* ಕೋಲ್ಕತಾ ನೈಟ್‌ರೈಡರ್ಸ್ ಪರ ಶತಕ ಬಾರಿಸಿದ ಏಕೈಕ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ. ಅದು 2008ರ ಉದ್ಘಾಟನಾ ಪಂದ್ಯದಲ್ಲಿ RCB ವಿರುದ್ದ. ಆ ಬಳಿಕ KKR ಪರ ಯಾವೊಬ್ಬ ಆಟಗಾರನೂ ಶತಕ ಬಾರಿಸಿಲ್ಲ..!
undefined
* CSK ನಾಯಕ ಧೋನಿ ಇದುವರೆಗೂ ಸುನಿಲ್ ನರೈನ್ ಬೌಲಿಂಗ್‌ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಲ್ಲ. ಅಚ್ಚರಿ ಎನಿಸಿದರೂ ಇದು ಸತ್ಯ, ವಿಂಡೀಸ್ ಸ್ಪಿನ್ನರ್ ಎದುರು ಧೋನಿ ಇದುವರೆಗೂ 59 ಎಸೆತಗಳನ್ನು ಎದುರಿಸಿದ್ದು ಕೇವಲ 29 ರನ್‌ಗಳನ್ನಷ್ಟೇ ಬಾರಿಸಿದ್ದಾರೆ.
undefined
* ಐಪಿಎಲ್ ಇತಿಹಾಸದಲ್ಲಿ ಡೇರನ್ ಲೆಹ್ಮನ್ ಆಟಗಾರನಾಗಿ ಹಾಗೂ ಕೋಚ್ ಆಗಿ ಯಶಸ್ವಿಯಾಗಿದ್ದಾರೆ. 2008ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರಾಗಿದ್ದ ಲೆಹ್ಮನ್, 2009ರಲ್ಲಿ ಡೆಕ್ಕನ್ ಚಾರ್ಜಸ್ ತಂಡದ ಕೋಚ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
undefined
* ಸತತ 5 ಅರ್ಧಶತಕ ಬಾರಿಸಿದ ಭಾರತದ ಏಕೈಕ ಭಾರತೀಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (2018ರಲ್ಲಿ ಜೋಸ್ ಬಟ್ಲರ್ ಕೂಡಾ ಸತತ 5 ಅರ್ಧಶತಕ ಬಾರಿಸಿದ್ದಾರೆ)
undefined
* ನೂರಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ
undefined
* 2008ರಲ್ಲಿ ವಿರಾಟ್ ಕೊಹ್ಲಿಯನ್ನು RCB ಕೇವಲ 21 ಲಕ್ಷ ರುಪಾಯಿ ನೀಡಿ ಖರೀಧಿಸಿತ್ತು. ಈಗ ಕೊಹ್ಲಿ ಪಡೆಯುತ್ತಿರುವುದು ಬರೋಬ್ಬರಿ 17 ಕೋಟಿ ರುಪಾಯಿ..!
undefined
* IPL ಆವೃತ್ತಿಯೊಂದರಲ್ಲಿ(2013ರಲ್ಲಿ) ಅತಿಹೆಚ್ಚು ಚುಕ್ಕೆ ಎಸೆತ(ಡಾಟ್ ಬಾಲ್) ಹಾಕಿದ ದಾಖಲೆ ವೇಗಿ ಡೇಲ್ ಸ್ಟೇನ್ ಹೆಸರಿನಲ್ಲಿದೆ. ಸ್ಟೇನ್ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾಗ 17 ಪಂದ್ಯಗಳಲ್ಲಿ 407 ಎಸೆತಗಳನ್ನು ಎಸೆದಿದ್ದು, ಅದರಲ್ಲಿ 212 ಎಸೆತಗಳು ಡಾಟ್ ಬಾಲ್‌ಗಳಾಗಿವೆ.
undefined
* 12 ಆವೃತ್ತಿಗಳಿಂದಲೂ ಐಪಿಎಲ್ ಆಡಿದರೂ ಒಮ್ಮೆಯೂ ಫೈನಲ್ ಪ್ರವೇಶಿಸಿದ ತಂಡವೆಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್ಡೇರ್‌ಡೆವಿಲ್ಸ್.
undefined
* ಮಾಜಿ ವೇಗಿ ಜಹೀರ್ ಖಾನ್ ಧೋನಿಯನ್ನು 7 ಬಾರಿ ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಬ್ಬ ಬ್ಯಾಟ್ಸ್‌ಮನ್‌ನನ್ನು ಅತಿಹೆಚ್ಚು ಬಾರಿ ಬಲಿಪಡೆದ ಗೌರವ ಜಹೀರ್ ಖಾನ್ ಹೆಸರಿನಲ್ಲಿದೆ.
undefined
* ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಆಟಗಾರರೆಂದರೆ ಅದು ಬ್ರೆಂಡನ್ ಮೆಕ್ಕಲಂ ಹಾಗೂ ಮೈಕ್ ಹಸ್ಸಿ. 2008ರ ಐಪಿಎಲ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಈ ಇಬ್ಬರು ಆಟಗಾರರು ಶತಕ ಚಚ್ಚಿದ್ದರು.
undefined
* ಐಪಿಎಲ್ ಇತಿಹಾಸದಲ್ಲಿ ಶತಕ ಹಾಗೂ ಹ್ಯಾಟ್ರಿಕ್ ವಿಕೆಟ್ ಪಡೆದ ಆಟಗಾರರೆಂದರೆ ರೋಹಿತ್ ಶರ್ಮಾ(2009ರಲ್ಲಿ ಡೆಕ್ಕನ್ ಚಾರ್ಜಸ್ ಪರ), ಶೇನ್ ವ್ಯಾಟ್ಸನ್(2014ರಲ್ಲಿ ರಾಜಸ್ಥಾನ ರಾಯಲ್ಸ್ ಪರ).
undefined