ಲೂಡೋ ಆಡ್ತಾ ಆನ್‌ಲೈನಲ್ಲಿ ಲವ್.! ಮನೆಬಿಟ್ಟು ಓಡಿದ ಗೇಮ್ ಸುಂದರಿ

Published : Oct 14, 2021, 02:37 PM ISTUpdated : Oct 14, 2021, 02:47 PM IST

ಫೇಸ್‌ಬುಕ್, ಇನ್ಸಸ್ಟಾದಲ್ಲಿ ಮಾತ್ರವಲ್ಲ, ಗೇಮ್ಸ್ ಮೂಲಕವೂ ಶುರುವಾಗುತ್ತೆ ಲವ್ ಲೂಡೋ ಆಡ್ತಾ ಆಡ್ತಾ ಪ್ರೀತಿಗೆ ಬಿದ್ದ ಗೇಮಿಂಗ್ ಸುಂದರಿ ಆತನಿಗಾಗಿ ಮನೆ ಬಿಟ್ಟು ಪಾನಿಪತ್ ತಲುಪಿದ್ಲು

PREV
16
ಲೂಡೋ ಆಡ್ತಾ ಆನ್‌ಲೈನಲ್ಲಿ ಲವ್.! ಮನೆಬಿಟ್ಟು ಓಡಿದ ಗೇಮ್ ಸುಂದರಿ

ಪ್ರೀತಿ ಎಂದರೆ ಸುಮ್ನೇನಾ ? ಆನ್‌ಲೈನ್ ಪ್ರೀತಿಯಾಗೋ ಟ್ರೆಂಡ್ ಹಾಗಿರಲಿ. ಈಗ ಗೇಮಿಂಗ್ ಜಮಾನ. ಮಕ್ಕಳಿಂದ ವೃದ್ಧರ ತನಕ ಬರೀ ಗೇಮ್ ಕ್ರೇಜ್. ಒಂದಾ ಎರಡಾ ? ಆನ್‌ಲೈನಲ್ಲಿ ಎಷ್ಟೊಂದು ಗೇಮ್‌ಗಳಿವೆ

26

ಇಂಥ ಗೇಮ್ ಬರೀ ಆಟ ಆಡೋ ಮನೋರಂಜನೆ ತಾಣ ಮಾತ್ರವಲ್ಲ. ಹೊಸ ಕಾಂಟ್ಯಾಕ್ಟ್, ಫ್ರೆಂಡ್‌ಶಿಪ್, ಸಂಬಂಧ ಎಲ್ಲವೂ ಸಾಧ್ಯ. ಯುವಜನರಿಗೆ ಫನ್, ಗೇಮ್ ಜೊತೆ ಲವ್ ಕ್ರಶ್ ಎಲ್ಲವೂ ಇಲ್ಲಿಯೇ

36

ಬರೀ ಕಾರ್ ರೇಸ್, ಪಬ್ಜಿಯಂತಹ ಗೇಮ್ಸ್ ಮಾತ್ರ ಟ್ರೆಂಡ್ ಆಗುತ್ತಿತ್ತು. ಈಗ ಲೂಡೋದಂತಹ ದೇಸೀ ಸ್ಟೈಲ್ ಒಳಾಂಗಣ ಗೇಮ್‌ಗಳೂ ಮೊಬೈಲ್‌ನಲ್ಲಿ ಸಿಗುತ್ತವೆ. ಹಾಗಾಗಿಯೇ ಗೇಮ್ ಕಡೆಗೆ ಹೆಣ್ಮಕ್ಕಳ ಕ್ರೇಜ್ ಕೂಡಾ ಹೆಚ್ಚಾಗಿದೆ

46

ಆನ್‌ಲೈನ್ ಲೂಡೋ ಆಫ್‌ಲೈನ್ ಗೇಮ್‌ನಂತಲ್ಲ. ತಂಡ ಕಟ್ಟಿ ಆಡಬಹುದು. ಅಥವಾ ಇಬ್ಬರೇ ಆಡಬಹುದು. ಅಲ್ಲಿ ಆಯ್ಕೆ ಹೆಚ್ಚಿದೆ. ಖಾಸಗಿತನ ಬಯಸುವವರು ಇಬ್ಬಿಬ್ಬರೇ ಕೋಡ್ ಮಾಡಿಕೊಂಡು ಆಡುತ್ತಾರೆ.

56

ಹೀಗೆ ಲೂಡೋ ಕ್ರೇಜ್ ಹುಟ್ಟಿಸಿಕೊಂಡ ಯುವತಿ ಆಟ ಆಡ್ತಾ ಆಡ್ತಾ ಅಲ್ಲಿಯೇ ತನ್ನ ಸಂಗಾತಿಯನ್ನೂ ಹುಡುಕಿಕೊಂಡಿದ್ದಾಳೆ. ಒಡಿಶಾ ಯುವತಿ ಗೇಮ್ ಆಡುತ್ತಾ ಹರಿಯಾಣದ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇಬ್ಬರಿಗೂ ಲೂಡೂ ಕ್ರೇಜ್ ಹಾಗೂ ಪರಸ್ಪರ ಪ್ರೀತಿ.

66

ತನ್ನ ಮನೆಯಿಂದ ಓಡಿ ಹೋದ ಯುವತಿ ಗೇಮ್ ಗೆಳೆಯನ ಮದುವೆಯಾಗಲು ಹರಿಯಾಣಕ್ಕೆ ಬಂದಿದ್ದಾಳೆ. ಇಬ್ಬರೂ ಪಾನಿಪತ್‌ನಲ್ಲಿ ಮದುವೆಯಾಗುವವರಿದ್ದರು. ಆದರೆ ದುರಾದೃಷ್ಟವಶಾತ್ ಇಬ್ಬರೂ ಅಪ್ರಾಪ್ತರು. ಹಾಗಾಗಿ ಇವರ ಮದುವೆ ನಡೆದಿಲ್ಲ. ಮದುವೆಯಾಗಿ ಜೊತೆಯಾಗಿ ಗೇಮ್ ಆಡೋ ಈ ಜೋಡಿಯ ಕನಸು ಭಗ್ನವಾಗಿದೆ. ಸದ್ಯ ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೆ ಲೂಡೋ ಆಡಬೇಕಷ್ಟೆ

click me!

Recommended Stories