ರಿದಿತ್ ಹೆಗಡೆ ತಂದೆ ರಾಘವೇಂದ್ರ ಹೆಗಡೆ ಹೈದರಾಬಾದ್‌ನ(Hyderabad) ಖಾಸಗಿ ಕಂಪನಿಯೊಂದರಲ್ಲಿ ವಿಜ್ಞಾನಿ(Scientist), ತಾಯಿ ರಾಧಿಕಾ ಹೆಗಡೆ ಗೃಹಿಣಿ. ಮೂಲತಃ ಇವರು ಉತ್ತರ ಕನ್ನಡ(Uttara Kannada) ಜಿಲ್ಲೆಯ ಯಲ್ಲಾಪುರ(Yellapur) ತಾಲೂಕಿನ ಭರತನಹಳ್ಳಿ ಸಮೀಪದ ದಂಡಿಗೆಮನೆ ನಿವಾಸಿಗಳು.
ರಿದಿತ್ ಇಂಗ್ಲಿಷ್(English) ಮತ್ತು ಕನ್ನಡ(Kannada) ವರ್ಣಮಾಲೆಗಳು, ವಾರಗಳು, ತಿಂಗಳುಗಳು, ದೇಹದ ಅಂಗಾಂಗಗಳು, 1-20ರ ತನಕ ಇಂಗ್ಲಿಷ್, 1-10 ಕನ್ನಡ ಮತ್ತು ಹಿಂದಿ(Hindi) ಸಂಖ್ಯೆಗಳನ್ನು ಹೇಳುತ್ತಾನೆ. 66ಕ್ಕೂ ಹೆಚ್ಚು ಅಡುಗೆ ಮತ್ತು ಮನೆ ಬಳಕೆ ಸಾಮಗ್ರಿಗಳು, 17 ಹಣ್ಣು ಮತ್ತು 24 ತರಕಾರಿಗಳು, 12 ಪಕ್ಷಿ ಮತ್ತು 28 ಪ್ರಾಣಿಗಳು, 17 ಇಲೆಕ್ಟ್ರಾನಿಕ್ ವಸ್ತುಗಳು, 21 ವಾಹನಗಳು, 15 ಬಣ್ಣಗಳನ್ನು ಗುರುತಿಸುತ್ತಾನೆ.
8ಕ್ಕೂ ಹೆಚ್ಚು ಇಂಗ್ಲಿಷ್ ಹಾಡುಗಳು, 6 ಸಂಸ್ಕೃತ ಶ್ಲೋಕಗಳು, 2 ಕನ್ನಡ ಹಾಡುಗಳು, 2 ಕನ್ನಡ ಕಥೆಗಳನ್ನು ಅರಳು ಹುರಿದಂತೆ ಹೇಳುತ್ತಾನೆ. ನಮ್ಮ ದೇಶದ ಹೆಸರು, ಪ್ರಧಾನ ಮಂತ್ರಿ, ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಹೂವಿನ ಹೆಸರುಗಳನ್ನೂ ಹೇಳುತ್ತಾನೆ.
ಒಂದು ವರ್ಷ ತುಂಬುವುದರೊಳಗೆ ನೋಡಿದ, ಕೇಳಿದ ವಸ್ತು, ವಿಷಯವನ್ನು ನೆನಪಿನಲ್ಲಿಟ್ಟುಕೊಂಡು ಅನುಕರಣೆ ಮಾಡುತ್ತಿದ್ದ. ಈತನ ನೆನಪಿನ ಶಕ್ತಿ ಹಾಗೂ ಸಾಧನೆ ಬಗ್ಗೆ ತುಂಬ ಖುಷಿಯಾಗಿದೆ ಅಂತ ರಿದಿತ್ ಹೆಗಡೆ ತಾಯಿ ರಾಧಿಕಾ ಹೆಗಡೆ ತಿಳಿಸಿದ್ದಾರೆ.