ಬೆಂಗಳೂರಲ್ಲಿ ಮಾತ್ರ ಇದು ಸಾಧ್ಯ! ಉಬರ್ ಬುಕ್‌ ಮಾಡಿದ್ರೆ ಡ್ರೈವರ್ ಆಗಿ ಬಂದಿದ್ದು ಟೀಮ್ ಹೆಡ್!

Published : May 27, 2025, 11:12 AM IST

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಉಬರ್ ಕ್ಯಾಬ್ ಬುಕ್ ಮಾಡಿದಾಗ, ಚಾಲಕ ಅವರ ಕಚೇರಿಯ ತಂಡದ ನಾಯಕರಾಗಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಚರ್ಚಿಸುತ್ತಿದ್ದಾರೆ.

PREV
15

ಬೆಂಗಳೂರು: ಸಿಲಿಕಾನ್ ಸಿಟಿ, ಟ್ರಾಫಿಕ್‌ನ ನಗರ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಇತ್ತೀಚೆಗೆ ವಿಚಿತ್ರವಾದ ಹಾಗೂ ಕುತೂಹಲಕಾರಿಯಾಗಿರುವ ವಿಚಾರಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಅಂತಹುದ್ದೇ ಒಂದು ವಿಚಾರ ಬೆಳಕಿಗೆ ಬಂದಿದೆ. ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ವೈರಲ್ ಆಗಿರುವ ಈ ಘಟನೆಯು ಹಲವಾರು ಜನರ ಗಮನ ಸೆಳೆದಿದೆ. ಮಹಿಳೆಯೊಬ್ಬರು ವಾಟ್ಸಾಪ್ ಮೂಲಕ ತಮ್ಮ ಗೆಳೆಯನಿಗೆ ಕಳುಹಿಸಿದ್ದ ಸಂದೇಶವೊಂದು ವೈರಲ್ ಆಗಿದೆ. ಮಹಿಳೆ ಉಬರ್‌ ಕ್ಯಾಬ್‌ ಬುಕ್‌ ಮಾಡಿದರ. ಆದರೆ ಊಬರ್ ಅನ್ನು ಡ್ರೈವ್ ಮಾಡುತ್ತಿದ್ದ ವ್ಯಕ್ತಿ ತಾವು ಕೆಲಸ ಮಾಡುವ ಕಚೇರಿಯ ತಂಡದ ನಾಯಕ (Team Lead) ಆಗಿರುವುದನ್ನು ತಿಳಿದು ಆಶ್ಚರ್ಯದಿಂದ ಬೆಚ್ಚಿಬಿದ್ದರು!

25

ಇದನ್ನು ವಾಟ್ಸಾಪ್‌ ನಲ್ಲಿ ತನ್ನ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ. 'ತಮಾಷೆಯ ಸಂಗತಿ ಆಯ್ತು. ನಾನು ಉಬರ್ ಬುಕ್ ಮಾಡಿದೆ, ಮತ್ತು ನನ್ನನ್ನು ಪಿಕಪ್ ಮಾಡಲು ಬಂದವರು ನನ್ನ ಕಚೇರಿಯ ಟೀಮ್ ಲೀಡ್!' ಎಂದಿದ್ದಾರೆ ಈ ಘಟನೆಗೆ "ಬೆಂಗಳೂರಿನ ಮ್ಯಾಕ್ಸಿಮಮ್ ಕ್ಷಣ" (Bangalore Maximum Moment) ಎಂದು ಕರೆದಿದ್ದಾರೆ. ಊಬರ್‌ ನಲ್ಲಿ ಪ್ರಯಾಣಿಸುವಾಗ ತಮ್ಮ ತಂಡದ ಲೀಡ್‌ ಅನ್ನು ಪ್ರಶ್ನಿಸಿದ್ದಕ್ಕೆ ಡ್ರೈವಿಂಗ್ ಮಾಡುತ್ತಿರುವುದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. ನನ್ನ ಸಂತೋಷಕ್ಕಾಗಿ, ಸ್ವಲ್ಪ ಬೇಸರವನ್ನು ಕಡಿಮೆ ಮಾಡಲು ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರಂತೆ. ಹೌದು, ಬೆಂಗಳೂರಿನ ಟ್ರಾಫಿಕ್‌ನಲ್ಲೇ ಪರದಾಡುತ್ತಾ ಎಷ್ಟೋ ಜನ ಸಮಯ ಕಳೆಯಲು ದಾರಿ ಹುಡುಕುತ್ತಿರುವಾಗ, ಇವರು ಡ್ರೈವಿಂಗ್‌ ಮಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ.

35

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ಏನು?

ಈ ಪೋಸ್ಟ್‌ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವರು ಇದನ್ನು ಒಳ್ಳೆಯ ದೃಷ್ಟಿಕೋನದಿಂದ ನೋಡಿದರೆ, ಕೆಲವರು ವ್ಯಂಗ್ಯ ಮಾಡಿದ್ದಾರೆ "ಟೀಮ್ ಲೀಡ್‌ ಇಷ್ಟು ಫ್ರೀ ಟೈಮ್ ಹೇಗೆ ಸಿಗುತ್ತೆ?" ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೊಬ್ಬ " ಟ್ರಾಫಿಕ್‌ನಲ್ಲಿ ಒಬ್ಬನು ಟೈಮ್ ಪಾಸ್ ಮಾಡಲು ಕ್ಯಾಬ್ ಓಡಿಸ್ತಾರೆ ಅಂದರೆ ಅದು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ! ಎಂದು ಬರೆದಿದ್ದಾರೆ. "ಇದು ನಾನು ಕಲ್ಪಿಸಿಕೊಳ್ಳಲಾರದ ಸಂಗತಿ, ಆದರೆ ಬಹುಷಃ ಕೆಲಸದ ಒತ್ತಡ ನಿವಾರಣೆಗಾಗಿ ಇಂಥ ಕೆಲಸ ಸಹಾಯಕವಾಗಬಹುದು." ಎಂಬುದು ಮಗದೊಬ್ಬ ಕಾಮೆಂಟ್‌ ಮಾಡಿದ್ದಾನೆ.

45

ಮತ್ತೊಬ್ಬ ಬಳಕೆದಾರರ ಪ್ರತಿಕ್ರಿಯೆ ಹೀಗಿದೆ:

ನಾನು ಅಮೆರಿಕದಲ್ಲಿ ದೊಡ್ಡ ಕಂಪನಿಯ ಸಿಇಒ ಆಗಿ ಕೆಲಸ ಮಾಡುತ್ತಿದ್ದಾಗ, ನಾವು ಮನೆಗೆ ಕೆಲವರನ್ನು ಆಹ್ವಾನಿಸಿದ್ದೆವು. ಅಲ್ಲಿ ಬಂದ ವ್ಯಕ್ತಿಯಲ್ಲಿ ಒಬ್ಬರು ಹೋಟೆಲ್‌ನಲ್ಲಿ ಸರ್ವರ್ (ಊಟ ತರುವ ಕೆಲಸ) ಆಗಿ ಕೆಲಸ ಮಾಡುತ್ತಿದ್ದರು. ಅವರು ಅದನ್ನು ಸಂಪೂರ್ಣ ಅಭಿಮಾನದಿಂದ, ಯಾವುದೇ ಅಂಜಿಕೆ ಇಲ್ಲದೆ ಮಾಡುತ್ತಿದ್ದರು. ಆ ಸಮಯದಲ್ಲಿ ನಾವು ಬಹಳ ಆಶ್ಚರ್ಯಪಟ್ಟೆವು. ಅಮೆರಿಕದಲ್ಲಿ ಇಂತಹ ಕೆಲಸಗಳನ್ನು ಮಾಡಿದರೆ ಇದು ಸಾಮಾನ್ಯ. ಆದರೆ ಭಾರತದಲ್ಲಿ ಇದನ್ನು ದೊಡ್ಡ ವಿಷಯವಾಗಿಸಿಕೊಂಡು ನೋಡಲಾಗುತ್ತದೆ. ಆದರೆ, ಇಂಥವರು ಶ್ರಮದಿಂದ ದುಡಿದು ಜೀವನದಲ್ಲಿ ಒಂದು ದಿನ ದೊಡ್ಡ ಮಟ್ಟ ತಲುಪುತ್ತಾರೆ. ಇದೊಂದು ಉತ್ತಮ ಉದಾಹರಣೆ. ಅವರಿಗೆ ಶುಭವಾಗಲಿ! ಎಂದಿದ್ದಾರೆ

55

ಇನ್ನು ಇಂತಹುದ್ದೇ ಹಲವು ನಿದರ್ಶನಗಳು ಬೆಂಗಳೂರಿನಲ್ಲಿ ನಡೆದಿದೆ. 2023ರಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಆಟೋ ಚಾಲಕರಾಗಿ ವಾರಾಂತ್ಯಗಳಲ್ಲಿ ಕೆಲಸ ಮಾಡುತ್ತಿರುವುದು ವೈರಲ್ ಆಗಿತ್ತು. ವಾರಾಂತ್ಯಗಳಲ್ಲಿ ಒಂಟಿತನದಿಂದ ತಪ್ಪಿಸಲು, ಮತ್ತು ಜನರೊಂದಿಗೆ ಮಾತುಕತೆ ಮಾಡಲು, ಅವರೊಡನೆ ಬೆರೆಯಲು ನಾನು ಆಟೋ ಓಡಿಸುತ್ತಿದ್ದೇನೆ ಎಂದಿದ್ದರು. ಇದನ್ನೇ "ಪ್ಯಾಷನ್ ಡ್ರೈವಿಂಗ್" ಎಂದು ಹಲವರು ಬಣ್ಣಿಸಿದರು.

ಇಂಥ ಘಟನೆಗಳು ನಮಗೆ ಅನುಭವಿಸುತ್ತಿರುವ ಸಮಾಜದ ಹೊಸಮುಖವನ್ನು ತೋರಿಸುತ್ತವೆ. Bengaluru ತನ್ನ ವಿಶಿಷ್ಟ ಸಂಸ್ಕೃತಿ, ಟ್ರಾಫಿಕ್ ಮತ್ತು ತಂತ್ರಜ್ಞಾನ ಪ್ರಭಾವದಿಂದ ಯಾವಾಗಲೂ ಬದಲಾವಣೆಯಲ್ಲಿಯೇ ಇರುತ್ತದೆ. ಕೆಲಸ ಎಂಬುದು ಇಂದು ವೇತನಕ್ಕಾಗಿ ಮಾತ್ರ ಅಲ್ಲ, ಬಹುಪಾಲು ಜನರಿಗೆ ಅದು ಆತ್ಮತೃಪ್ತಿ, ಹೊಸ ಅನುಭವ, ಅಥವಾ ಒತ್ತಡ ನಿವಾರಣೆಗೂ ಸಹ ಸಹಾಯ ಮಾಡುತ್ತಿದೆ. ಅಚ್ಚರಿ ಆದರೂ ಇದು ನಿಜ. ಬೆಂಗಳೂರಿನಲ್ಲಿ ಡಿಜಿಟಲ್ ಕಾರ್ಪೊರೇಟ್ ಜಗತ್ತು ಮತ್ತು ನೈಜ ಜೀವನ ಅನುಭವ ಒಂದೇ ನಗರದಲ್ಲಿ ಬೆರೆತು ಹೋಗಿರುವುದು ಸ್ಪಷ್ಟ. ಇದು "ಮಲ್ಟಿಟ್ಯಾಸ್ಕಿಂಗ್ ಜೀವಿನ ಶೈಲಿಯ ನಗರ" ಎಂಬ ಟ್ಯಾಗ್‌ ಲೈನ್‌ಗೆ ಸ್ಪಷ್ಟ ಅರ್ಥ ನೀಡಿದಂತಿದೆ.

Read more Photos on
click me!

Recommended Stories