PPE ಕಿಟ್ ಧರಿಸಿಯೇ ದುಬೈಗೆ ಬಂದಿಳಿದ ರಾಜಸ್ಥಾನ ರಾಯಲ್ಸ್..!

First Published Aug 21, 2020, 12:36 PM IST

ದುಬೈ: ಐಪಿಎಲ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಮುಂಬೈನಿಂದ ಗುರುವಾರ(ಆ.21) ಹೊರಟು  13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲು ದುಬೈ(ಯುಎಇ)ಗೆ ಬಂದಿಳಿದಿದೆ. ಎಲ್ಲಾ ಆಟಗಾರರು ಪಿಪಿಇ(ಪರ್ಸನಲ್ ಪ್ರೊಟೆಕ್ಷನ್ ಎಕ್ಯೂಪ್‌ಮೆಂಟ್) ಧರಿಸಿ ದುಬೈಗೆ ಪ್ರವೇಶ ಮಾಡಿದ್ದಾರೆ. ಮತ್ತೊಮ್ಮೆ ಕಪ್ ಗೆಲ್ಲುವ ಕನಸಿನೊಂದಿಗೆ ರಾಜಸ್ಥಾನ ರಾಯಲ್ಸ್ ಅರಬ್ಬರ ನಾಡಿಗೆ ಎಂಟ್ರಿ ಕೊಟ್ಟಿದೆ.

ದುಬೈಗೆ ವಿಮಾನ ಹತ್ತುವ ಮುನ್ನ ಮುಂಬೈನಲ್ಲಿ ರಾಜಸ್ಥಾನ ರಾಯಲ್ಸ್ ಪಡೆ ಕೇಕ್‌ ಕಟ್‌ ಮಾಡಿ ಆ ಬಳಿಕ ಅರಬ್ಬರ ನಾಡಿನ ಕಡೆ ಮುಖ ಮಾಡಿತು.
undefined
ಬಿಸಿಸಿಐ ಕಟ್ಟುನಿಟ್ಟಿನ ಸೂಚನೆಯಂತೆ ರಾಜಸ್ಥಾನ ರಾಯಲ್ಸ್‌ನ ಎಲ್ಲಾ ಆಟಗಾರರು ಹೋಟೆಲ್‌ನಲ್ಲಿಯೇ 7 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದ್ದರು.
undefined
ದುಬೈಗೆ ಬಂದಿಳಿದ ಬಳಿಕವೂ ಆಟಗಾರರು ಹೋಟೆಲ್‌ನಲ್ಲಿಯೇ ಒಂದು ವಾರಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.
undefined
ಇದಾದ ಬಳಿಕ ಆಟಗಾರರು ಅಭ್ಯಾಸಕ್ಕೆ ಮೈದಾನಕ್ಕಿಳಿಯಲಿದ್ದಾರೆ. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ.
undefined
ನೆನಪಿರಲಿ ರಾಜಸ್ಥಾನ ರಾಯಲ್ಸ್ ತಂಡವು 2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಬಳಿಕ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
undefined
ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಸೆಪ್ಟೆಂಬರ್‌ನಲ್ಲಿ ಯುಎಇಗೆ ಬಂದಿಳಿಯಲಿದ್ದು, ರಾಜಸ್ಥಾನ ತಂಡ ಕೂಡಿಕೊಳ್ಳಲಿದ್ದಾರೆ.
undefined
ಪಿಪಿಇ ಕಿಟ್‌ನಲ್ಲಿ ಕೊಡಗಿನ ಕುವರ ರಾಬಿನ್ ಉತ್ತಪ್ಪ
undefined
ರಾಜಸ್ಥಾನ ತಂಡದಲ್ಲಿರುವ ಮತ್ತೋರ್ವ ಕನ್ನಡಿಗ ಶ್ರೇಯಸ್ ಅಯ್ಯರ್
undefined
ಏರ್‌ಪೋರ್ಟ್‌ನಲ್ಲಿ ರಾಭಿನ್ ಉತ್ತಪ್ಪ ಹಾಗೂ ವರುಣ್ ಆ್ಯರೋನ್
undefined
ವಿಕ್ಟರಿ ಸಿಂಬಲ್ ತೋರಿಸುತ್ತಿರುವ ಮಹಿಪಾಲ್ ಲೊಮ್ರರ್
undefined
click me!