ಮರದಿಂದ ಬಿದ್ದವನಿಗೆ ಚಿಕಿತ್ಸೆ ಕೊಡಿಸದೇ ತಂತಿ ಕಟ್ಟಿ ಬಾವಿಗೆಸೆದ ಸ್ನೇಹಿತರಿಬ್ಬರ ಬಂಧನ

Published : Jan 22, 2026, 09:02 AM IST

ನಾಪತ್ತೆಯಾಗಿದ್ದ ವಿನೋದ್ ಎಂಬ ಯುವಕನ ಶವ ಬಾವಿಯಲ್ಲಿ ಪತ್ತೆಯಾಗಿದೆ. ಹೊಸ ವರ್ಷದ ಪಾರ್ಟಿ ವೇಳೆ ಮರದಿಂದ ಬಿದ್ದು ಗಾಯಗೊಂಡಿದ್ದ ವಿನೋದ್‌ನನ್ನು, ಆಸ್ಪತ್ರೆಗೆ ಸೇರಿಸುವ ಭಯದಿಂದ ಆತನ ಸ್ನೇಹಿತರಾದ ಸುದೀಪ್ ಮತ್ತು ಪ್ರಜ್ವಲ್ ಕಲ್ಲಿಗೆ ಕಟ್ಟಿ ಬಾವಿಗೆ ಎಸೆದು ಕೊ*ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

PREV
15
ಶವವಾಗಿ ಪತ್ತೆಯಾದ ಪ್ರಕರಣ

ನಾಪತ್ತೆಯಾಗಿದ್ದ ಯುವಕ ವಿನೋದ್ ಬಾವಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೃತ ವಿನೋದ್ ಸ್ನೇಹಿತರಾದ ಸುದೀಪ್(19), ಪ್ರಜ್ವಲ್(19) ಬಂಧಿತರು.

25
ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮ

ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ವಿನೋದ್ ಜನವರಿ 1ರಂದು ಮನೆಯಿಂದ ಹೋದವನು ವಾಪಸ್ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡು ಆತನ ತಾತಾ ವೆಂಕಟಸ್ವಾಮಿ ಕುದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

35
ಸುದೀಪ್ ಮತ್ತು ಪ್ರಜ್ವಲ್

ಜನವರಿ 17ರಂದು ವಾಜರಹಳ್ಳಿಯ ರುದ್ರಮ್ಮರಿಗೆ ಸೇರಿದ ಜಮೀನಿನ ಬಾವಿಯಲ್ಲಿ ಪತ್ತೆಯಾದ ವಿನೋದ್ ಶವ ತಂತಿಬೇಲಿ ಸುತ್ತಿ, ಅದಕ್ಕೆ ಕಲ್ಲಿನ ಕಂಬದೊಂದಿಗೆ ಕಟ್ಟಿದ್ದರು. ಮೃತನ ತಾತ ವೆಂಕಟಸ್ವಾಮಿ ಮೃತ ವಿನೋದ್ ಸ್ನೇಹಿತರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿನೋದ್ ನ ಸ್ನೇಹಿತರಾದ ಸುದೀಪ್ ಮತ್ತು ಪ್ರಜ್ವಲ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊ*ಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

45
ತೆಂಗಿನ ಮರದಿಂದ ಬಿದ್ದ ಗೆಳೆಯ

ಜನವರಿ 1ರಂದು ಹೊಸ ವರ್ಷದ ಪಾರ್ಟಿ ಮಾಡಲು ವಿನೋದ್ ಸೇರಿ ಮೂವರು ವಾಜರಹಳ್ಳಿಗೆ ತೆರಳಿ ಮದ್ಯ ಸೇವಿಸಿದ್ದಾರೆ. ಈ ವೇಳೆ ತೆಂಗಿನ ಮರದಲ್ಲಿ ಎಳ ನೀರು ಕೀಳಲು ಮರ ಹತ್ತಿದ ವಿನೋದ್ ಕೆಳಗೆ ಬಿದ್ದ ರಭಸಕ್ಕೆ ಬೆನ್ನು ಮೂಳೆ ಮುರಿದುಕೊಂಡು ಒದ್ದಾಡಿದ್ದಾನೆ.

ಇದನ್ನೂ ಓದಿ: ಭದ್ರಾವತಿಯಲ್ಲಿ ದಂಪತಿಗಳ ಅನುಮಾನಾಸ್ಪದ ಸಾವು: ವೈದ್ಯರು ನೀಡಿದ ಇಂಜೆಕ್ಷನ್ ಪ್ರಾಣಕ್ಕೆ ಕುತ್ತು ತಂದಿತೇ?

55
ಕಲ್ಲಿನ ಕಂಬದಿಂದ ಕಟ್ಟಿ ಬಾವಿಗೆ ಎಸೆದಿದ್ರು

ವಿನೋದ್ ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಮದ್ಯದ ಅಮಲಿನಲ್ಲಿದ್ದ ಸುದೀಪ್ ಮತ್ತು ಪ್ರಜ್ವಲ್ ಗಾಬರಿಗೊಂಡಿದ್ದಾರೆ. ಗಾಯಾಳು ವಿನೋದ್ ನನ್ನು ತಂತಿ ಬೇಲಿಯಿಂದ ಸುತ್ತಿದ್ದಲ್ಲದೆ ಕಲ್ಲಿನ ಕಂಬದಿಂದ ಕಟ್ಟಿ ಬಾವಿಗೆ ಎಸೆದು ಪರಾರಿಯಾಗಿದ್ದರು.

ಇದನ್ನೂ ಓದಿ: ಧಾರವಾಡ: ಹೂತಿದ್ದ ಶವ ಹೊರಕ್ಕೆ, ಹೃದಯಾಘಾತವಲ್ಲ, ಹತ್ಯೆ? ಬಾಬಾಜಾನ್ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

Read more Photos on
click me!

Recommended Stories