ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಹಕಾರಕ್ಕಾಗಿ ನಡೆಸಿಕೊಂಡು ಬರುತ್ತಿರುವ ಜಂಟಿ ಯುದ್ಧ ಅಭ್ಯಾಸ ನಾಳೆಯಿಂದ ಆರಂಭಗೊಳ್ಳುತ್ತಿದೆ. ಈಗಾಗಲೇ 350 ಭಾರತೀಯ ಯೋಧರು ಅಮೆರಿಕ ನೆಲದಲ್ಲಿ ಬೀಡುಬಿಟ್ಟಿದ್ದಾರೆ. 17ನೇ ಆವೃತ್ತಿ ಅಮೆರಿಕ ಭಾರತ ಜಂಟಿ ಯುದ್ಧ ಅಭ್ಯಾಸ ಅಲಸ್ಕಾದ ಜಂಟಿ ಬೇಸ್ ಎಲ್ಮೆಂಡೋರ್ಫ್ ರಿಚರ್ಡ್ಸನ್ ನಲ್ಲಿ ನಡೆಯಲಿದೆ.
ಈ ಜಂಟಿ ಯುದ್ಧ ಅಭ್ಯಾಸದಲ್ಲಿ ಭಾರತ ಹಾಗೂ ಅಮೆರಿಕ ಸೈನ್ಯ ಪರಸ್ಪರ ಯುದ್ಧ ಕೌಶಲ್ಯಗಳನ್ನು ಕಲಿಯಲಿದೆ. ಈಗಾಗಲೇ ಭಾರತೀಯ ಸೇನೆಯಾ ಇನ್ಫೆಂಟ್ರಿ ಬೆಟಾಲಿಯನ್ ತುಕಡಿಯ 350 ಯೋಧರು ಅಮೆರಿಕದ ಎಲಸ್ಕಾಗೆ ತೆರಳಿದ್ದಾರೆ. ಇಂದು(ಅ.14) ಭಾರತದಿಂದ ಅಲಸ್ಕಾಗೆ ತೆರಳಿರುವ ಇನ್ಫೆಂಟ್ರಿ ಬೆಟಾಲಿಯನ್ ನಾಳೆಯಿಂದ(ಅ.15) ಸಮರಾಭ್ಯಾಸದಲ್ಲಿ ತೊಡಗಿಕೊಳ್ಳಲಿದೆ.
ಈಗಾಗಲೇ 16 ಆವೃತ್ತಿಗಳು ಯಶಸ್ವಿಯಾಗಿರುವ ಭಾರತ ಹಾಗೂ ಅಮೆರಿಕ ಜಂಟಿ ಸಮರಭ್ಯಾಸ, ಅತೀ ದೊಡ್ಡ ಜಂಟಿ ಸೇನಾ ತರಬೇತಿ ಹಾಗೂ ಸೇನಾ ಸಹಾಕಾರ ಸಮರಾಭ್ಯಾಸ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಯುದ್ಧ ಅಭ್ಯಾಸದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಯುದ್ಧ ಕೌಶಲ್ಯಗಳನ್ನು ಪರಸ್ವರ ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಭಾರತ ಅಮೆರಿಕ ಜಂಟಿ ಯುದ್ಧ ಅಭ್ಯಾಸ, ಉಭಯ ದೇಶಗಳ ನಡುವಿನ ಸೇನಾ ಸಹಕಾರವನ್ನು ವೃದ್ಧಿಸುತ್ತದೆ. ಉಭಯ ದೇಶಗಳ ನಡುವಿನ ಸೈನ್ಯದ ನಡುವಿನ ತಿಳುವಳಿಕೆ, ಸಹಕಾರ ಹಾಗೂ ಯುದ್ಧ ಸಂದರ್ಭದಲ್ಲಿ ಸವಾಲು ಎದುರಿಸಲು ಈ ಯುದ್ಧ ಅಭ್ಯಾಸ ನೆರವಾಗಲಿದೆ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಸುಧೀರ್ ಚಮೋಲಿ ಹೇಳಿದ್ದಾರೆ.
ಭಾರತ ಅಮೆರಿಕ ಜಂಟಿ ಯುದ್ಧ ಅಭ್ಯಾಸ ಪ್ರತಿ ಆವೃತ್ತಿಯಲ್ಲಿ ಮಹತ್ತರ ಸವಾಲುಗಳಿಂದ ಕೂಡಿರುತ್ತದೆ. ಅತೀ ಶೀತದ ವಾತಾವರಣ, ಉರಿ ಬಿಸಿಲು, ಅತೀ ಎತ್ತರದ ಪ್ರದೇಶ ಸೇರಿದಂತೆ ಹಲವು ಸ್ಥರಗಳಲ್ಲಿ ಈ ಯುದ್ಧ ಅಭ್ಯಾಸ ತರಬೇತಿ ನಡೆಯಲಿದೆ. ಈ ಬಾರಿ ಅಮೆರಿಕ ಅಲಸ್ಕಾ ಬೇಸ್‌ನಲ್ಲಿ ನಡೆಯಲಿದೆ.
ಕಳೆದ ಬಾರಿ 16ನೇ ಆವೃತ್ತಿ ಅಮೆರಿಕ ಭಾರತ ಜಂಟಿ ಯುದ್ಧ ಅಭ್ಯಾಸ ಭಾರತದಲ್ಲಿ ನಡೆದಿತ್ತು. ರಾಜಸ್ಥಾನದ ಪಶ್ಚಿಮ ವಲಯದಲ್ಲಿರುವ ಮಹಾನ್ ಫೀಲ್ಡ್ ಫೈರಿಂಗ್ ರೇಂಜಸ್‌ನಲ್ಲಿ ಆಯೋಜಿಸಲಾಗಿತ್ತು. 16ನೇ ಯುದ್ದ ಅಭ್ಯಾಸ ಫೆಬ್ರವರಿ 8 ರಿಂದ ಫೆಬ್ರವರಿ 21ರ ವರೆಗೆ ನಡೆದಿತ್ತು. ಇದಕ್ಕೂ ಮೊದಲು ಜನವರಿಯಲ್ಲಿ ಭಾರತ ಅಮೆರಿಕ ಜಂಟಿ ಯುದ್ಧ ಅಭ್ಯಾಸ 5 ದಿನ ಕಾಲ ಆಯೋಜಿಸಲಾಗಿತ್ತು