'ಘರ್ ವಾಪಸಿ'  ಹಿಂದು ಧರ್ಮಕ್ಕೆ ಮರಳಿ ಬಂದ ಉತ್ತರ ಕನ್ನಡದ ಕುಟುಂಬಗಳು

First Published | Dec 2, 2020, 6:37 PM IST

ಉತ್ತರಕನ್ನಡ(ಡಿ. 02) ಬಿಜೆಪಿಯ ‘ಘರ್ ವಾಪಸಿ’ ಮೂಲಕ  5 ಕುಟುಂಬಗಳು ಸ್ವಧರ್ಮಕ್ಕೆ ಮರಳಿವೆ. ಹಲವಾರು ಕಾರಣಗಳಿಗಾಗಿ ಮಾತೃ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರವಾಗಿದ್ದ 5 ಕುಟುಂಬ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮದ ಮೂಲಕ  ಸ್ವಧರ್ಮಕ್ಕೆ ಬಿಜೆಪಿ ಮುಖಂಡರು ಅವರನ್ನು ಬರಮಾಡಿಕೊಂಡಿದ್ದಾರೆ. 

ಹಳಿಯಾಳ ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು. ತಾಲೂಕಿನ ಗ್ರಾಮಾಂತರ ಭಾಗದ ರವಿ ಹಂಚಿನಮನಿ, ರಮೇಶ ಮೇತ್ರಿ, ಈರಪ್ಪಾ ಮೇತ್ರಿ ಸೇರಿದಂತೆ 5 ಕುಟುಂಬದ 23 ಸದಸ್ಯರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆದರು.
undefined
ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ನಾಯಕರ ಯಶಸ್ವಿ ಮನವೊಲಿಕೆಯ ಕಾರಣ 23 ಮಂದಿ ಮಾತೃ ಧರ್ಮಕ್ಕೆ ಸೇರ್ಪಡೆಯಾದರು.
undefined

Latest Videos


ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತಕೋರಲಾಯಿತು.
undefined
ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತಕೋರಲಾಯಿತು.
undefined
ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್ ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
undefined
click me!