ಖುಷಿಯಲ್ಲಿ ಅನುಷ್ಕಾಗೆ ಹಗ್ ಮಾಡಿದ ದಿನೇಶ್ ಕಾರ್ತಿಕ್, ಹೊಟ್ಟೆ ಉರಿದುಕೊಂಡ್ರಾ ಕೊಹ್ಲಿ?

Published : Jun 01, 2026, 01:43 PM IST

virat kohli jealous : ಅನುಷ್ಕಾ ವಿಚಾರದಲ್ಲಿ ಕೊಹ್ಲಿ ಪೊಸೆಸಿವ್. ಇದು ಮತ್ತೆ ಸಾಭೀತಾದಂತಿದೆ. ಅನುಷ್ಕಾ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ತಬ್ಬಿಕೊಳ್ತಿದ್ದಂತೆ ಕೊಹ್ಲಿ ಮಾಡಿದ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ. 

PREV
16
ಸಂಭ್ರಮಾಚರಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎರಡನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. ಭಾನುವಾರ ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB),ಗುಜರಾತ್ ಟೈಟಾನ್ಸ್ ಮಣಿಸಿ, ರೋಚಕ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಅಜೇಯ 75 ರನ್ ಗಳಿಸಿ ಮಿಂಚಿದ್ದಾರೆ. ಮೈದಾನದಲ್ಲಿಯೇ ಆರ್ ಸಿಬಿ ಆಟಗಾರರು ಸಂಭ್ರಮಿಸಿದ್ದಾರೆ. ವಿಜಯೋತ್ಸವದ ಕ್ಷಣಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿವೆ.

26
ವಿರಾಟ್ ಜೊತೆ ಅನುಷ್ಕಾ

ಆರ್ ಸಿಬಿ ಗೆಲುವಿನ ನಂತ್ರ ಮೈದಾನಕ್ಕೆ ಬಂದ ಅನುಷ್ಕಾ ಶರ್ಮಾ, ಕೊಹ್ಲಿ ಜೊತೆ ಖುಷಿ ಹಂಚಿಕೊಂಡಿದ್ದಾರೆ. ಇಬ್ಬರು ಹಗ್ ಮಾಡಿ, ಮುತ್ತಿಟ್ಟುಕೊಂಡು ಪರಸ್ಪರ ಶುಭ ಹಾರೈಸಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಮ್ಯಾಚ್ ಮುಗಿದ ಮೇಲೆ ಡಾನ್ಸ್ ಕೂಡ ಮಾಡಿದ್ದು, ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೋಸ್ಟ್ ಮಾಡಿ, ಅನುಷ್ಕಾಗೆ ಧನ್ಯವಾದ ಹೇಳಿದೆ.

36
ದಿನೇಶ್ ಕಾರ್ತಿಕ್ ತಬ್ಬಿಕೊಂಡ ಅನುಷ್ಕಾ

ಆರ್ ಸಿಬಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಅನುಷ್ಕಾ ಪ್ರತಿಯೊಬ್ಬ ಆಟಗಾರರಿಗೆ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಹಗ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ ಅವರನ್ನು ಹಗ್ ಮಾಡಿ ವಿಶ್ ಮಾಡಿದ ಅನುಷ್ಕಾ ನಂತ್ರ ಕೈಕುಲುಕಿ ಅವರ ಜೊತೆ ಕೆಲ ಸಮಯ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ಕೊಹ್ಲಿ ವರ್ತನೆ ಚರ್ಚೆಗೆ ಬಂದಿದೆ.

46
ವಿರಾಟ್ ಕೊಹ್ಲಿ ಅಸೂಯೆಪಟ್ರಾ?

ಸೋಶಿಯಲ್ ಮೀಡಿಯಾ ಬಳಕೆದಾರರು ವಿಡಿಯೋ ನೋಡಿ ಹೀಗೊಂದು ಕಮೆಂಟ್ ಮಾಡ್ತಿದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ದಿನೇಶ್ ಕಾರ್ತಿಕ್ ಅವರನ್ನು ಟೈಟ್ ಹಗ್ ಮಾಡ್ತಿದ್ದಂತೆ ಕೊಹ್ಲಿ, ಅನುಷ್ಕಾ ಬೆನ್ನು ತಟ್ಟಿದ್ದಾರೆ. ಇದನ್ನು ನೋಡಿದ ಬಳಕೆದಾರರು ಕೊಹ್ಲಿ ಅಸೂಯೆಪಟ್ಟುಕೊಂಡ್ರು. ಇನ್ನು ಸಾಕು ಅಂತ ಅನುಷ್ಕಾಗೆ ಸಿಗ್ನಲ್ ನೀಡಿದ್ರೂ ಅಂತ ಕಮೆಂಟ್ ಮಾಡ್ತಿದ್ದಾರೆ. ವಿರಾಟ್ ಎಲ್ಲ ಗಂಡಸರಂತೆ. ಬೇರೆ ಪುರುಷರ ಜೊತೆ ತಮ್ಮ ಹೆಂಡ್ತಿ ನೋಡೋಲು ಇಷ್ಟಪಡೋದಿಲ್ಲ ಅಂತ ಬಳಕೆದಾರರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

56
ವಿರಾಟ್ ಪೊಸೆಸಿವ್?

ಅನುಷ್ಕಾ ಮೇಲೆ ವಿರಾಟ್ ಕೊಹ್ಲಿ ಪೊಸೆಸಿವ್ ಭಾವನೆ ತೋರಿದ್ದು ಇದೇ ಮೊದಲಲ್ಲ. ಕಳೆದ ವರ್ಷ, ಐಪಿಎಲ್ ಗೆದ್ದ ನಂತರ, ಅನುಷ್ಕಾ ತಂಡದ ಉಳಿದವರನ್ನು ತಬ್ಬಿಕೊಂಡು ಅಭಿನಂದಿಸುತ್ತಿದ್ದಾಗ, ವಿರಾಟ್ ತಮ್ಮ ಹೆಂಡತಿಯನ್ನು ಮುದ್ದಾಗಿ ತನ್ನ ಕಡೆಗೆ ಎಳೆಯುತ್ತಿರುವುದು ಕಂಡುಬಂದಿತ್ತು.

66
ಪತ್ನಿ ಮೇಲೆ ಅಪಾರ ಪ್ರೀತಿ

ವಿರಾಟ್ ಕೊಹ್ಲಿಗೆ ಅನುಷ್ಕಾ ಮೇಲೆ ಅಪಾರ ಪ್ರೀತಿ, ಕಾಳಜಿ ಇದೆ. ಮೈದಾನದಲ್ಲಿ ಆಟವಾಡ್ತಿರುವಾಗ್ಲೂ ಕೊಹ್ಲಿ ಅನೇಕ ಬಾರಿ ಅನುಷ್ಕಾ ಆಹಾರದ ಬಗ್ಗೆ ವಿಚಾರಿಸಿದ್ದಿದೆ. ಪ್ರತಿ ಗೆಲುವಿನ ನಂತ್ರ ಕೊಹ್ಲಿ ಅನುಷ್ಕಾ ಅವರನ್ನು ನೋಡ್ತಾರೆ. ಈ ಬಾರಿಯೂ ಫ್ಲೈಯಿಂಗ್ ಕಿಸ್ ಕೊಟ್ಟು ಸಂತೋಷ ಹಂಚಿಕೊಂಡಿದ್ದಾರೆ. ನಂತ್ರ ಇಬ್ಬರೂ ಹಗ್ ಮಾಡಿ ಖುಷಿಪಟ್ಟಿದ್ದಾರೆ. ಅನುಷ್ಕಾ ಕಣ್ಣಲ್ಲೂ ಗೆಲುವಿನ ಖುಷಿಯನ್ನು ಸ್ಪಷ್ಟವಾಗಿ ಕಾಣ್ಬಹುದು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories