ಕಲಬುರಗಿ (ಫೆ.16): ಮಹಾಶಿವರಾತ್ರಿಯ ಸಂಭ್ರಮದ ನಡುವೆಯೇ ಕಲಬುರಗಿ ನಗರದ ರಾಮತೀರ್ಥದಲ್ಲಿರುವ ಪುರಾತನ ಶಿವನ ಮಂದಿರದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಶಿವಲಿಂಗಕ್ಕೆ ಅನ್ಯಕೋಮಿನ ಯುವಕರಿಂದ ಪುಷ್ಪಾಲಂಕಾರ ಮಾಡಿಸಿದ ದೇವಸ್ಥಾನದ ಟ್ರಸ್ಟ್‌ನ ಕ್ರಮವನ್ನು ಖಂಡಿಸಿರುವ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು, ಇಂದು ದೇವಸ್ಥಾನದ ಆವರಣವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.