ಸರಸ್ವತಿ ಸ್ವಾಮೀಜಿ ಮಹಿಳೆಯಿಂದ ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಸ್ವಾಮೀಜಿ ತನ್ನನ್ನು ಬ್ಲಾಕ್‌ಮೇಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಧಾರವಾಡ: ಜಿಲ್ಲೆಯ ಕವಲಗೇರಿ ಮಠದ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿಯ ಕಾಮ ಪುರಾಣ ಬಯಲಾಗಿದೆ. ಮಠದ ಆವರಣದಲ್ಲಿ ಬೆತ್ತಲೆಯಾಗಿ ಮಹಿಳೆಯಿಂದ ಎಣ್ಣೆ ಮಸಾಜ್ ಮಾಡಿಸಿಕೊಂಡಿರುವ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದ್ದು, ಸ್ವಾಮೀಜಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
27
ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಗ್ರಾಮಸ್ಥರ ಮುಂದೆ ಸನ್ಯಾಸಿಯಂತೆ ಕಾಣಿಸಿಕೊಂಡಿದ್ದ ಸರಸ್ವತಿ ಸ್ವಾಮಿಗೆ 60 ವರ್ಷವಾದ್ರು ಚಪಲ ಮಾತ್ರ ಕಡಿಮೆಯಾಗಿಲ್ಲ. ಗ್ರಾಮಸ್ಥರ ಆಧ್ಯಾತ್ಮಿಕ ಕೇಂದ್ರವಾಗಿದ್ದ ಮಠವನ್ನೇ ಸರಸ್ವತಿ ಸ್ವಾಮಿ ಮಸಾಜ್ ಪಾರ್ಲರ್ ಆಗಿ ಮಾಡಿಕೊಂಡಿದ್ದು ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವನ್ನುಂಟು ಮಾಡಿದೆ.
37
ಬೆತ್ತಲೆಯಾಗಿ ಎಣ್ಣೆ ಮಸಾಜ್
ಸಂಪೂರ್ಣ ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸಿಕೊಂಡ ಸರಸ್ವತಿ ಸ್ವಾಮಿ, ಮಹಿಳೆ ಮುಂದೆಯೇ ನಗ್ನವಾಗಿ ಸ್ನಾನ ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಎಣ್ಣೆ ಹಚ್ಚಿಕೊಂಡ ನಂತ್ರ ಸ್ವಾಮಿಗೆ ಬಿಸಿನೀರಿನ ಸ್ನಾನ ಬೇಕೇ ಬೇಕಂತೆ. ಇದೀಗ ಕಳ್ಳ ಸ್ವಾಮಿಯ ಕಾಮದಾಟದ ಹುಚ್ಚಾಟ ಎಲ್ಲರ ಮುಂದೆ ಖುಲ್ಲಂ ಖುಲ್ಲಾ ಆಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಸರಸ್ವತಿ ಸ್ವಾಮಿ ವಿರುದ್ಧ ಕವಲಗೇರಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ನಂತರ ಸ್ವಾಮಿಯನ್ನು ಮಠದಿಂದಲೂ ಹೊರಗೆ ಹಾಕಲಾಗಿತ್ತು. ಆ ಬಳಿಕ ಗ್ರಾಮದ ಮತ್ತೊಂದು ಗುಂಪು ಸ್ವಾಮಿಯನ್ನು ಮತ್ತೆ ಮಠಕ್ಕೆ ಕರೆದುಕೊಂಡು ಬಂದಿದ್ದಾರೆ.
57
ವಿಡಿಯೋ ವೈರಲ್ ಆಗಿದ್ದು ಹೇಗೆ?
ಸುಮಾರು 5 ಜನರ ಗುಂಪು ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮಿಯನ್ನು ಬ್ಲಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಗ್ರಾಮದ ವ್ಯಕ್ತಿಯೊಬ್ಬರ ಸಮ್ಮುಖದಲ್ಲಿ 10 ಲಕ್ಷಕ್ಕೆ ಡೀಲ್ ಓಕೆಯಾಗಿದೆ. ನಂತರ ನಾಲ್ವರನ್ನು ಮಠಕ್ಕೆ ಕರೆಸಿಕೊಂಡ ಸ್ವಾಮಿ 7 ಲಕ್ಷ ರೂ. ನೀಡಿದ್ದು, ಬಾಕಿ ಹಣ ನೀಡದ್ದಕ್ಕೆ ಗ್ಯಾಂಗ್ ವಿಡಿಯೋ ವೈರಲ್ ಮಾಡಿದೆ.
67
ಮಹಿಳೆ ಸ್ವಲ್ಪ ಪರಿಚಯ ಎಂದ ಸ್ವಾಮಿ
ಇನ್ನು ಈ ಎಲ್ಲಾ ಘಟನೆ ಸಂಬಂಧ ಕಾಮುಕ ಸ್ವಾಮಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದು, ನನಗೆ ಮೋಸ ಆಗಿದೆ ಎಂದು ಹೇಳಿಕೊಂಡಿದ್ದಾನೆ. ನನ್ನಿಂದ ಹಣ ಪಡೆದವರು ಯಾರು ಅನ್ನೋದು ಗೊತ್ತಿಲ್ಲ. ಮಹಿಳೆ ನನಗೆ ಸ್ವಲ್ಪ ಪರಿಚಯ ಎಂದು ಹೇಳಿದ್ದಾನೆ. ಈ ವಿಡಿಯೋಗಳನ್ನು ಮಾಡಿದ್ಯಾರು ಎಂಬುವುದ ಸಹ ನನಗೆ ಗೊತ್ತಿಲ್ಲ ಎಂದಿದ್ದಾನೆ.
ಯಾರು ವಿಡಿಯೋ ಮಾಡಿದ್ರು ನನಗೆ ಗೊತ್ತಿಲ್ಲ. ಈಗ ಆ ಹುಡುಗರು ನಾವು ವಿಡಿಯೋ ಮಾಡಿಲ್ಲ ಅಂತ ಹೇಳ್ತಿದ್ದಾರೆ. ಈ ಬಗ್ಗೆ ನಮಗೆ ಏನು ಗೊತ್ತಿಲ್ಲ. ಆ ಗ್ಯಾಂಗ್ 4 ಮಂದಿ 5 ಲಕ್ಷ ಕೊಟ್ಟೆ. ಮಠಕ್ಕೆ ಬಂದು ಹಣ ತೆಗೆದುಕೊಂಡ್ರು. ಈಗ ಕೇಳಿದ್ರೆ ಹಣ ತೊಗೊಂಡಿಲ್ಲ ಅಂತ ಹೇಳ್ತಿದ್ದಾರೆ. ಈಗ ನನಗೆ ಮೋಸ ಆಗಿದೆ ಎಂದು ಹೇಳುತ್ತಿರುವ ಕಳ್ಳ ಸರಸ್ವತಿ ಸ್ವಾಮಿ, ಬ್ಲಾಕ್‌ಮೇಲ್ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾನೆ.