Rare Fish: ಮನುಷ್ಯನ ಮುಖ ಹೋಲುವ ಮೀನು: ಹಲ್ಲಿರುವ ಫಿಶ್‌ ಎಂದಾದ್ರೂ ನೋಡಿದ್ದೀರಾ?

First Published | Dec 8, 2021, 10:09 AM IST

ಕೊಪ್ಪಳ(ಡಿ.08):  ಮನುಷ್ಯನ ಮುಖದ ಹೋಲಿಕೆ ಇರುವ ಮೀನು(Fish) ಜಿಲ್ಲೆಯಲ್ಲಿ ಪತ್ತೆಯಾಗಿದೆ. ಕೊಪ್ಪಳ(Koppal) ಜಿಲ್ಲೆಯ ಗಂಗಾವತಿ(Gangavati) ಆನೆಗೊಂದಿ, ವಿರುಪಾಪುರಗಡ್ಡಿ ಬಳಿಯ ತುಂಗಭದ್ರಾ ನದಿಯಲ್ಲಿ(Tungabhadra River) ಮೀನು ಹಿಡಿಯುವ ವೇಳೆ ಈ ಅಪರೂಪದ ಮೀನು ಪತ್ತೆಯಾಗಿದೆ.

ಮೀನುಗಾರ(fisherman) ರಫಿ ಅವರ ಬಲೆಯಲ್ಲಿ ಈ ಮೀನು ಸಿಕ್ಕಿದ್ದು, ಇದರ ಬಾಯಿಯಲ್ಲಿ ಹಲ್ಲುಗಳು(Teeth) ಸಹ ಕಂಡು ಬಂದಿದೆ. ಇದು ಮೀನುಗಾರರಿಗೆ ಅಚ್ಚರಿ ಮೂಡಿಸಿದೆ. 

ಕೊಪ್ಪಳ ಜಿಲ್ಲೆಯ ಗಂಗಾವತಿ ಆನೆಗೊಂದಿ(Anegondi), ವಿರುಪಾಪುರಗಡ್ಡಿ(Virupapuragadde) ಬಳಿಯ ತುಂಗಭದ್ರಾ ನದಿಯಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಸಿಕ್ಕ ಅಪರೂಪದ ಮೀನು 

Tap to resize

ಇಲ್ಲಿಯವರೆಗೆ ಬಾಯಲ್ಲಿ ಹಲ್ಲಿರುವ ಮೀನು ನೋಡೇ ಇಲ್ಲ ಅಂತ ಮೀನುಗಾರರು ಹೇಳಿದ್ದಾರೆ. ಅಪರೂಪಕ್ಕೆ ಸಿಗುವ ಈ ಮೀನನ್ನು ರೂಪ್‌ಚಾಂದ್(Roopchand) ಅಥವಾ ಪಕು(Paku) ಎಂದು ಕರೆಯಲಾಗುತ್ತದೆ. 

ಸದ್ಯ ಮನುಷ್ಯನ ಮುಖ ಹೋಲುವ ಅಪರೂಪದ ಮೀನಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಸಖತ್‌ ವೈರಲ್‌(Viral) ಆಗುತ್ತಿದೆ. 

Latest Videos

click me!