ಟೀಮ್ ಇಂಡಿಯಾದ ಹೆಚ್ಚಿನ ಕ್ರಿಕೆಟಿಗರು ಬಾಲ್ಯದ ಗೆಳತಿ ಯಾ ಬಾಲಿವುಟ್ ನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಇದಕ್ಕೆ ವಿರುದ್ಧವಾಗಿ ಭಾರತದ ಕೆಲವು ಟಾಪ್ ಕ್ರಿಕೆಟರು ಆರೇಂಜ್ಡ್ ಮ್ಯಾರೇಜ್ ಸಹ ಆಗಿದ್ದಾರೆ.
undefined
ಕೆಲವು ಕ್ರಿಕೆಟಿಗರು ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು ಗಮನಹರಿಸಿದ್ದು, ಅವರಿಗೆ ಮಹಿಳೆಯರನ್ನು ಡೇಟ್ ಮಾಡುವ ಅವಕಾಶವೇ ಸಿಗಲಿಲ್ಲ. ಇದರ ಫಲವಾಗಿ, ಅನೇಕರು ತಮ್ಮ ಫ್ಯಾಮಿಲಿಯ ಇಷ್ಟದಂತೆ ಮದುವೆಯಾಗಿದ್ದಾರೆ. ಮನೆಯವರು ನೋಡಿ ಮದುವೆಆಗಿರುವ ಟೀಮ್ ಇಂಡಿಯಾದ ಟಾಪ್ ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್, ಸುರೇಶ್ ರೈನಾ, ಗೌತಮ್ ಗಂಭೀರ್ಮುಂತಾದವರಿದ್ದಾರೆ.
undefined
ರಾಹುಲ್ ದ್ರಾವಿಡ್: ಯಾವಾಗಲೂ ಕ್ರಿಕೆಟ್‌ನತ್ತ ಗಮನ ಹರಿಸಿದ್ದ ದ್ರಾವಿಡ್ ಜೀವನಸಂಗಾತಿಯ ಆಯ್ಕೆಯನ್ನು ಕುಟುಂಬಕ್ಕೆ ಬಿಟ್ಟಿದ್ದರು. 2003ರಲ್ಲಿ ನಾಗ್ಪುರದಲ್ಲಿ ಸರ್ಜನ್ ಆಗಿದ್ದ ವಿಜೇತ ಪೆಂಧಾರ್ಕರ್‌ರನ್ನು ಮದುವೆಯಾದರು. ಈ ಕಪಲ್ ಸಮಿತ್ ಮತ್ತು ಅನ್ವೈ ಎಂಬ ಗಂಡು ಮಕ್ಕಳನ್ನು ಹೊಂದಿದ್ದಾರೆ.
undefined
ಗೌತಮ್ ಗಂಭೀರ್: ಭಾರತದ ಪ್ರಮುಖ ಕ್ರಿಕೆಟಿಗರಲ್ಲಿ ಒಬ್ಬರಾದ ಗಂಭೀರ್ 2011ರ ಐಸಿಸಿ ವಿಶ್ವಕಪ್ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದಾರೆ. ಬ್ಯುಸಿನೆಸ್ ಫ್ಯಾಮಿಲಿಗೆ ಸೇರಿದ ನತಾಶಾರನ್ನು ಗಂಬೀರ್‌ಗೆ ಪರಿಚಯಿಸಿದ್ದು ಮನೆಯವರು. ನಂತರ ಇಬ್ಬರು 2011 ರಲ್ಲಿ ಮದುವೆಯಾದ್ದರು. ಈ ದಂಪತಿಗೆ ಅಜೀನ್ ಎಂಬ ಮಗಳು ಇದ್ದಾಳೆ.
undefined
ವಿ.ವಿ.ಎಸ್.ಲಕ್ಷ್ಮಣ್: ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಲಕ್ಷ್ಮಣ್ ಸಹ ಅರೇಂಜ್ಡ್ ಮ್ಯಾರೇಜ್ ಆದವರ ಪಟ್ಟಿಯಲ್ಲಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಜಿ.ಆರ್.ಶೈಲಜಾ ಅವರನ್ನು ಇವರ ಬಾಳಸಂಗಾತಿಯಾಗಿ ಫ್ಯಾಮಿಲಿ ಆರಿಸಿತು. 2004ರಲ್ಲಿ ಮದುವೆಯಾದ ಇವರಿಗೆ ಅಚಿಂತ್ಯ, ಸರ್ವಜಿತ್ ಎಂಬ ಮಕ್ಕಳಿವೆ.
undefined
ಅಜಿಂಕ್ಯ ರಹಾನೆ: ರಹಾನೆಗೆ, ರಾಧಿಕಾ ಧೋಪವ್ಕರ್ ಅವರನ್ನು ಅವರ ಕುಟುಂಬವೇ ಆಯ್ಕೆ ಮಾಡಿತು. ಇವರಿಬ್ಬರೂ ಬಾಲ್ಯದ ದಿನಗಳಲ್ಲಿ ಸ್ನೇಹಿತರಾಗಿದ್ದರು. 2014ರಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು.
undefined
ಸುರೇಶ್ ರೈನಾ:ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ 2015ರಲ್ಲಿ ಪ್ರಿಯಾಂಕಾ ಚೌಧರಿಯನ್ನು ಮದುವೆಯಾದರು. ರೈನಾ ಆಸ್ಟ್ರೇಲಿಯಾದಲ್ಲಿದ್ದಾಗ, ಅವರ ತಾಯಿ ಪ್ರಿಯಾಂಕಾ ಅವರೊಂದಿಗೆ ವಿವಾಹವನ್ನು ನಿಗದಿಪಡಿಸಲಾಗಿದೆ ಎಂದು ಹೇಳಲು ಕಾಲ್ ಮಾಡಿದ್ದರು. ಪ್ರಿಯಾಂಕಾ ಜೊತೆ ಮೊದಲ ಬಾರಿಗೆ ಮಾತನಾಡುತ್ತಿದ್ದಾಗ, ಪ್ರಿಯಾಂಕಾಕುಟುಂಬಪಂಜಾಬ್‌ಗೆ ತೆರಳುವ ಮುನ್ನಇವರಿಬ್ಬರು ಉತ್ತರ ಪ್ರದೇಶದಲ್ಲಿ ಹಳೆಯ ನೆರೆಹೊರೆಯವರು ಎಂದು ತಿಳಿದುಬಂದಿತು. ಈ ದಂಪತಿಗೆ ಮಗಳು ಮತ್ತು ಮಗ ಇದ್ದಾರೆ.
undefined
ಎಸ್.ಶ್ರೀಶಾಂತ್: ಭಾರತೀಯ ಫಾಸ್ಟ್ ಬೌಲರ್ ಹೆಸರು ಬಾಲಿವುಡ್ ಮತ್ತು ಕಾಲಿವುಡ್ನಟಿಯರ ಜೊತೆ ಸುದ್ದಿಯಾಗಿತ್ತು. ಆದರೆ ನಂತರ ಮದುವೆಯನ್ನು ತಮ್ಮ ಕುಟುಂಬದ ಆಯ್ಕೆಯಂತೆ ಆದರು. 2013ರಲ್ಲಿ ರಾಜಸ್ಥಾನದ ಜೈಪುರದ ರಾಯಲ್ ಫ್ಯಾಮಿಲಿಯ ಭುವನೇಶ್ವರಿ ಕುಮಾರಿಯನ್ನು ಮದುವೆಯಾದರು.
undefined