ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ; ಮನೆ, ರಸ್ತೆಗಳು ನೀರಿನಲ್ಲಿ ಜಲಾವೃತಗೊಂಡ ಹೆಚ್ಚಾದ ಆತಂಕ

Published : Jun 06, 2026, 09:59 PM IST

ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಸುರಿದ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಅವಾಂತರಗಳು ಸೃಷ್ಟಿಯಾಗಿದೆ. ರಸ್ತೆಗಳು ಜಲಾವೃತಗೊಂಡಿದೆ. ರಾಜ್ಯದ ಮಳೆಯ ಅಪ್‌ಡೇಟ್ ಇಲ್ಲಿದೆ. 

PREV
16
ಕರ್ನಾಟಕದಲ್ಲಿ ಭಾರಿ ಮಳೆ

ರಾಜ್ಯದೆಲ್ಲೆಡೆ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಕೆಲ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು ಆತಂಕ ಹೆಚ್ಚಿಸಿದೆ. ಬಾಗಲಕೋಟೆ, ಹಾವೇರಿ, ಹುಬ್ಭಳ್ಳಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಪರಿಣಾಮ ಹಳ್ಳ ಕೊಳ್ಳಗಳು ತುಂಬಿದೆ.ರಸ್ತೆಗಳು ಜಲಾವೃತಗೊಂಡಿದೆ.

26
ಬಾಗಲಕೋಟೆಯಲ್ಲಿ ಮಳೆಗೆ ರಸ್ತೆಗಳು ಜಲಾವೃತ

ಬಾಗಲಕೋಟೆಯಲ್ಲಿ ಇಂದು ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸರಿದ ಧಾರಾಕಾರ ಮಳೆಯಿಂದ ಬಾಗಲಕೋಟೆಯ ನವನಗರದ ರಸ್ತೆಗಳು ಜಲಾವೃತಗೊಂಡಿದೆ. ಜಲಾವೃತ ರಸ್ತೆಯಲ್ಲೇ ವಾಹನ ಸವಾರರು ಮನೆ ಕಡೆ ಹೊರಟಿದ್ದಾರೆ.

36
ಹಾವೇರಿ ಮಳೆಗೆ ಮನೆ ಜಲಾವೃತ

ಮಳೆಯ ಆರ್ಭಟಕ್ಕೆ ಜಮೀನಿನಲ್ಲಿರೋ ಮನೆ ನೀರಿನಲ್ಲಿ ಜಲಾವೃತಗೊಂಡ ಘಟನೆ ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದ ಬಳಿ ನಡೆದಿದೆ. ಹಳ್ಳದ ಸಮೀಪ ಮನೆ ಇರೋದರಿಂದ ಜಮೀನಿನಲ್ಲೂ ನೀರು ಸಂಗ್ರಹ ಆಗಿದೆ. ಸುತ್ತಲೂ ನೀರಿನ ಮಟ್ಟ ಏರಿಕೆಯಾಗುತ್ತಿದೆ.

46
ರಾಣೆಬೆನ್ನೂರು ಗ್ರಾಮೀಣ ಠಾಣೆಗೆ ನುಗ್ಗಿದ ನೀರು

ರಾಣೆಬೆನ್ನೂರಿನಲ್ಲಿನ ಮಳೆಗೆ ಎಲ್ಲೆಡೆ ನೀರು ನುಗ್ಗಿದೆ. ರಾಣೆಬನ್ನೂರು ಗ್ರಾಮೀಣ ಠಾಣೆಗೂ ನೀರು ನುಗ್ಗಿದೆ. ನೀರು ಹೊರ ಹಾಕಲು ಪೊಲೀಸರು ಪರದಾಡಿದ್ದಾರೆ. ಇನ್ನು ರಸ್ತೆ ಮೇಲೆ 3 ಅಡಿಯಷ್ಟು ನೀರು ನಿಂತಿದೆ. ಚರಂಡಿ ಮತ್ತು ರಸ್ತೆಗಳನ್ನ ಸರಿಯಾಗಿ ಮಾಡಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ.

56
ಹುಬ್ಬಳ್ಳಿಯಲ್ಲಿ ಮಳೆಯ ಅಬ್ಬರ.

ಹುಬ್ಬಳ್ಳಿಯಲ್ಲಿನ ಮಳೆ ಗಾಳಿಗೆ ಕೇಂದ್ರ ಸಚಿವರ ಕಚೇರಿ ಆವರಣದಲ್ಲಿ ಮರ ನೆಲಕ್ಕುರುಳಿದೆ. ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಜನ ಕಂಗಾಲಾಗಿದ್ದಾರೆ.ದಾಜಿಬಾನಪೇಟೆ ಸೇರಿದಂತೆ ಅನೇಕ ಕಡೆ ರಸ್ತೆಗಳು‌‌ ಜಲಾವೃತಗೊಂಡಿದೆ. ದ್ವಿಚಕ್ರ ವಾಹನಗಳ‌ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

66
ರಾಜ್ಯದಲ್ಲಿ ಉತ್ತಮ

ಇನ್ನು ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಹೆಲೆವೆಡೆ ಅತೀಯಾದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.

Read more Photos on
click me!

Recommended Stories