ಕೋವಿಡ್ ಸೊಂಕಿನಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡುಂತಹ ಬಡತನದ ರೇಖೆಗಿಂದ ಕೆಳಗಿರುವ ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ(compensation) ನೀಡಲಾಗುತ್ತಿದೆ. ಈಗ ಮೊದಲನೆ ಕಂತು ಬಿಡುಗಡಯಾಗಿದ್ದು, 13 ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ದೇಶದಲ್ಲಿಯೇ ಮೊದಲ ಬರಿ ರೈತರೆ ಮಕ್ಕಳಿಗೆ ವಿದ್ಯಾರ್ಥಿ ವೇತನ(Scholarships) ಪ್ರಾರಂಭಿಸುವ ಮೂಲಕ ರೈತರ ಮಕ್ಕಳು ಶೈಕ್ಷಣಿಕವಾಗಿ ಉನ್ನತಿಯಾಗಲು ಸಹಕಾರಯಾಗಲಿದೆ ಎಂದ ಶಾಸಕ ಮತ್ತಿಮುಡ
ತಹಶೀಲ್ದಾರ ಸುರೇಶ ವರ್ಮಾ ಮಾತನಾಡಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ(Death) 13 ಕುಟುಂಬಕ್ಕೆ ಮೊದಲೆನೆ ಹಂತದ ಚೆಕ್ ನೀಡಲಾಗುತ್ತಿದೆ. ಇನ್ನೂ 34 ಜನರಿಗೆ ಮಾಹಿತಿ ನೀಡಲಾಗಿದೆ. ಇನ್ನೂ ಎರಡನೇ ಹಂತದಲ್ಲಿ ಉಳಿದ ಫಲಾನುಭವಿಗಳಿಗೆ ಚೆಕ್ ನೀಡಲಾಗುವದು ಎಂದು ಹೇಳಿದ ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ಅಫಜಲ್‌ಪುರಕರ್
ನಗರ ಸಭೆ ಅಧ್ಯಕ್ಷೆ ಅಂಜಲಿ ಕಂಬಾನೂರ, ತಹಶೀಲ್ದಾರ ಸುರೇಶ ವರ್ಮಾ, ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾಗೀರತಿ ಗುನ್ನಾಪುರ, ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ, ವಾಡಿ ಶಹಾಬಾದ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಬಾವಿ ಇದ್ದರು. ವಿವಿಧ ಮಾಶಾಸನಗಳ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಉಪ ತಹಸೀಲ್ದಾರ್ ಮಲ್ಲಿಕಾರ್ಜುನ ರೆಡ್ಡಿ, ಸಿಡಿಪಿಒ ಬಿ.ಎಸ್. ಹೊಸ್ಮನಿ, ನಗರ ಸಭೆ ಕಂದಾಯ ಅಧಿಕಾರಿ ಸುನೀಲ ವೀರಶೆಟ್ಟಿ, ಎಇಇ ಪುರುಷೋತ್ತಮ, ಎಇ ಶಾಂತರೆಡ್ಡಿ, ತಾಪಂ.ಮಾಜಿ ಸದಸ್ಯ ನಿಂಗಣ್ಣ ಹುಳಗೋಳ, ನಗರ ಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ನಾಗರಾಜ ಮೇಲಗಿರಿ, ಅಣ್ಣಪ್ಪ ದಸ್ತಾಪುರ, ಭೀಮಯ್ಯ ಗುತ್ತೇದಾರ, ರವಿ ರಾಠೋಡ, ದತ್ತಾ ಫಂಡ, ವಿರೇಶ ಬಂದಳ್ಳಿ ಇದ್ದರು.