ಎಲ್ಲಕ್ಕಿಂತ ಭಿನ್ನ ನೀಲಿ ನಮ್ಮ ಮೆಟ್ರೊ: ಚಾಲಕ ರಹಿತ ಸಾರಿಗೆ ಯಾವಾಗ ಆರಂಭ? ಏನೆಲ್ಲಾ ವಿಶೇಷತೆ

Published : Jun 07, 2026, 01:20 PM IST

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ರೈಲು ಬೆಂಗಳೂರಿಗೆ ಬಂದಿದೆ. ಚಾಲಕ ರಹಿತ ತಂತ್ರಜ್ಞಾನ ಮತ್ತು ವಿಶೇಷ ಲಗೇಜ್ ಸೌಲಭ್ಯ ಹೊಂದಿರುವ ಈ ಮಾರ್ಗವು ಇದೇ ವರ್ಷದ ಡಿಸೆಂಬರ್ನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

PREV
16
ನೀಲಿ ಮೆಟ್ರೋ ವಿಶೇಷತೆ

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ (Silk Board-KR Puram Metro Line) ಮಾರ್ಗವಾಗಿ ಬೆಂಗಳೂರು ವಿಮಾನ ನಿಲ್ದಾಣವರೆಗೂ ಎರಡು ಹಂತಗಳಲ್ಲಿ ಸಂಪರ್ಕ ಕಲ್ಪಿಸುವ ನೀಲಿ ಬಣ್ಣದ ನಮ್ಮ ಮೆಟ್ರೊ (Namma Metro Blue Line) ಸಂಚಾರ ಆರಂಭದಲ್ಲಿ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದಾಲೇ ಮೊನ್ನೆ ಅರ್ಥಾತ್​ ಜೂನ್ 4ರಂದು ಮೊದಲ ನೀಲಿ ಮಾರ್ಗದ ರೈಲು ಬೈಯಪ್ಪನಹಳ್ಳಿ ಡಿಪೋಗೆ ಆಗಮಿಸಿದೆ.

26
ಚಾಲಕ ರಹಿತ ಮೆಟ್ರೋ

ಇದರ ವಿಶೇಷತೆ ಎಂದರೆ ಇದು ಚಾಲಕ ರಹಿತ ಮೆಟ್ರೋ ಆಗಿರುವುದು. ಇನ್ನು ನೇರಳೆ, ಹಸಿರು ಹಾಗೂ ಹಳದಿ ಬಣ್ಣದ ನಮ್ಮ ಮೆಟ್ರೋಗಿಂತಲೂ ಭಿನ್ನವಾಗಿದೆ ಈ ನೀಲಿ ಮೆಟ್ರೊ. ವಿಮಾನ ನಿಲ್ದಾಣದಕ್ಕೆ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ ಇದರಲ್ಲಿ ವಿಶೇಷವಾಗಿರುವ ಲಗೇಜ್ ಸೌಲಭ್ಯವಿದೆ. ಸದ್ಯ ಲಗೇಜ್ ರ್‍ಯಾಕ್ ಒಳಗೊಂಡ ಮೊದಲ ಮೆಟ್ರೋ ಮಾರ್ಗ ಇದಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಈ ಮೆಟ್ರೋದ ಸೌಲಭ್ಯಗಳ ಕುರಿತಾಗ ಫೋಟೋಗಳು ವೈರಲ್​ ಆಗುತ್ತಲೇ ಇವೆ.

36
ಇನ್ನೂ ಏನೇನು ಸೌಲಭ್ಯ

ಸಹ ಪ್ರಯಾಣಿಕರಿಗೆ ತೊಂದರೆ ಆಗಬಾರದುದ ಎನ್ನುವ ಕಾರಣಕ್ಕೆ ಲಗೇಜ್​ಗಾಗಿ ರ್‍ಯಾಕ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ, ಸಾಮಾನ್ಯವಾಗಿ ಮೆಟ್ರೋದಲ್ಲಿ ಇಡುವಂತೆ ಲಗೇಜ್​ಗಳನ್ನು ಕಾಲಿನ ಅಡಿಯಲ್ಲಿ, ಬಾಗಿಲು ಸಂದಿಯಲ್ಲಿ ಇಡುವ ಪ್ರಮೇಯ ಬರುವುದಿಲ್ಲ. ಮಾತ್ರವಲ್ಲದೇ, ಉಳಿದ ಮೆಟ್ರೋಗಳಂತೆ, ಎಸಿ ವ್ಯವಸ್ಥೆ, ಪ್ರಕಾಶಮಾನವಾದ ವಿದ್ಯುತ್, ಮಾರ್ಗ ಫಲಕ, ವಿಶಾಲ ಒಳಾಂಗಣ ಇದೆ.

46
16 ಚಾಲಕ ರಹಿತ ಮೆಟ್ರೋ

ಒಟ್ಟು 16 ಚಾಲಕ ರಹಿತ ಮೆಟ್ರೋ ರೈಲುಗಳನ್ನು ಪೂರೈಸಲು ಬೆಂಗಳೂರು ಮೆಟ್ರೋ ರೈಲು ನಿಗಮವು 3177 ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ ಮೊದಲ ರೈಲು ಬಂದಿದ್ದು, ಮಾರ್ಗ ಓಪನ್ ಆಗುತ್ತಿದ್ದಂತೆ ಆರಂಭದಲ್ಲಿ ಚಾಲಕ ಸಹಿತವಾಗಿಯೇ ಈ ರೈಲುಗಳನ್ನು ಓಡಿಸಲಾಗುತ್ತದೆ. 

56
ವರ್ಷಾಂತ್ಯಕ್ಕೆ ನೀಲಿ ಮಾರ್ಗ ಕಾರ್ಯಾಚರಣೆ?

 ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್.ಪುರಂ ವರೆಗಿನ ಕಾಮಗಾರಿಯಲ್ಲಿ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಏಪಿಲ್ 2026ಹೊತ್ತಿಗೆ ಶೇಕಡಾ 86 ರಷ್ಟು ಕೆಲಸ ಪೂರ್ಣಗೊಂಡಿದ್ದು, ಇದೇ ವರ್ಷ ಡಿಸೆಂಬರ್ ಅಂತ್ಯಕ್ಕೆ ಹೊತ್ತಿಗೆ ಮಾರ್ಗ ಲೋಕಾರ್ಪಣೆ ಆಗಲಿದೆ ಎಂದು BMRCL ಮಾಹಿತಿ ನೀಡಿವೆ.

66
ಡಿಸೆಂಬರ್​ನಲ್ಲಿ ಉದ್ಘಾಟನೆ?

ಅಂದಹಾಗೆ, ಮೊದಲ ಹಂತವಾದ ಸಿಲ್‌ಬೋರ್ಡ್- ಕೆ.ಆರ್.ಪುರಂವರೆಗಿನ ಮಾರ್ಗವು ಇದೇ ಡಿಸೆಂಬರ್‍‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಲಾಗಿದೆ. ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಿಸಿದ ಈ ರೈಲು ಹೊರಗಿನಿಂದ ಸಾಮಾನ್ಯ ಮೆಟ್ರೋ ರೈಲಿನಂತೆಯೇ ಇದೆ. ಆದರೆ ಒಳಗೆ ಒಂದಷ್ಟು ಬದಲಾವಣೆ ಮಾಡಲಾಗಿದೆ. ಇದರ ಡಿಟೇಲ್​ಸ್​ಗಳನ್ನು @ever_pessimist ಖಾತೆಯಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ.

Read more Photos on
click me!

Recommended Stories