ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಉಳಿಸಲು ಶಕ್ತಿ ಮೀರಿ ಯತ್ನಿಸಿದ್ದ ಬ್ರೆಟ್ ಲೀ..!

First Published | Sep 26, 2020, 2:47 PM IST

ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ಮಂಗಳವಾರ(ಸೆ.22)ರಂದು ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದರು. ಮುಂಬೈನ ಹೋಟೆಲ್‌ನಲ್ಲಿರುವಾಗಲೇ ಈ ದುರ್ಘಟನೆ ಸಂಭವಿಸಿದೆ.
ಡೀನ್‌ ಝೋನ್ಸ್ ಹೃದಯಸ್ತಂಭನಕ್ಕೆ ಒಳಗಾದ ವೇಳೆ ಅದೇ ಹೋಟೆಲ್‌ನಲ್ಲಿ ಪಕ್ಕದಲ್ಲೇ ಇದ್ದ ಆಸೀಸ್ ಮಾಜಿ ಕ್ರಿಕೆಟಿಗ ಬ್ರೆಟ್‌ ಲೀ, ಡೀನ್ ಜೋನ್ಸ್‌ ಅವರ ಜೀವ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ.
 

ಐಪಿಎಲ್‌ ಟೂರ್ನಿಗೆ ವೀಕ್ಷಕ ವಿವರಣೆ ಮಾಡಲು ಮುಂಬೈಗೆ ಬಂದಿದ್ದ ಡೀನ್ ಜೋನ್ಸ್(59) ಹೋಟೆಲ್‌ನಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ.
ಜೋನ್ಸ್ ಹೋಟೆಲ್‌ನಲ್ಲಿ ಉಪಹಾರ ಮುಗಿಸಿ ಬ್ರೆಟ್‌ ಲೀ ಜತೆ ವಾಪಾಸಾಗುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಏಕಾಏಕಿ ಕುಸಿದು ಬಿದ್ದಿದ್ದಾರೆ.
Tap to resize

ಈ ಸಂದರ್ಭದಲ್ಲಿ ಜೋನ್ಸ್ ಉಳಿಸಿಕೊಳ್ಳಲು ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಶತಾಯಗತಾಯ ಪ್ರಯತ್ನಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ಬಾಯಿಗೆ ಬಾಯಿ ಕೊಟ್ಟು ಆಮ್ಲಜನಕವನ್ನು ಶ್ವಾಸಕೋಶಕ್ಕೆ ಪೂರೈಸಲು ಪ್ರಯತ್ನಿಸಿದ್ದಾರೆ.
ಮೊದಲಿಗೆ ಎದೆಯನ್ನು ಒತ್ತಿ ಸಾಧ್ಯವಾದಷ್ಟು ಹೃದಯಬಡಿತ ನಿಲ್ಲದಂತೆ ಮಾಡಲು ಲೀ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ.
ಆದರೆ ಬ್ರೆಟ್ ಲೀ ನಡೆಸಿದ ಯಾವ ಪ್ರಯತ್ನವೂ ಜೋನ್ಸ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಡೀನ್ ಜೋನ್ಸ್ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ ಬ್ರೆಟ್ ಲೀಗೆ ಜೋನ್ಸ್ ಪತ್ನಿ ಜೇನ್‌ ಜೋನ್ಸ್ ಧನ್ಯವಾದ ಅರ್ಪಿಸಿದ್ದಾರೆ.
ಡೀನ್ ಜೋನ್ಸ್ ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು.
ಡೀನ್ ಜೋನ್ಸ್ ಆಸ್ಟ್ರೇಲಿಯಾ ತಂಡ 1987ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ತಂಡದ ಸದಸ್ಯರಾಗಿದ್ದರು.
ಒಂದು ದಶಕಗಳ ಕಾಲ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಡೀನ್ ಜೋನ್ಸ್ 52 ಟೆಸ್ಟ್ ಹಾಗೂ 164 ಏಕದಿನ ಪಂದ್ಯಗಳನ್ನಾಡಿದ್ದರು.

Latest Videos

click me!