Hubballi: ಕುಡುಕ ಚಾಲಕನ ಅವಾಂತರ, ಫ್ಲೈಓವರ್‌ನಿಂದ ಕೆಳಗೆ ಬಿದ್ದ ಆ್ಯಂಬುಲೆನ್ಸ್‌..!

First Published | Jan 23, 2022, 9:13 AM IST

ಹುಬ್ಬಳ್ಳಿ(ಜ.23): ಬಿಆರ್‌ಟಿಎಸ್(BRTS) ಸೇತುವೆಯಿಂದ(Flyover) ಆ್ಯಂಬುಲೆನ್ಸ್‌ವೊಂದು(Ambulance) ಉರುಳಿ ಬಿದ್ದ ಘಟನೆ ಇಲ್ಲಿನ ಉಣಕಲ್‌ನಲ್ಲಿ‌ ನಿನ್ನೆ(ಶನಿವಾರ) ರಾತ್ರಿ ನಡೆದಿದೆ.‌ ಆ್ಯಂಬುಲೆನ್ಸ್ ಚಾಲಕನ ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನವನಗರದಲ್ಲಿನ ಕ್ಯಾನ್ಸರ್ ಆಸ್ಪತ್ರೆಯಲ್ಲಿನ(Cancer Hospital) ರೋಗಿಯೊಬ್ಬರನ್ನು(Patient) ಕಿಮ್ಸ್‌ನಲ್ಲಿ(KIMS) ದಾಖಲಿಸಿ ವಾಪಸ್ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. 

ಆ್ಯಂಬುಲೆನ್ಸ್ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ. ನಗರದ ಕಿಮ್ಸ್‌ನಿಂದ ವಾಪಸ್‌ ತೆರಳುತ್ತಿದ್ದಾಗ ಉಣಕಲ್ ಕ್ರಾಸ್ ಸೇತುವೆ ಬಳಿ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಉರುಳಿ ಬಿದ್ದಿದೆ. 

Tap to resize

ಘಟನೆ ಬಳಿಕ ಆ್ಯಂಬುಲೆನ್ಸ್‌ನಲ್ಲಿದ್ದ ಚಾಲಕ(Driver) ಹಾಗೂ ಸಿಬ್ಬಂದಿ(Staff) ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಆ್ಯಂಬುಲೆನ್ಸ್ ಚಾಲಕ ಕುಡಿದ ಮತ್ತಿನಲ್ಲಿ ನಡೆದ ಅವಘಡದಿಂದ ಭಾರೀ ದುರಂತವೊಂದು ತಪ್ಪಿದೆ. ಅದೃಷ್ಟವಷಾತ್‌ ಆ್ಯಂಬುಲೆನ್ಸ್ ರೋಗಿಗಳು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

Latest Videos

click me!