ವಂದೇ ಭಾರತ್ ಸ್ಲೀಪರ್ ಕೋಚ್ ಹೇಗಿದೆ ನೋಡಿ... ಫೋಟೋ ಹಂಚಿಕೊಂಡ ರೈಲ್ವೆ ಸಚಿವರು

First Published Oct 4, 2023, 11:43 AM IST

ನವದೆಹಲಿ: ಹಲವು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳನ್ನು ಬಿಡುವ ಮೂಲಕ ಪ್ರಯಾಣದ ಸಮಯದ ಉಳಿಕೆಯ ಜೊತೆ  ಅತ್ಯಾಧುನಿಕ ತಂತ್ರಜ್ಞಾನದ  ಮೂಲಕ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅವಕಾಶ ನೀಡಿ ಮೆಚ್ಚುಗೆಗೆ ಪಾತ್ರವಾಗಿರುವ ಭಾರತೀಯ ರೈಲ್ವೆ ಈಗ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಹೆಚ್ಚಿಸಿದೆ.

Vande Bharat sleeper coach

ಕೂನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು  ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಹೊಸ ವಂದೇ ಭಾರತ್ ರೈಲುಗಳು ಮುಂದಿನ ವರ್ಷದಿಂದ ಸೇವೆಗೆ ಲಭ್ಯವಾಗಲಿವೆ. ಇವು ಪ್ರಯಾಣಿಕರಿಗೆ ವೇಗದ ಜೊತೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ.

Vande Bharat sleeper coach

ವಂದೇ ಭಾರತ್‌  ಕಾನ್ಸೆಪ್ಟ್‌ನ ಸ್ಲೀಪರ್ ಆವೃತ್ತಿ ರೈಲು  ಶೀಘ್ರದಲ್ಲೇ ಬರಲಿದೆ 2024 ರ ಆರಂಭದಲ್ಲಿ ಎಂದು ರೈಲ್ವೆ ಸಚಿವರು ಕೂನಲ್ಲಿ ಬರೆದಿದ್ದಾರೆ

Vande Bharat sleeper coach

ವಂದೇ ಭಾರತ್ ಸ್ಲೀಪರ್ ಕೋಚ್‌ಗಳು ಈಗಾಗಲೇ ವಿಶಾಲವಾದ ಬರ್ತ್‌ಗಳು, ಸುಂದರವಾದ ಒಳಾಂಗಣಗಳು, ವಿಶಾಲವಾದ ಶೌಚಾಲಯಗಳು, ಮಿನಿ ಪ್ಯಾಂಟ್ರಿ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳ ಕಾರಣಕ್ಕೆ ಪ್ರಸಿದ್ಧಿಯಲ್ಲಿದೆ.

Vande Bharat sleeper coach

ಈಗ ಈ ವಂದೇ ಭಾರತ್‌ನ ಸ್ಲೀಪರ್‌ ಕೋಚ್‌ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ರೂಪುಗೊಂಡಿದ್ದು, ಹೊಸ ರೈಲುಗಳು ಪ್ರಸ್ತುತ ಕೋಚ್‌ಗಳಿಗಿಂತ ಹೆಚ್ಚು ಸಮರ್ಥವಾಗಿದ್ದು,  ಪರಿಸರ ಸ್ನೇಹಿಯಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.

Vande Bharat sleeper coach

ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಪರಿಚಯವು ಭಾರತೀಯ ರೈಲ್ವೇಗೆ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಇದು ರಾತ್ರಿಯಿಡೀ ಹೆಚ್ಚಿನ ವೇಗದದೊಂದಿಗ ಬಹಳ ದೂರದವರೆಗೆ ಆರಾಮದಾಯಕವಾಗಿ ನಿದ್ರಿಸುತ್ತಾ ಪ್ರಯಾಣಿಸುವ ಅವಕಾಶ ನೀಡುತ್ತದೆ.

ಮುಂದಿನ ವರ್ಷ ವಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ಕೋಚ್ ಕೂಡ ಕಾರ್ಯನಿರ್ವಹಿಸಲಿದೆ. ಇಷ್ಟು ದಿನ ವಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ವ್ಯವಸ್ಥೆ ಇರಲಿಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣ ಕೂನಲ್ಲಿ ವಂದೇ ಭಾರತ್ ರೈಲಿನ ಸ್ಲೀಪರ್ ಕೋಚ್‌ನ ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್ ಆಗಿದೆ. 

vande bharat

ವೇಗವಾಗಿ ತಲುಪುವುದರಿಂದ ಸಮಯವಕಾಶವೂ ಉಳಿಯುವುದರ ಜೊತೆಗೆ ಆರಾಮದಾಯಕವಾಗಿಯೂ ಪ್ರಯಾಣ ಮಾಡುವ ಅವಕಾಶ ಇರುವುದರಿಂದ ಇದು ರೈಲ್ವೆ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲಿದೆ. 

Vande bharat train

ಪ್ರಗತಿಪರ ಮತ್ತು ಸ್ವಾವಲಂಬಿ ಭಾರತದ ಸಂಕೇತವೆನಿಸಿರುವ ಸ್ಥಳೀಯ ಹೈ ಸ್ಪೀಡ್ ರೈಲು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ, ಹಾಗೂ ಸೇವೆ ಈ ರೈಲಿನ ಹಾಲ್‌ಮಾರ್ಕ್ ಆಗಲಿದೆ. 

ವಿಶ್ವದರ್ಜೆಯ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆ ನೀಡುತ್ತದೆ. 2019ರಲ್ಲಿ ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಿದ್ದರು. 

ಫೆಬ್ರವರಿ 15, 2019 ರಂದು ನವದೆಹಲಿ ಮತ್ತು ವಾರಣಾಸಿ ನಡುವೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್  ರೈಲು ಆರಂಭವಾಗಿತ್ತು. ಈ ರೈಲನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾಗಿತ್ತು.

click me!