ಅಸ್ಥಿರ ಪ್ರದರ್ಶನದಿಂದಾಗಿ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
undefined
ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಇದುವರೆಗೂ 11 ಪಂದ್ಯಗಳನ್ನಾಡಿದ್ದು, 4 ಗೆಲುವು ಹಾಗೂ 7 ಸೋಲುಗಳೊಂದಿಗೆ 8 ಅಂಕ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
undefined
ಸೂಪರ್ ಸಂಡೇ(ಅ.25)ಯಲ್ಲಿನ ಎರಡನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ತಂಡವು ಹಾಲಿ ಚಾಂಪಿಯನ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
undefined
ಒಂದು ವೇಳೆ ಮುಂಬೈ ಎದುರು ರಾಜಸ್ಥಾನ ರಾಯಲ್ಸ್ ಮುಗ್ಗರಿಸಿದರೂ ಸಂಪೂರ್ಣ ಪ್ಲೇ ಆಫ್ ರೇಸಿನಿಂದ ಸ್ಮಿತ್ ಪಡೆ ಹೊರಬೀಳುವುದಿಲ್ಲ. ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಮುಂದಿನ ಫಲಿತಾಂಶಗಳು ಹೇಗಿರಬೇಕು ಎನ್ನುವುದರ ಲೆಕ್ಕಾಚಾರ ಇಲ್ಲಿದೆ ನೋಡಿ.
undefined
ರಾಜಸ್ಥಾನ ರಾಯಲ್ಸ್ ತಂಡ ಸದ್ಯ 8 ಅಂಕಗಳನ್ನು ಹೊಂದಿದ್ದು ಮುಂದಿನ 3 ಪಂದ್ಯಗಳಾದ ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಪಂದ್ಯಗಳನ್ನು ಜಯಿಸಿದರೆ ರಾಯಲ್ಸ್ ಖಾತೆಗೆ 14 ಅಂಕ ಜಮೆ ಆಗಲಿದೆ.
undefined
ಬಳಿಕ ಸನ್‌ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಯಾವ ರೀತಿ ಪ್ರದರ್ಶನ ತೋರುತ್ತವೆ ಎನ್ನುವುದರ ಆಧಾರದಲ್ಲಿ ರಾಜಸ್ಥಾನದ ಪ್ಲೇ ಆಫ್ ಹಣೆ ಬರಹ ನಿರ್ಧಾರವಾಗಲಿದೆ.
undefined
ಒಂದು ವೇಳೆ ಮುಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಮಣಿಸಿದರೆ, ಆ ಬಳಿಕ ನಡೆಯುವ ಪಂದ್ಯಗಳಲ್ಲಿ ಈ ಎರಡು ತಂಡಗಳು ಸೋಲುಂಡರೆ ಆಗ ಎರಡು ತಂಡಗಳ ಖಾತೆಯಲ್ಲಿ 12 ಅಂಕಗಳಾಗಲಿದ್ದು, ರಾಜಸ್ಥಾನ ರಾಯಲ್ಸ್ ತಂಡ ಯಾವುದೇ ನೆಟ್ ರನ್ ರೇಟ್ ಭೀತಿಯಿಲ್ಲದೇ ಪ್ಲೇ ಆಫ್ ಪ್ರವೇಶಿಬಹುದಾಗಿದೆ
undefined
ಒಂದು ವೇಳೆ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಲೀಗ್ ಹಂತದಲ್ಲಿ ತಲಾ 14 ಅಂಕ ಪಡೆದರೂ ಅದೃಷ್ಟ ಕೈಹಿಡಿದರೆ ರಾಜಸ್ಥಾನ ಪ್ಲೇ ಆಫ್‌ಗೇರಬಹುದು.
undefined
ಹೀಗಾಗಬೇಕಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ತನ್ನ ಮುಂದಿನ 3 ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆದ್ದು ನೆಟ್ ರನ್ ರೇಟ್ ಸುಧಾರಿಸಿಕೊಂಡರೆ ಸ್ಮಿತ್ ಪಡೆ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಬಹುದು.
undefined
ಇಂದು(ಅ.25) ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮುಗ್ಗರಿಸಿದರೆ ಪ್ಲೇ ಆಫ್ ರೇಸಿನಿಂದ ರಾಯಲ್ಸ್ ಸಂಪೂರ್ಣ ಹೊರ ಬೀಳುವುದಿಲ್ಲ.
undefined
ಇನ್ನುಳಿದ 2 ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಕೂಡಾ ರಾಜಸ್ಥಾನ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಆದರೆ ಇದು ಸಾಧ್ಯವಾಗಬೇಕಿದ್ದರೆ ರಾಯಲ್ಸ್ ಪಾಲಿಗೆ ಪವಾಡವೇ ನಡೆಯಬೇಕಿದೆ.
undefined
12 ಅಂಕಗಳೊಂದಿಗೆ ರಾಜಸ್ಥಾನ ಪ್ಲೇ ಆಫ್‌ಗೆ ಪ್ರವೇಶಿಸಬೇಕಿದ್ದರೆ, ಕೋಲ್ಕತ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇನ್ನುಳಿದ ಯಾವ ಪಂದ್ಯಗಳನ್ನು ಗೆಲ್ಲಬಾರದು. ಇದೇ ವೇಳೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೂಡಾ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಗೆಲ್ಲಬಾರದು.
undefined
ಹೀಗಾದರೆ ಎಲ್ಲಾ ತಂಡಗಳು ತಲಾ 12 ಅಂಕಗಳನ್ನು ಹೊಂದಿರಲಿದ್ದು, ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ರನ್ ರೇಟ್ ಕಾಯ್ದುಕೊಂಡಿದ್ದರೆ ಪ್ಲೇ ಆಫ್‌ಗೆ ಎಂಟ್ರಿ ಕೊಡಬಹುದಾಗಿದೆ.
undefined
ಈ ಎಲ್ಲಾ ಲೆಕ್ಕಾಚಾರಗಳು ಸಾಧ್ಯವಾಗಬೇಕಿದ್ದರೆ ಮೊದಲೇ ಹೇಳಿದಂತೆ ಕೇವಲ ಪರಿಶ್ರಮ ಮಾತ್ರವಲ್ಲದೇ ಅದೃಷ್ಟ ಕೂಡಾ ರಾಜಸ್ಥಾನ ರಾಯಲ್ಸ್ ತಂಡದ ಕೈ ಹಿಡಿಯಬೇಕಾಗಿದೆ.
undefined
ಒಟ್ಟಿನಲ್ಲಿ ಸ್ಟೀವ್ ಸ್ಮಿತ್ ಪಡೆಯ ಪ್ಲೇ ಆಫ್ ಲೆಕ್ಕಾಚಾರ ನೋಡಿದ ಮೇಲೆ ಅಂತಿಮ 4ರ ಪಟ್ಟಿಯಲ್ಲಿ ರಾಯಲ್ಸ್ ಪಡೆ ಸ್ಥಾನ ಪಡೆಯುತ್ತಾ ಇಲ್ಲವೇ ಎನ್ನುವುದನ್ನು ಕಾಮೆಂಟ್ ಮಾಡಿ.
undefined