ಗೆಳೆಯರ ಶವ ನೋಡಿ ಶವಾಗಾರದಿಂದ ಹೊರ ಬರುತ್ತಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ ಸ್ನೇಹಿತ

Published : Jan 22, 2026, 10:04 AM IST

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಸ್ನೇಹಿತರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟ ಗೆಳೆಯರ ಶವವನ್ನು ನೋಡಲು ಬಂದ ಮತ್ತೋರ್ವ ಸ್ನೇಹಿತ, ಆಘಾತದಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

PREV
14
ಹೃದಯ ವಿದ್ರಾವಕ ಘಟನೆ

ಅಪಘಾತದಲ್ಲಿ ಮೃತ ಗೆಳೆಯರ ಶವ ನೋಡಿ ಮತ್ತೋರ್ವ ಸ್ನೇಹಿತ ಹೃದಯಾಘಾತದಿಂದ ನಿಧನವಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಮಾಗಡಿಯಲ್ಲಿ ನಡೆದಿದೆ.

24
ಬೈಕ್ ಅಪಘಾತದಲ್ಲಿ ಗೆಳೆಯರ ಸಾವು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಬೆಟ್ಟದಾಸಿ ಪಾಳ್ಯದ ಬಳಿ ನಡೆದಿದೆ. ಇದೇ ವೇಳೆ, ಶವಾಗಾರದಲ್ಲಿ ಇಟ್ಟಿದ್ದ ಮೃತದೇಹ ನೋಡಿದ ಸ್ನೇಹಿತ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ.

34
ಮೂವರ ಪೈಕಿ ಇಬ್ಬರ ಸಾವು

ಮೂವರು ಸ್ನೇಹಿತರು ಬೈಕ್‌ನಲ್ಲಿ ಮಾಗಡಿಗೆ ತೆರಳುತ್ತಿದ್ದರು. ಬೆಟ್ಟದಾಸಿ ಪಾಳ್ಯದ ಬಳಿ ವೇಗವಾಗಿ ಬಂದ ಬೈಕ್‌, ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿ ರಭಸಕ್ಕೆ ಮಂಜುನಾಥ್ (33), ನಾಗರಾಜು (55) ಸ್ಥಳದಲ್ಲೇ ಮೃತಪಟ್ಟರು. ಬೈಕ್‌ನಲ್ಲಿದ್ದ ಮತ್ತೋರ್ವ ಸತೀಶ್ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇದನ್ನೂ ಓದಿ: ಕಟಕಟೆಯಲ್ಲಿ ಸಾಕ್ಷಿ ಹೇಳುತ್ತಿದ್ದ ವ್ಯಕ್ತಿ, ಪಲ್ಲಕ್ಕಿ ಹೊತ್ತಿದ್ದ ಅರ್ಚಕ ಹೃದಯಾಘಾತದಿಂದ ಸಾವು

44
ಶವಾಗಾರದಿಂದ ಹೊರ ಬರುತ್ತಲೇ ಸಾವು

ಮೃತದೇಹಗಳನ್ನು ಮಾಗಡಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಈ ಮಧ್ಯೆ, ಸ್ನೇಹಿತರ ಮೃತದೇಹ ನೋಡಲು ಬಂದ ಶೇಖರ್‌ ಎಂಬಾತ ಮೃತದೇಹ ನೋಡಿ ಹೊರ ಬರುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾದರು. ತಕ್ಷಣವೇ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇದನ್ನೂ ಓದಿ: ಧೂಮಪಾನಕ್ಕಿಂತಲೂ ಇದು ಡೇಂಜರ್ : ಸಾವನ್ನಪ್ಪಿದವರು ಅಧಿಕ

Read more Photos on
click me!

Recommended Stories