ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ
First Published | Jan 16, 2023, 9:42 PM ISTಚಿಕ್ಕಮಗಳೂರು (ಜ.16): ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ತೆರಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವರ ಅಪೇಕ್ಷೆಯಂತೆ ಜ್ಞಾನೇಂದ್ರ ರಿಂದ ಶಬರಿಮಲೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಆರು ಏಳು ವರ್ಷಗಳ ಹಿಂದೆ ಅಯ್ಯಪ್ಪ ಮಾಲದಾರಿಯಾಗಿ ಶಬರಿಮಲೆ ಯಾತ್ರೆ ಮಾಡುವ ಸಂಕಲ್ಪ ತೊಟ್ಟಿದ್ದ ಆರಗ ಜ್ಞಾನೇಂದ್ರ ಇಂದು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಇರುಮುಡಿ ಹೊತ್ತು ತೆರಳಿದ್ದಾರೆ. ಸ್ವತಃ ಜ್ಞಾನೇಂದ್ರರವರಿಗೂ ನಾನು ಅಯ್ಯಪ್ಪನಾ ಭಕ್ತನಾಗಿ ಅಯ್ಯಪ್ಪ ಸ್ವಾಮಿ ಭಕ್ತರ ಭಕ್ತಿಯಲ್ಲಿ ಕೈ ಜೊಡಿಸಬೇಕು ಎಂಬ ಅಭಿಲಾಷೆಯಿತ್ತು.