ಕೊರೋನಾ ಲಾಕ್‌ಡೌನ್ ವಿಸ್ತರಣೆಯಾಗಿದೆ. ಇತ್ತ ಐಪಿಎಲ್ ಟೂರ್ನಿ ಬಹುತೇಕ ರದ್ದಾಗಿದೆ. ಹಾಗಂತ ಕ್ರಿಕೆಟ್ ಅಭಿಮಾನಿಗಳು ನಿರಾಸೆ ಪಡಬೇಕಿಲ್ಲ. ಈ ಹಿಂದಿನ 12 ಆವೃತ್ತಿಗಳಲ್ಲಿ ಐಪಿಎಲ್ ಟೂರ್ನಿಯ ಪ್ರತಿ ದಿನ ಒಂದಲ್ಲ ಒಂದು ದಾಖಲೆ ನಿರ್ಮಾಣವಾಗಿದೆ. ಹೀಗೆ ನಿರ್ಮಾಣವಾದ ದಾಖಲೆಗಳ ಪೈಕಿ ಇಂದು(ಎಪ್ರಿಲ್ 15) ಸಚಿನ್ ತೆಂಡುಲ್ಕರ್ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ ದಿನ. 9 ವರ್ಷಗಳ ಹಿಂದೆ ಇದೇ ದಿನ ಸಚಿನ್ ತೆಂಡುಲ್ಕರ್ ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದರು. ಇದು ಸಚಿನ್ ಐಪಿಎಲ್ ಟೂರ್ನಿಯಲ್ಲಿ ಸಿಡಿಸಿದ ಏಕೈಕ ಸೆಂಚುರಿಯಾಗಿದೆ.