ತುಂಗಾ ನದಿಯಲ್ಲಿ ಶೋಭಾ ಪುಣ್ಯಸ್ನಾನ, ಲೋಕಕಲ್ಯಾಣಕ್ಕೆ ಪ್ರಾರ್ಥನೆ

First Published | Dec 1, 2020, 7:48 PM IST

ಚಿಕ್ಕಮಗಳೂರು(ಡಿ.  01)  ಸಂಸದೆ ಶೋಭಾ ಕರಂದ್ಲಾಜೆ ತುಂಗಾ ನದಿಯಲ್ಲಿ ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿದ್ದು ಲೋಕದ ಸನ್ಮಂಗಳಕ್ಕೆ ಪ್ರಾರ್ಥನೆ ಮಾಡಿದ್ದಾರೆ.  ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶ್ರೀ ವಿಭಾಂಡಕ ಮಹರ್ಷಿಗಳು, ಶ್ರೀ ಶಂಕರ ಭಾಗವತ್ಪಾದಚಾರ್ಯರು ತಪಸ್ಸು ಮಾಡಿದ ಪರಮ ಪವಿತ್ರವಾದ ತುಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಯಿತು.
ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿ ಲೋಕದ ಸನ್ಮಂಗಳಕ್ಕೆ ಪ್ರಾರ್ಥಿಸಲಾಯಿತು ಎಂದು ಶೋಭಾ ತಿಳಿಸಿದ್ದಾರೆ.
Tap to resize

ತುಂಗಾ ನದಿಯು ಶೃಂಗೇರಿ ಕ್ಷೇತ್ರದ ಸಮೀಪ ಗಂಗಾಮೂಲ ಎಂಬಲ್ಲಿ ವರಾಹ ಮೂರ್ತಿಯಿಂದ ಉದ್ಭವಿಸಿ ಶ್ರೀಶೈಲ ಕ್ಷೇತ್ರದ ಸಮೀಪ ಸಂಗಮೇಶ್ವರದಲ್ಲಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ರಾಜಕಾರಣದ ನಡುವೆ ಬಿಡುವು ಮಾಡಿಕೊಂಡುನ ಲೋಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದಾರೆ.

Latest Videos

click me!