IPLಗಾಗಿ ದುಬೈಗೆ ಹಾರೋ ಮೊದಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗೆ ಅಚ್ಚರಿ ನೀಡಿದ ಧೋನಿ!

First Published Aug 21, 2020, 5:59 PM IST

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ದಿಢೀರ್ ವಿದಾಯ ಹೇಳಿದ ಬಳಿಕ ಧೋನಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕಾರಣ ಇದೀಗ ಅಭಿಮಾನಿಗಳೆಲ್ಲಾ ಐಪಿಎಲ್ ಟೂರ್ನಿಯನ್ನು ಎದುರುನೋಡುತ್ತಿದ್ದಾರೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಐಪಿಎಲ್ ಟೂರ್ನಿಗಾಗಿ ದುಬೈಗೆ ತೆರಳಿದೆ. ಇದಕ್ಕೂ ಮುನ್ನ ಧೋನಿ ಅಭಿಮಾನಿಗೆ ಅಚ್ಚರಿ ನೀಡಿದ್ದಾರೆ. 

ಐಪಿಎಲ್ 2020 ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿದೆ. ಕೊರೋನಾ ವೈರಸ್ ಕಾರಣ ಈ ಬಾರಿ ಐಪಿಎಲ್ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿದೆ.
undefined
ನಾಯಕ ಎಂ.ಎಸ್.ಧೋನಿ ಸೇರಿದಂತೆ ಬಹುತೇಕ ಚೆನ್ನೈ ತಂಡ ಒಂದೇ ವಿಮಾನದಲ್ಲಿ ದುಬೈಗೆ ಪ್ರಯಾಣ ಬೆಳೆಸಿದೆ. ಕೊರೋನಾ ವೈರಸ್ ಕಾರಣ ಪ್ರತಿ ಆಟಾಗಾರರು ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ
undefined
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಗಸ್ಟ್ 15 ರಂದು ವಿದಾಯ ಹೇಳಿದ ಧೋನಿ ನೋಡಲು ಚೆನ್ನೈ ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳ ದಂಡೇ ಆಗಮಿಸಿತ್ತು. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು
undefined
ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೋರ್ವ ಫೋಟೋ ಕ್ಲಿಕ್ಕಿಸುವಾಗು ಫೋಸ್ ನೀಡಿ ಅಚ್ಚರಿ ನೀಡಿದ್ದಾರೆ ಧೋನಿ. ಬರೋಬ್ಬರಿ ಒಂದು ವರ್ಷ ಬಳಿಕ ಧೋನಿ ಮತ್ತೆ ಮೈದಾನದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
undefined
ಧೋನಿ ಬೆನ್ನಲ್ಲೇ ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರೈನಾ ಐಪಿಎಲ್ ಟೂರ್ನಿಯಲ್ಲಿ ಮುಂದವರಿಯಲಿದ್ದಾರೆ.
undefined
ಟೀಂ ಇಂಡಿಯಾ ಜರ್ಸಿಯಲ್ಲಿ ಧೋನಿಯನ್ನು ನೋಡಲು ಬಯಸಿದ್ದ ಅಭಿಮಾನಿಗಳಿಗೆ ದಿಢೀರ್ ವಿದಾಯ ಶಾಕ್ ನೀಡಿತ್ತು. ಇದೀಗ ಐಪಿಎಲ್ ಟೂರ್ನಿಯಲ್ಲಿ ಧೋನಿ ಪರ್ಫಾಮೆನ್ಸ್ ನೋಡಲು ಅಭಿಮಾನಿಗಳು ರೆಡಿಯಾಗಿದ್ದಾರೆ.
undefined
ಸಹ ಆಟಗಾರರ ಜೊತೆ ಧೋನಿ ದುಬೈಗೆ ತೆರಳಿದ್ದಾರೆ. ಆದರೆ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡದ ಜೊತೆ ಪ್ರಯಾಣ ಮಾಡಿಲ್ಲ. ಭಜ್ಜಿ ನೇರವಾಗಿ ದುಬೈನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
undefined
ಸಿಎಸ್‌ಕೆ ಅಭ್ಯಾಸ ಶಿಬಿರ ಆರಂಭಿಸದಾಗ ರಾಂಚಿಯಿಂದ ಆಗಮಿಸಿದ ಧೋನಿ ನೋಡಲು ಅಭಿಮಾನಿಗಳ ಸಾಗರವೇ ನೆರೆದಿತ್ತು. ಅಭ್ಯಾಸದಲ್ಲಿ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿ ತಾನೂ ಈಗಲೂ ಫಿಟ್ ಹಾಗೂ ಫಾರ್ಮ್‌ನಲ್ಲಿದ್ದೇನೆ ಎಂಬ ಸೂಚನೆ ನೀಡಿದ್ದರು.
undefined
ಚೆನ್ನೈ ಆಲ್ರೌಂಡರ್ ರವೀಂದ್ರ ಜಡೇಜಾ ಉತ್ಸಾಹ ಹೆಚ್ಚಾಗಿದೆ. ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಹಲವು ಸರಣಿಗಳು ರದ್ದಾಗಿದೆ. ಇದೀಗ ಐಪಿಎಲ್ ಮೂಲಕ ಕ್ರಿಕೆಟ್ ಮತ್ತೆ ಮರಳುತ್ತಿದೆ.
undefined
click me!