ಅಧ್ಬುತ ಆಟ ಪ್ರದರ್ಶಿಸಿದ್ರೂ ಫೈನಲ್ ಕನಸು ಭಗ್ನ, ದುಃಖದಲ್ಲಿ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ

Published : May 30, 2026, 11:17 AM IST

Vaibhav sooryavanshi : ಈ ಸೀಸನ್ ನ ಐಪಿಎಲ್ ಕೊನೆ ಹಂತಕ್ಕೆ ಬಂದು ನಿಂತಿದೆ. ಫೈನಲ್ ನಲ್ಲಿ ಆರ್ ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಸೆಣೆಸಲಿವೆ. ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ವೈಭವ್ ಸೂರ್ಯವಂಶಿ ನೋವಲ್ಲಿ ಕಣ್ಣೀರಿಟ್ಟಿದ್ದಾರೆ. ಇದ್ರ ವಿಡಿಯೋ ವೈರಲ್ ಆಗಿದೆ.

PREV
15
ರಾಜಸ್ಥಾನ್ ರಾಯಲ್ಸ್ ಸೋಲು

ಐಪಿಎಲ್ ಫೈನಲ್ ನಲ್ಲಿ ವೈಭವ್ ಸೂರ್ಯವಂಶಿ ಆಟ ನೋಡುವ ಆಸೆ ಅಭಿಮಾನಿಗಳಿಗಿತ್ತು. ಆದ್ರೆ ರಾಜಸ್ಥಾನ್ ರಾಯಲ್ಸ್ ನಿನ್ನೆ ನಡೆದ ಪಂದ್ಯದಲ್ಲಿ ಸೋತು ಫೈನಲ್ ಕನಸು ಭಗ್ನಗೊಳಿಸಿದೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಅಚ್ಚುಮೆಚ್ಚಾಗಿದ್ದ ವೈಭವ್ ಸೂರ್ಯವಂಶಿ ಈ ಸೋಲನ್ನು ಕಣ್ಣೀರಿನ ಮೂಲಕ ಸ್ವೀಕರಿಸಿದ್ದಾರೆ.

25
ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ

ರಾಜಸ್ಥಾನ್ ರಾಯಲ್ಸ್ ತಂಡ ಕ್ವಾಲಿಫೈಯರ್ 2 ರಲ್ಲಿ ಸೋತ ನಂತರ ವೈಭವ್ ಸೂರ್ಯವಂಶಿಗೆ ದುಃಖ ತಡೆಯಲು ಸಾಧ್ಯವಾಗ್ಲಿಲ್ಲ. 15 ವರ್ಷದ ಈ ಆಟಗಾರ ಸೋಲಿನ ನಂತರ ಅತ್ತಿದ್ದಾರೆ. ಮೂಲೆಯಲ್ಲಿ ಕುಳಿತು ಕಣ್ಣೀರು ಒರೆಸಿಕೊಳ್ತಿದ್ದ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲಿದ್ದ ಸಹ ಆಟಗಾರರೊಬ್ಬರು ಅಳ್ತಿದ್ದ ವೈಭವ್ ಸೂರ್ಯವಂಶಿಗೆ ಟವಲ್ ನೀಡಿದ್ದಾರೆ. ವೈಭವ್ ಅವರ ವೈಯಕ್ತಿಕ ಪ್ರದರ್ಶನ ಅತ್ಯುತ್ತಮವಾಗಿತ್ತು. ಹಾಗಾಗಿ ಅವರನ್ನು ಎಲ್ಲರೂ ಹೊಗಳಿದ್ದಾರೆ.

35
ಬಳಕೆದಾರರ ಕಮೆಂಟ್

ಎಕ್ಸ್ ನಲ್ಲಿ ವೈಭವ್ ಸೂರ್ಯವಂಶಿ ವಿಡಿಯೋ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಕೆಲವರು ವೈಭವ್ ಗೆ ಸಮಾಧಾನ ಹೇಳಿದ್ದಾರೆ. ದೇವರು ಎಲ್ಲವನ್ನೂ ಒಂದೇ ಬಾರಿ ನೀಡೋದಿಲ್ಲ. ನಿಮ್ಮ ಸಾಧನೆಗೆ ಇದೇ ದಾರಿ ಅಂತ ಫ್ಯಾನ್ಸ್ ಹೇಳಿದ್ದಾರೆ. ಸೋಲು ಅತ್ಯಂತ ಅಮೂಲ್ಯ ಕೊಡುಗೆ. ಚಿಂತಿಸಬೇಡಿ. ಜೀವನ ಇದೀಗ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನಿಮ್ಮದಾಗ್ಲಿ ಅಂತ ಫ್ಯಾನ್ಸ್ ಅವರಿಗೆ ಸಲಹೆ ನೀಡಿದ್ದಾರೆ.

45
ಮತ್ತೆ ಶತಕ ವಂಚಿತ

ಈ ಪಂದ್ಯದಲ್ಲೂ ವೈಭವ್ ಶತ ಕ ವಂಚಿತರಾಗಿದ್ದಾರೆ. ವೈಭವ್ ಸೂರ್ಯವಂಶಿ ಎಲಿಮಿನೇಟರ್ನಲ್ಲಿ 97 ರನ್ ಗಳಿಸಿದ್ದರು. ಕ್ವಾಲಿಫೈಯರ್ 2 ರಲ್ಲಿ 96 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. 47 ಎಸೆತಗಳ ಈ ಇನ್ನಿಂಗ್ಸ್ನಲ್ಲಿ ಅವರು 7 ಸಿಕ್ಸರ್ಗಳು ಮತ್ತು 8 ಬೌಂಡರಿಗಳನ್ನು ಬಾರಿಸಿದ್ದರು.

55
ಐಪಿಎಲ್ 2026 ರಲ್ಲಿ ವೈಭವ್ ಸೂರ್ಯವಂಶಿ ಪ್ರದರ್ಶನ

16 ಇನ್ನಿಂಗ್ಸ್ಗಳಲ್ಲಿ 776 ರನ್ ಗಳಿಸಿರುವ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಎರಡೂ ಪ್ಲೇಆಫ್ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್ ಆಡಿರುವ ವೈಭವ್ 1 ಶತಕ ಮತ್ತು 5 ಅರ್ಧಶತಕಗಳನ್ನು ಗಳಿಸಿದ್ದರು. ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶ ಮಾಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories