ಕೆಲಸಗಳನ್ನು ವೈಟ್ ಕಾಲರ್, ರೆಡ್ ಕಾಲರ್ ಎಂದು ಬಣ್ಣಗಳಿಂದ ಗುರುತಿಸೋದು ಯಾಕೆ?

Published : Jan 13, 2026, 06:54 PM IST

ಕೆಲಸಗಳನ್ನು ವೈಟ್ ಕಾಲರ್ , ಬ್ಲೂ ಕಾಲರ್, ರೆಡ್ ಕಾಲರ್ ಎಂದು ವಿಂಗಡಿಸುವುದನ್ನು ನೀವು ನೋಡಿರಬಹುದು. ಆದರೆ ಇದರ ಅರ್ಥ ಏನು? ಯಾಕೆ ಕೆಲಸಗಳನ್ನು ಈ ರೀತಿಯಾಗಿ ವಿಂಗಡಿಸಲಾಗುತ್ತದೆ ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲಿದೆ ಆ ಕುರಿತು ಮಾಹಿತಿ. 

PREV
18
ಉದ್ಯೋಗಗಳ ವರ್ಗೀಕರಣ

ಉದ್ಯೋಗಗಳನ್ನು ಬಣ್ಣಗಳಿಂದ ಏಕೆ ವರ್ಗೀಕರಿಸಲಾಗಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ಈ ವೈಟ್ ಕಾಲರ್ ಕಚೇರಿ ವೃತ್ತಿಪರರಿಂದ ಹಿಡಿದು ಗೋಲ್ಡ್ ಕಾಲರ್ ಗಣ್ಯ ತಜ್ಞರವರೆಗೆ 7 ಅಗತ್ಯ ಉದ್ಯೋಗ ಪ್ರಕಾರಗಳನ್ನು ಬಣ್ಣಗಳಿಂದ ವಿಭಜಿಸಲಾಗುತ್ತದೆ. ಪ್ರತಿಯೊಂದು "ಕಾಲರ್" ಆಧುನಿಕ ಉದ್ಯೋಗವನ್ನು ರೂಪಿಸುವ ವಿಶಿಷ್ಟ ಕೆಲಸದ ಪರಿಸರಗಳು, ಕೌಶಲ್ಯ ಮಟ್ಟಗಳು ಮತ್ತು ವೃತ್ತಿ ಮಾರ್ಗಗಳನ್ನು ಬಹಿರಂಗಪಡಿಸುತ್ತದೆ. ನಿಮ್ಮ ವೃತ್ತಿ ಯಾವ ಬಣ್ಣದ ವರ್ಗಕ್ಕೆ ಸೇರುತ್ತೆ ನೋಡೋಣ.

28
ವೈಟ್ ಕಾಲರ್ ಜಾಬ್ಸ್

ಕಚೇರಿಯಲ್ಲಿ ಮಾಡುವಂತಹ ಕೆಲಸಗಳು, ಫ್ರೊಫೆಶನಲ್ ಡೆಸ್ಕ್ ವರ್ಕ್, ಇದಕ್ಕೆ ಫಾರ್ಮಲ್ ವಿದ್ಯಾಭ್ಯಾಸ ಸಾಕಾಗುತ್ತದೆ, ಅಷ್ಟೇ ಅಲ್ಲದೇ ಅಡ್ಮಿನಿಸ್ಟ್ರೇಟೀವ್, ಎಕ್ಸ್’ಪರ್ಟೈಸ್ ಕೆಲಸಗಳು ಈ ವರ್ಗಕ್ಕೆ ಸೇರಿವೆ.

38
ಬ್ಲೂ ಕಾಲರ್ ಕೆಲಸಗಳು

ಕಾರ್ಮಿಕರ ಕೆಲಸಗಳು, ನಿರ್ಮಾಣ, ಉತ್ಪಾದನೆ ಮತ್ತು ವ್ಯಾಪಾರಗಳಲ್ಲಿ ತಮ್ಮನ್ನು ದೈಹಿಕವಾಗಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕೆಲಸಗಳು ಬ್ಲೂ ಕಾಲರ್ ಕೆಲಸಗಳು.

48
ರೆಡ್ ಕಾಲರ್ ಕೆಲಸಗಳು

ಸರ್ಕಾರಿ ಕೆಲಸಗಳು , ಸಾರ್ವಜನಿಕ ವಲಯದ ಹುದ್ದೆಗಳು ಇದರಲ್ಲಿ ಆಡಳಿತ ಮತ್ತು ಸಾರ್ವಜನಿಕ ಸೇವಾ ಕೆಲಸಗಳು ಸಹ ಸೇರಿವೆ.

58
ಪಿಂಕ್ ಕಾಲರ್ ಕೆಲಸಗಳು

ಆರೈಕೆ ಮಾಡುವ ಕೆಲಸಗಳು- ಆರೋಗ್ಯ ರಕ್ಷಣೆ, ವಿದ್ಯಾಭ್ಯಾಸ ಮತ್ತು ಮಕ್ಕಳ ರಕ್ಷಣೆಯ ಕೆಲಸಗಳು ಪಿಂಕ್ ಕಾಲರ್ ಕೆಲಸಗಳಾಗಿವೆ.

68
ಸಿಲ್ವರ್ ಕಾಲರ್ ಕೆಲಸಗಳು

ಅನುಭವಿ ನಿವೃತ್ತರು ಸಲಹಾ ಕಾರ್ಯವನ್ನು ಮುಂದುವರೆಸಲು ಮತ್ತೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು. ಇವರು ಹೆಚ್ಚಾಗಿ ಬ್ಯಾಂಕ್ ಅಥವಾ ದೊಡ್ಡ ಕಂಪನಿಗಳಲ್ಲಿ ಸಲಹೆ ನೀಡುವ ಕೆಲಸ ಮಾಡುತ್ತಾರೆ.

78
ಬ್ಲ್ಯಾಕ್ ಕಾಲರ್ ಕೆಲಸಗಳು

ಬ್ಲಾಕ್ ಕಾಲರ್ ಕೆಲಸಗಳಲ್ಲಿ ಗಣಿಗಾರಿಕೆ, ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲಿಕರಣದಂತಹ ಕೊಳಕು ಅಪಾಯಕಾರಿ ಕೆಲಸಗಳು ಈ ಸಾಲಿಗೆ ಸೇರುತ್ತವೆ.

88
ಗೋಲ್ಡ್ ಕಾಲರ್ ಕೆಲಸಗಳು

ಪ್ರೀಮಿಯಂ ಪರಿಹಾರವನ್ನು ಗಳಿಸುವ ಹೆಚ್ಚು ನುರಿತ ವೃತ್ತಿಪರರನ್ನು ಗೋಲ್ಡ್ ಕಾಲರ್ ಕೆಲಸಗಳ ಲಿಸ್ಟ್ ನಲ್ಲಿ ಸೇರಿಸಲಾಗುತ್ತದೆ. ಇದರಲ್ಲಿ ವೈದ್ಯಕೀಯ ಕೆಲಸವೂ ಸೇರಿದೆ.

Read more Photos on
click me!

Recommended Stories