ಗೌತಮ್ ಗಂಭೀರ್ -ಮೊಹಮ್ಮದ್ ಅಜರುದ್ದೀನ್: ರಾಜಕಾರಣಕ್ಕೆ ಎಂಟ್ರಿಕೊಟ್ಟ ಕ್ರಿಕೆಟಿಗರು!

First Published | Oct 27, 2020, 7:54 PM IST

ಭಾರತೀಯ ಕ್ರಿಕೆಟಿಗರು ಕ್ರೀಡೆಯಿಂದ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ಟೀಮ್‌ ಇಂಡಿಯಾದ ಕೆಲವು ಟಾಪ್‌ ಕ್ರಿಕೆಟರ್ಸ್ ನಿವೃತ್ತಿ ನಂತರ ರಾಜಿಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಲ್ಲಿ  ಗೌತಮ್ ಗಂಭೀರ್ ಮೊಹಮ್ಮದ್ ಅಜರುದ್ದೀನ್‌ ಮುಂತಾದವರಿದ್ದಾರೆ.  

ಕೆಲವು ಕ್ರಿಕೆಟಿಗರು ನಿವೃತ್ತಿ ನಂತರ ಕೋಚ್‌ ಅಥವಾ ಮ್ಯಾನೇಜರ್‌ ಆಗಿ ಮುಂದುವರಿದರೆ, ಇನ್ನೂ ಕೆಲವರು ವಿಭಿನ್ನ ವೃತ್ತಿ ಜೀವನದ ಹಾದಿ ಹಿಡಿಯುತ್ತಾರೆ. ರಾಜಕೀಯಕ್ಕೂ ಪ್ರವೇಶಿಸಿದ್ದಾರೆ.
undefined
ವಿನೋದ್ ಕಾಂಬ್ಲಿ ಯಿಂದ ಮನ್ಸೂರ್ ಅಲಿ ಖಾನ್‌ವರೆಗೂ ಹಲವಾರು ಈ ಪಟ್ಟಿಯಲ್ಲಿ ಇದ್ದಾರೆ. ರಾಜಕೀಯವನ್ನು ತಮ್ಮ ಕ್ರಿಕೆಟ್ ನಂತರದ ವೃತ್ತಿ ಜೀವನವಾಗಿ ಆಯ್ಕೆ ಮಾಡಿದ ಕೆಲವು ಪ್ರಮುಖ ಭಾರತೀಯ ಕ್ರಿಕೆಟಿಗರು ಇಲ್ಲಿದ್ದಾರೆ.
undefined

Latest Videos


ಗೌತಮ್ ಗಂಭೀರ್: 2011ರ ಐಸಿಸಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಕೆಆರ್ ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಕರಿಸಿದರು. ಕ್ರೀಡೆಯಿಂದ ನಿವೃತ್ತಿಯಾದ ನಂತರ ಗಂಬೀರ್‌ ರಾಜಕೀಯಕ್ಕೆ ಸೇರಿದ್ದಾರೆ. ಅವರು 2019ರಿಂದ ಬಿಜೆಪಿ ಸದಸ್ಯರಾಗಿದ್ದಾರೆ. 2019ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ.
undefined
ನವಜೋತ್ ಸಿದ್ಧು: ಆರಂಭಿಕ ಬ್ಯಾಟ್ಸ್‌ಮನ್‌ ಸಿದ್ಧು ಕ್ರಿಕೆಟ್ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. 2004ರಲ್ಲಿ ಅಮೃತಸರದಲ್ಲಿ ಬಿಜೆಪಿಗೆ ಸೇರಿದರು. 2016ರಲ್ಲಿ ರಾಜ್ಯಸಭಾ ಸದಸ್ಯರಾದರು ಮತ್ತು 2009 ರ ಉಪ ಚುನಾವಣೆಯಲ್ಲಿಯಬ ಗೆದ್ದರು. ಅದೇ ವರ್ಷ ರಾಜ್ಯಸಭೆಯನ್ನು ತೊರೆದು, 2017ರಲ್ಲಿ ಕಾಂಗ್ರೆಸ್‌ ಸೇರಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರು.
undefined
ಮೊಹಮ್ಮದ್ ಅಜರುದ್ದೀನ್: ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪದ ನಂತರ ಮಾಜಿ ಕ್ಯಾಪ್ಟನ್‌ಗೆ ಜೀವಾವಧಿ ನಿಷೇಧ ವಿಧಿಸಲಾಯಿತು. ಅದರ ಪರಿಣಾಮ, ಅಜರುದ್ದೀನ್ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2009ರಿಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ.ಅದೇ ವರ್ಷ ಭಾರತದ ಸಂಸತ್ ಸದಸ್ಯರಾದರು ಮೊಹಮ್ಮದ್ ಅಜರುದ್ದೀನ್.
undefined
ಮೊಹಮ್ಮದ್ ಕೈಫ್: ಭಾರತದ ಮಾಜಿ ಬ್ಯಾಟ್ಸ್‌ಮನ್ ಕೈಫ್‌ 2002 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್‌ವೆಸ್ಟ್ ಸರಣಿಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2014ರಲ್ಲಿ ಕಾಂಗ್ರೆಸ್‌ಗೆ ಸೇರಿ, ಉತ್ತರ ಪ್ರದೇಶದ ಫುಲ್‌ಪುರಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಗೆಲ್ಲಲಿಲ್ಲ.
undefined
ಕೀರ್ತಿ ಆಜಾದ್: ಆಕ್ರಮಣಕಾರಿ ಬ್ಯಾಟ್ಸ್‌ಮನ್ ಭಾರತದ 1983ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಕೀರ್ತಿ ಆಜಾದ್‌ ರಾಜಕೀಯದಲ್ಲೂ ಹೆಸರು ಗಳಿಸಿದ್ದಾರೆ. ಬಿಹಾರದಿಂದ ಬಿಜೆಪಿ ಮೂಲಕ ಸಂಸತ್ತನ್ನು ಪ್ರವೇಶಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ದರ್ಬಂಗದಿಂದ ಗೆದ್ದರು. ಆದರೆ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಭ್ರಷ್ಟಾಚಾರ ಪ್ರಕರಣದಲ್ಲಿ ಅರುಣ್ ಜೇಟ್ಲಿ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಅವರನ್ನು 2015 ರಲ್ಲಿ ಬಿಜೆಪಿ ಅಮಾನತುಗೊಳಿಸಿತ್ತು. 2019ರಲ್ಲಿ ಅವರು ಕಾಂಗ್ರೆಸ್‌ಗೆ ಸೇರಿದರು.
undefined
click me!