ಭಾರತವು ಹಲವಾರು ವಾಸ್ತುಶಿಲ್ಪದ ಅದ್ಭುತಗಳಿಗೆ ನೆಲೆಯಾಗಿದೆ. ಈ ಪಟ್ಟಿಗೆ ಶೀಘ್ರದಲ್ಲೇ, ಪಶ್ಚಿಮ ಬಂಗಾಳದ ಮಾಯಾಪುರದಲ್ಲಿರುವ ವೇದಿಕ್ ಪ್ಲಾನಿಟೋರಿಯಂ ದೇವಾಲಯವು ದೇಶದ ಐಕಾನಿಕ್ ಕಟ್ಟಡಗಳ ಪಟ್ಟಿಗೆ ಸೇರಲಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವೆಂದು ನಂಬಲಾದ ಈ ದೇವಾಲಯವು ವ್ಯಾಟಿಕನ್‌ನ ಸೇಂಟ್ ಪಾಲ್ ಕ್ಯಾಥೆಡ್ರಲ್ ಮತ್ತು ಆಗ್ರಾದ ತಾಜ್ ಮಹಲ್‌ಗಿಂತ ದೊಡ್ಡದಾಗಿದೆ. ಹಾಗೂ, ಈ ಧಾರ್ಮಿಕ ಕಟ್ಟಡವು ವಿಶ್ವದ ಅತಿದೊಡ್ಡ ಗುಮ್ಮಟವನ್ನು ಹೊಂದಿರುತ್ತದೆ.