ಕೆಲವು ದಿನಗಳ ಹಿಂದಷ್ಟೇ ಆರ್‌ಸಿಬಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಆಟಗಾರರು ಬೆಂಗಳೂರಿನಲ್ಲಿ ಚೆಕ್ ಇನ್ ಆಗುವ ಫೋಟೋಗಳನ್ನು ಶೇರ್ ಮಾಡಿತ್ತು.
undefined
ಇದಾದ ಬಳಿಕ ಗುರುವಾರ(ಆ.20)ದಂದು ಎಲ್ಲಾ ಆಟಗಾರರ ಕಿಟ್ ಬ್ಯಾಗ್ ರೆಡಿಯಾಗಿರುವ ಫೋಟೋಗಳನ್ನು ಬೆಂಗಳೂರು ಮೂಲದ ಫ್ರಾಂಚೈಸಿ ಶೇರ್ ಮಾಡಿತ್ತು.
undefined
ಈ ಫೋಟೋದಲ್ಲಿ ದೇಶದ ಎಲ್ಲಾ ಆರ್‌ಸಿಬಿ ಆಟಗಾರರು ವಿಮಾನದೊಳಗೆ ಕುಳಿತುಕೊಂಡು ಫೋಸ್ ನೀಡಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಈ ಫೋಟೋದಲ್ಲಿ ನಾಪತ್ತೆಯಾಗಿದ್ದಾರೆ.
undefined
ಹಲವು ಮಂದಿ ನಾಯಕ ವಿರಾಟ್ ಕೊಹ್ಲಿ ಎಲ್ಲಿ ಎಂದು ಸಾಮಾಜಿಕ ಜಾಲತಾಣದ ಮೂಲಕವೇ ಪ್ರಶ್ನೆ ಮಾಡಿದ್ದಾರೆ.
undefined
ಸದ್ಯ ನಾಯಕ ವಿರಾಟ್ ಕೊಹ್ಲಿ ಮುಂಬೈನಲ್ಲಿದ್ದು, ಬೆಂಗಳೂರಿಗೆ ಬಂದಿಲ್ಲ. ಆರ್‌ಸಿಬಿ ಆಟಗಾರರಿರುವ ವಿಮಾನ ಮುಂಬೈಗೆ ಹೋಗಿ ವಿರಾಟ್ ಕೊಹ್ಲಿಯನ್ನು ಕರೆದುಕೊಂಡು ಹೋಗುತ್ತದೆಯೋ ಅಥವಾ ಅವರಿಗೆ ಬೇರೆ ವ್ಯವಸ್ಥೆಯಾಗಿದೆಯೋ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ
undefined
ವಿರಾಟ್ ಕೊಹ್ಲಿ ಯಾವಾಗಲೂ ಅಂತರ ಕಾಯ್ದುಕೊಳ್ಳುತ್ತಾರೆ. ಈ ಸೊಕ್ಕು ಯಾವಾಗ ಅವರಿಗೆ ಬಂತೋ ಗೊತ್ತಿಲ್ಲ. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಕೊಹ್ಲಿ 2 ಕೋಟಿ ರುಪಾಯಿ ಹೆಚ್ಚಿಗೆ ನೀಡಿದರು ಐಪಿಎಲ್ ಅಂಕಪಟ್ಟಿಯಲ್ಲಿ ಕೆಳ ಕ್ರಮಾಂಕದಿಂದ ಮೇಲೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಒಬ್ಬರು ಕಿಡಿಕಾರಿದ್ದಾರೆ.
undefined
ಮತ್ತೊಬ್ಬ ವ್ಯಕ್ತಿ ನಿಮ್ಮ ಮಾತು ನಿಜವಾಗಲು ಒಪ್ಪುತ್ತೇನೆ. ಅದೇ ಧೋನಿ ಹಾಗೂ ಕೊಹ್ಲಿಗೂ ನಡುವೆ ಇರುವ ವ್ಯತ್ಯಾಸ. ಸರಳತೆ, ಬದ್ಧತೆಯಿಂದಾಗಿ ಧೋನಿಯನ್ನು ಎಲ್ಲರೂ ಹೆಚ್ಚೆಚ್ಚು ಇಷ್ಟಪಡುತ್ತಾರೆ. ಕೊಹ್ಲಿ ಎಷ್ಟು ಸೊಕ್ಕಿನ ಮನುಷ್ಯ ಎಂದು ಎಲ್ಲರಿಗೂ ಗೊತ್ತು ಎಂದು ಟ್ವೀಟ್ ಮಾಡಿದ್ದಾರೆ.
undefined
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮರುದಿನವೇ ಚೆನ್ನೈನಲ್ಲಿ ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
undefined
ಆದರೆ ಕೊಹ್ಲಿ ಅಭಿಮಾನಿಗಳು ಆರ್‌ಸಿಬಿ ನಾಯಕನ ಬೆನ್ನಿಗೆ ನಿಂತಿದ್ದು, ಒಂದೇ ಫೋಟೋದ ಮೂಲಕ ಇಂತಹ ನಿರ್ಣಯಕ್ಕೆ ಬರಬಾರದು. ಅವರಿಗೆ ಏನು ಸಮಸ್ಯೆಯಾಗಿದೆ ಎಂದು ಯಾರಿಗೆ ಗೊತ್ತು ಎಂದು ಟ್ವೀಟ್ ಮಾಡಿದ್ದಾರೆ.
undefined
ಮತ್ತೊಬ್ಬ ಕೊಹ್ಲಿ ಅಭಿಮಾನಿ ಸರಿಯಾದ ಕಾರಣವೇ ಗೊತ್ತಿಲ್ಲದೇ ವಿರಾಟ್ ಬಗ್ಗೆ ಲಘುವಾಗಿ ಕಮೆಂಟ್ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾನೆ.
undefined
ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಂಚಿಕೊಂಡ ಫೋಟೋ ಎರಡು ಸ್ಟಾರ್ ಆಟಗಾರರ ಅಭಿಮಾನಿಗಳ ಮಾತಿನ ಚಕಮಕಿಗೆ ಕಾರಣವಾಗಿದೆ.
undefined
ಒಟ್ಟಿನಲ್ಲಿ ಕೊರೋನಾದ ನಡುವೆಯೇ ಐಪಿಎಲ್ ಜ್ವರ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
undefined
ಈ ವರ್ಷವಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದು 12 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಳ್ಳಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.
undefined