ಬೆಳಗಾವಿ ಗಡಿಯಲ್ಲಿ ಕನ್ನಡ ಡಿಂಡಿಮ, ನಿಪ್ಪಾಣಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ
First Published | Dec 12, 2022, 6:42 PM ISTಬೆಳಗಾವಿ (ಡಿ.12): ನಾವ್ ಕರ್ನಾಟಕ ಪ್ರವೆಶ ಮಾಡ್ತಿವಿ ಬೆಳಗಾವಿ ನಮ್ದು ಅನ್ನೊ ಮಹಾ ನಾಯಕರ ಹುಚ್ಚಾಟದ ಹೇಳಿಕೆಗಳ ನಡುವೆ ಗಡಿಯಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುವುದರ ಮೂಲಕ ಗಡಿಯಲ್ಲಿ ಕನ್ನಡದ ಮನಸುಗಳು ಗಟ್ಟಿಯಾಗಿವೆ ಎಂಬ ಸಂದೇಶ ಸಾರಿದ್ದಾರೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಖ್ಯಾತ ಹಿರಿಯ ನಟ ನಿರ್ದೇಶಕ ಟಿ ಎಸ್ ನಾಗಾಭರಣ ಭಾಗವಹಿಸಿದ್ದರು. ನಿಪ್ಪಾಣಿಯ ಪ್ರಥಮಾಚಾರ್ಯ ಶಾಂತಿಸಾಗರ ಪ್ರಜ್ಞಾಸಾಗರ ಸಭಾ ಮಂಟಪದಲ್ಲಿ ನಡೆದ ಸಮ್ಮೇಳನದಲ್ಲಿ ಸಹಸ್ರಾರು ಕನ್ನಡದ ಮನಸುಗಳು ಒಗ್ಗೂಡಿದ್ದವು. ಈ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಹಚ್ಚೇವು ಕನ್ನಡದ ದೀಪ ಹಾಡು ಹಾಡಿ ನೆರೆದ ಕನ್ನಡ ಮನಸುಗಳನ್ನು ಹುರಿದುಂಬಿಸಿದರು.. ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಒಂದು ಝಲಕ್ ಇಲ್ಲಿದೆ ನೋಡಿ...