CSK ಮಾನ ಉಳಿಸಿ ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಯಾಮ್ ಕರ್ರನ್-ಇಮ್ರಾನ್ ತಾಹಿರ್ ಜೋಡಿ..!

First Published Oct 24, 2020, 8:45 AM IST

ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಆಘಾತಕಾರಿ ಸೋಲು ಕಂಡಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿದ ಧೋನಿ ಪಡೆ ಬಹುತೇಕ ಪ್ಲೇ ಅಫ್ ರೇಸಿನಿಂದ ಹೊರಬಿದ್ದಂತೆ ಆಗಿದೆ.

ಇದೆಲ್ಲದರ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್ ದಿಟ್ಟ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾಯಿತು. 9ನೇ ವಿಕೆಟ್‌ಗೆ ಸ್ಯಾಮ್ ಕರ್ರನ್ ಹಾಗೂ ಇಮ್ರಾನ್ ತಾಹಿರ್ ಆಕರ್ಷಕ ಜತೆಯಾಟವಾಡುವ ಮೂಲಕ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದೆ. 
 

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಯಾಮ್‌ ಕರ್ರನ್‌ ಹಾಗೂ ಇಮ್ರಾನ್‌ ತಾಹಿರ್‌ ವಿನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
undefined
ಸಂಕಷ್ಟದಲ್ಲಿದ್ದಂತಹ ಸಿಎಸ್‌ಕೆ ತಂಡಕ್ಕೆ ಕರ್ರನ್ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
undefined
ಧೋನಿ ತಂಡ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪವರ್ ಪ್ಲೇ ಓವರ್‌ನಲ್ಲೇ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
undefined
ಇದಾದ ಬಳಿಕವೂ ಎಂ ಎಸ್ ಧೋನಿ, ದೀಪಕ್ ಚಹಾರ್ ಹಾಗೂ ಶಾರ್ದೂಲ್ ಠಾಕೂರ್ ಕೂಡಾ ಕೆಟ್ಟಹೊಡೆತಕ್ಕೆ ಕೈಹಾಕಿ ಅತ್ಯಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
undefined
ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಸ್ಯಾಮ್ ಕರ್ರನ್ ನೆಲಕಚ್ಚಿ ಆಡುವ ಮೂಲಕ ನಾಯಕ ಧೋನಿ ತಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಮತ್ತೊಮ್ಮೆ ಯಶಸ್ವಿಯಾದರು.
undefined
ಆರಂಭಿಕನಾಗಿ ಕಣಕ್ಕಿಳಿದಿದ್ದ ಕರ್ರನ್ 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 52 ರನ್ ಬಾರಿಸಿ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು.
undefined
ಇದರ ಜತೆಗೆ ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಕರ್ರನ್‌ ಹಾಗೂ ತಾಹಿರ್‌ ಜೋಡಿ 9ನೇ ವಿಕೆಟ್‌ ಜೊತೆಯಾಟದಲ್ಲಿ 43 ರನ್‌ಗಳಿಸುವ ಮೂಲಕ 9ನೇ ವಿಕೆಟ್‌ಗೆ ಅತಿ ದೊಡ್ಡ ಜೊತೆಯಾಟದ ಕಾಣಿಕೆ ನೀಡಿ ದಾಖಲೆ ಬರೆದಿದ್ದಾರೆ.
undefined
ಸಿಎಸ್‌ಕೆ ಪರ ಇಂಗ್ಲೆಂಡ್ ಯುವ ಆಲ್ರೌಂಡರ್ ಕರ್ರನ್ ಭರ್ಜರಿ ಅರ್ಧಶತಕ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ತಾಹಿರ್ 10 ಎಸೆತಗಳಲ್ಲಿ 2 ಬೌಂಡರಿ ಸಹಿತ 13 ರನ್ ಬಾರಿಸಿ ಅಜೇಯರಾಗುಳಿದರು.
undefined
ಈ ಜತೆಯಾಟವೂ ಸೇರಿದಂತೆ ಒಟ್ಟಾರೆ 3 ಬಾರಿಯೂ 9ನೇ ವಿಕೆಟ್‌ಗೆ ಚೆನ್ನೈ ತಂಡವೇ ಅತಿ ಹೆಚ್ಚು ರನ್‌ ಜೊತೆಯಾಟ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
undefined
2013ರಲ್ಲಿ ಕೆಕೆಆರ್‌ ವಿರುದ್ಧ ಧೋನಿ ಹಾಗೂ ಅಶ್ವಿನ್‌ 9ನೇ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದ್ದರು. 2018ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಬ್ರಾವೋ ಹಾಗೂ ತಾಹಿರ್‌ 41 ರನ್‌ ಜೊತೆಯಾಟವಾಡಿದ್ದರು.
undefined
ಸಿಎಸ್‌ಕೆ ನೀಡಿದ್ದ 115 ರನ್‌ಗಳ ಸುಲಭ ಗುರಿ ಪಡೆದ ಮುಂಬೈ ಇಂಡಿಯನ್ಸ್‌ ವಿಕೆಟ್ ನಷ್ಟವಿಲ್ಲದೇ ಆರಂಭಿಕರಾದ ಇಶನ್ ಕಿಶನ್ ಹಾಗೂ ಕ್ವಿಂಟನ್ ಡಿಕಾಕ್ ತಂಡವನ್ನು ಗೆಲುವಿನ ದಡ ಸೇರಿಸಿದರು.
undefined
ಅಂದಹಾಗೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ 10 ವಿಕೆಟ್‌ಗಳ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದೆ.
undefined
click me!