb 17, 2026, 07:20 AM IST

ಹಾಸನದ ಪ್ರಿಯಾಂಕಾ, ಡೇವಿಡ್ ಎಂಬಾತನೊಂದಿಗೆ ಪರಾರಿಯಾಗಲು ತನ್ನದೇ ಕೊಲೆ ಮತ್ತು ದರೋಡೆಯ ನಾಟಕವಾಡಿದ್ದಳು. ಕೆರೆಯ ಬಳಿ ತನ್ನ ವಸ್ತುಗಳನ್ನಿಟ್ಟು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದರೂ, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಆಕೆಯನ್ನು ಕುಣಿಗಲ್‌ನಲ್ಲಿ ಪತ್ತೆಹಚ್ಚಿದರು.

PREV
15
ಪ್ರಿಯಾಂಕಾ-ಡೇವಿಡ್ ಪ್ರಕರಣ

ಹಾಸನ-ತುಮಕೂರು ಜಿಲ್ಲೆಯ ಪ್ರಿಯಾಂಕಾ ಅಕ್ರಮ ಸಂಬಂಧ ಇಡೀ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಪ್ರಿಯಾಂಕಾ ಮಾಡಿದ್ದ ಡ್ರಾಮಾವೇ ಆಕೆಗೆ ಮುಳುವಾಗಿದೆ. ಆರಂಭದಲ್ಲಿ ಇದೊಂದು ಕೊಲೆ, ಆತ್ಯಾ*ಚಾರ, ದರೋಡೆ ಎಂದೇ ಬಿಂಬಿತವಾಗಿತ್ತು. ಅದರಲ್ಲಿಯೂ ಪ್ರಿಯಾಂಕಾ ಮನೆಯಿಂದ ಸುಮಾರು 30 ಲಕ್ಷ ಮೌಲ್ಯ ಚಿನ್ನಾಭರಣ ಧರಿಸಿ ದಿಢೀರ್ ನಾಪತ್ತೆಯಾಗಿದ್ದರಿಂದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.

25
ಬಿಹಾರಕ್ಕೆ ಹೋಗಲು ಪ್ಲಾನ್

ಪೊಲೀಸರು ದೂರು ದಾಖಲಿಸಿಕೊಳ್ಳಲು ಮತ್ತು ತನಿಖೆ ನಡೆಸಲು ವಿಳಂಬ ಮಾಡಿದ್ದಾರೆ ಎಂದು ಪ್ರಿಯಾಂಕಾ ಪೋಷಕರು ಗಂಭೀರ ಆರೋಪವನ್ನು ಮಾಡಿದ್ದರು. ತಾಳ್ಮೆಯಿಂದ ಎಲ್ಲವನ್ನು ಗಮನಿಸುತ್ತಿದ್ದ ಹಾಸನ ಮತ್ತು ಬೇಲೂರು ಠಾಣೆಯ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಕೇವಲ 10 ಗಂಟೆಯಲ್ಲಿಯೇ ಪೊಲೀಸರು ಪ್ರಕರಣ ಇತ್ಯರ್ಥ ಮಾಡಿದ್ದರು. ಬಿಹಾರಗೆ ಹೊರಡಲು ರೆಡಿಯಾಗಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಮುಂದೆ ಬಂದು ನಿಂತಿದ್ದ ಪೊಲೀಸರು.

35
ತನ್ನ ಕಥೆಯಲ್ಲಿಯೇ ಸಿಲುಕಿದ ಪ್ರಿಯಾಂಕಾ

ಹೌದು, ಪ್ರಿಯಾಂಕಾ ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಲು ಕೆರೆಯ ಬಳಿ ತನ್ನ ಉಡುಪು, ಬ್ಯಾಗ್ ಸೇರಿದಂತೆ ಕೆಲವು ವಸ್ತುಗಳನ್ನು ಇರಿಸಿದ್ದಳು. ಆರಂಭದಲ್ಲಿರದ ವಸ್ತುಗಳು ನಂತರ ಅಲ್ಲಿಗೆ ಬಂದಿದ್ದೇಗೆ ಎಂಬುದರ ಬಗ್ಗೆ ಅನುಮಾನ ಮೂಡಿತ್ತು. ಆದ್ರೂ ಮಲ್ಪೆಯಿಂದ ಮುಳುಗುತಜ್ಞರನ್ನು ಕರೆಸಿ ಕೆರೆಗೆ ಇಳಿಸಿ ಪರಿಶೀಲನೆ ನಡೆಸಲಾಗಿತ್ತು. ಹಾಗೆಯೇ ಅಗ್ನಿಶಾಮಕದಳದ ಸಿಬ್ಬಂದಿ ಸಹ ಬೋಟ್ ಮೂಲಕ ಕೆರೆಯ ಪರಿಶೀಲನೆ ನಡೆಸಿದ್ದರು. ಕೊನೆಗೆ ಡ್ರೋನ್ ಮೂಲಕ ಸುತ್ತಲಿನ ಪ್ರದೇಶದಲ್ಲಿಯೂ ಪೊಲೀಸರು ಹುಡುಕಾಟ ನಡೆಸಿದ್ದರು.

45
ಸಾಲು ಸಾಲು ಅನುಮಾನ

ಆಭರಣ ಹೊರತುಪಡಿಸಿ ಪ್ರಿಯಾಂಕಾಳ ಇನ್ನುಳಿದ ವಸ್ತುಗಳಿರೋದು ಮಾತ್ರ ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಬೇಲೂರು ಬಸ್ ನಿಲ್ದಾಣದಲ್ಲಿ ಫೋನ್ ಸ್ವಿಚ್ಡ್ ಆಫ್ ಮಾಡಿದ್ದ ಪ್ರಿಯಾಂಕಾಳ ಮೊಬೈಲ್ ಟವರ್ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ಆಕೆ ಕುಣಿಗಲ್‌ನಲ್ಲಿರೋದು ದೃಢವಾಗಿತ್ತು. ಖಚಿತ ಮಾಹಿತಿ ಸಿಗ್ತಿದ್ದಂತೆ ತಡಮಾಡದ ಪೊಲೀಸರು ಕುಣಿಗಲ್‌ಗೆ ಬಂದಿದ್ದರು.

ಇದನ್ನೂ ಓದಿ: ಬೇಡವಾಗಿದ್ದ ಗಂಡ, ಬೇಕಿದ್ದ ಡೇವಿಡ್: ಪೊಲೀಸರ ಮುಂದೆ ಇಂಚಿಂಚು ಲವ್ ಕಹಾನಿ ಹೇಳಿದ ಪ್ರಿಯಾಂಕಾ

55
ಇಡೀ ರಾಜ್ಯದ ಗಮನ ಸೆಳೆದ ಪ್ರಿಯಾಂಕಾ

ಒಂದು ವೇಳೆ ಪ್ರಿಯಾಂಕಾ ಇದ್ಯಾವ ನಾಟಕ ಮಾಡದೇ ಡೇವಿಡ್ ಜೊತೆ ಹೋಗಿದ್ರೆ ಇದೊಂದು ಪಲಾಯನ ಕೇಸ್ ಆಗುತ್ತಿತ್ತು. ಆದ್ರೆ ಪ್ರಿಯಾಂಕಾಳ ಈ ಖತರ್ನಾಕ್ ಪ್ಲಾನ್‌ನಿಂದ ಪಲಾಯನ ಪ್ರಕರಣವೊಂದು ಇಡೀ ರಾಜ್ಯದ ಗಮನ ಸೆಳೆದಿತ್ತು. ವಿಚಾರಣೆ ಎದುರಿಸಿದ ಡೇವಿಡ್, ಒಬ್ಬನೇ ಕುಣಿಗಲ್‌ಗೆ ಹೋಗಿದ್ದಾನೆ. ಗಂಡನೊಂದಿಗೆ ಹೋಗಲು ಒಪ್ಪದ ಪ್ರಿಯಾಂಕಾಳನ್ನು ಪೊಲೀಸರು ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಗಂಡನೂ ಇಲ್ಲ, ಡೇವಿಡ್ಡೂ ಸಿಗಲಿಲ್ಲ: ಪೊಲೀಸ್ ಠಾಣೆಯಿಂದ ಹೋಗಿದ್ದೆಲ್ಲಿಗೆ ಡ್ರಾಮಾ ಕ್ವೀನ್ ಪ್ರಿಯಾಂಕಾ!

Read more Photos on
click me!

Recommended Stories