ರಾಹುಲ್ ಗಾಂಧಿ ಇತ್ತೀಚೆಗೆ ಗೋವಾ ಪ್ರವಾಸ ಮಾಡಿದ್ದರು. ಈ ವೇಳೆ ಗೋವಾದಿಂದ ವಿಶೇಷ ತಳಿ ನಾಯಿ ಮರಿಯನ್ನು ತಂದು, ತಾಯಿ ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಹುಲ್ ಗಾಂಧಿ ಉಡುಗೊರೆ ಪಡೆದ ಸೋನಿಯಾ ಗಾಂಧಿ ಭಾವುಕರಾಗಿದ್ದಾರೆ.
ವಿಶ್ವ ಪ್ರಾಣಿಗಳ ದಿನದಂದು ರಾಹುಲ್ ಗಾಂಧಿ ತಮ್ಮ ಕುಟುಂಬದ ಹೊಸ ಸದಸ್ಯನ ಪರಿಚಯಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಹುಲ್ ಗಾಂಧಿ ಗೋವಾ ಪ್ರವಾಸ ತೆರಳಿದ್ದರು. ಈ ವೇಳೆ ಗೋವಾದಿಂದ ವಿಶೇಷ ತಳಿಯ ನಾಯಿ ಮರಿಯನ್ನು ದೆಹಲಿಗೆ ತಂದಿದ್ದಾರೆ.
28
ಗೋವಾದ ಶಾರ್ವಣಿ ಪಿತ್ರೆ ಹಾಗೂ ಸ್ಟಾನ್ಲಿ ಬ್ರಾಗಾಂಕಾ ದಂಪತಿ, ಜ್ಯಾಕ್ ರಸೆಲ್ ಟರಿಯರ್ ನಾಯಿ ತಳಿಗಳನ್ನು ಬೆಳೆಸುತ್ತಿದ್ದಾರೆ. ಈ ಮಾಹಿತಿ ಪಡೆದು ಗೋವಾಗೆ ತೆರಳಿದ ರಾಹುಲ್ ಗಾಂಧಿ ಅವರ ಮನೆಗೆ ಭೇಟಿ ನೀಡಿದ್ದಾರೆ.
38
ರಾಹುಲ್ ಗಾಂಧಿಗೆ ಜ್ಯಾಕ್ ರಸೆಲ್ ಟರಿಯರ್ ನಾಯಿ ಅಚ್ಚು ಮೆಚ್ಚು. ಹೀಗಾಗಿ ಮೊದಲೇ ಕರೆ ಮಾಡಿ ನಾಯಿ ಮರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಮನೆಗೆ ಬಂದ ರಾಹುಲ್ ಗಾಂಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಗೋವಾ ಕುಟುಂಬ ಎರಡು ನಾಯಿ ಮರಿಗಳನ್ನು ರಾಹುಲ್ ಕೈಗೆ ನೀಡಿದ್ದಾರೆ.
48
ಗೋವಾ ಕುಟುಂಬದ ಜೊತೆ ಕೆಲ ಹೊತ್ತು ಕಳೆದ ರಾಹುಲ್ ಗಾಂಧಿ, ನಾಯಿ ಮರಿಗಳ ಜೊತೆಗೆ ಆಟವಾಡಿದ್ದಾರೆ. ಈ ನಾಯಿ ಮರಿ ಹೆಸರು ನೂರೀ. ಬಳಿಕ ನಾಯಿ ಮರಿಯನ್ನು ಪಡೆದು ಮರಳಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
58
ವಿಮಾನದ ಮೂಲಕ ದೆಹಲಿಗೆ ಆಗಮಿಸಿದ ರಾಹುಲ್ ಗಾಂಧಿ, ಮೆಟ್ರೋ ಮೂಲಕ ಮನೆಗೆ ತಲುಪಿದ್ದಾರೆ. ಮನೆಗೆ ಆಗಮಿಸಿದ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿಯನ್ನು ಹೊರಗೆ ಕರೆದು ಸರ್ಪ್ರೈಸ್ ಉಡುಗೊರೆ ಇದೆ ಎಂದಿದ್ದಾರೆ.
68
ಮನೆಯಲ್ಲಿ ಹಾಯಾಗಿದ್ದ ಸೋನಿಯಾ ಗಾಂಧಿ ದಿಢೀರ್ ಕ್ಯಾಮೆರಾ ಮುಂದೆ ಬರಲು ಹಿಂಜರಿದಿದ್ದಾರೆ. ಆದರೆ ರಾಹುಲ್ ಗಾಂಧಿ ಮನವಿ ಮೇರೆಗೆ ಹೊರಬಂದ ಸೋನನಿಯಾ ಗಾಂಧಿ ಸರ್ಪ್ರೈಸ್ ಗಿಫ್ಟ್ ತೆರೆದು ನೋಡಿದಾಗ ಅಚ್ಚರಿ ಕಾದಿದೆ.
78
ವಿಶೇಷ ತಳಿಯ ನಾಯಿ ಮರಿ ನೋಡಿ ಸೋನಿಯಾ ಗಾಂಧಿ ಪುಳಕಿತರಾಗಿದ್ದಾರೆ. ಈಕೆ ತುಂಬಾ ಕ್ಯೂಟ್ ಆಗಿದ್ದಾಳೆ ಎಂದು ನಾಯಿ ಮರಿ ಜೊತೆ ಸೋನಿಯಾ ಗಾಂಧಿ ಕೂಡ ಕೆಲ ಹೊತ್ತು ಕಳೆದಿದ್ದಾರೆ.
88
ಗೋವಾದ ಜ್ಯಾಕ್ ರಸೆಲ್ ಟರಿಯರ್ ನಾಯಿ ಮರಿ ಇದೀಗ ದೆಹಲಿಯಲ್ಲಿ ಗಾಂಧಿ ಕುಟುಂಬ ಸೇರಿಕೊಂಡಿದೆ. ವಿಶ್ವ ಪ್ರಾಣಿಗಳ ದಿನದಂದು ಈ ವಿಶೇಷ ಕುಟುಂಬ ಸದಸ್ಯನ ಭಾರತೀಯರಿಗೆ ಪರಿಚಯಿಸಿದ್ದಾರೆ.