ರೈತರ ಪ್ರತಿಭಟನೆ ಮತ್ತೊಂದು ಹಂತಕ್ಕೆ ತಲುಪುತ್ತಿದೆ. ದೆಹಲಿ ಗಡಿಯಲ್ಲಿ ಪಂಜಾಬ್, ಹರ್ಯಾಣ ಸೇರಿದಂತೆ ಹಲವು ಭಾಗಗಳಿಂದ ರೈತರು ದೆಹಲಿ ಸೇರಿದ್ದಾರೆ.
undefined
ಭಾರತ್ ಬಂದ್, ಹೆದ್ದಾರಿ ಬಂದ್ ಸೇರಿದಂತೆ ಹಲವು ರೀತಿಯ ಪ್ರತಿಭಟನೆಗಳನ್ನು ರೈತರು ಕೈಗೊಂಡಿದ್ದಾರೆ. ರೈತರ ಪ್ರತಿಭಟನೆಗೆ ಫ್ರಾನ್ಸ್ ಸೇರಿದಂತೆ ವಿವಿದ ದೇಶಗಳಿಂದ ಬೆಂಬಲ ವ್ಯಕ್ತವಾಗಿತ್ತು.
undefined
ಕೇಂದ್ರ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿ ಇದೀಗ ಲಂಡನ್ ಬೀದಿಗಳಲ್ಲಿ ಪ್ರತಿಭಟನೆ ಆರಂಭಗೊಂಡಿದೆ. ಲಂಡನ್‌ನಲ್ಲಿ ಹುಟ್ಟಿದ, ಭಾರತದೊಂದಿಗೆ ಯಾವುದೇ ಸಂಪರ್ಕವಿಲ್ಲದ ಹಲವರು ಪ್ರತಿಭಟನೆ ಬೆಂಬಲಿಸಲು ಕಾರಣವೇನು?
undefined
ಲೈಸೆಸ್ಟರ್ ನಿವಾಸಿಯಾಗಿರುವ ಗುಪಿ ಸಂಧು, ಲಂಡನ್ ಪ್ರತಿಭಟನೆಯ ಕಾರಣಗಳನ್ನು ಹೇಳಿದ್ದಾರೆ. ರೈತ ಪ್ರತಿಭಟನೆ ನಮ್ಮನ್ನು ಬೆಸೆಯುತ್ತದೆ. ನನ್ನ ಅಜ್ಜ ರೈತ. ನಾನು ರೈತನಲ್ಲ. ಆದರೆ ನನ್ನ ಅಜ್ಜಂದಿರ ಕಠಿಣ ಅಧ್ವಾನದ ಫಲವಾಗಿ ನಾನಿಂದು ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದಿದ್ದಾರೆ.
undefined
ಕೆಲ ಹೋರಾಟಕ್ಕೆ ಭಾಷೆ, ಗಡಿ, ದೇಶದ ಪರಿಮಿತಿ ಇರುವುದಿಲ್ಲ. ರೈತ ಎಲ್ಲಾ ದೇಶದ ಆಸ್ತಿಯಾಗಿದ್ದಾನೆ. ಅಮೆರಿಕದಲ್ಲಿ ಹುಟ್ಟಿಕೊಂಡ ಕಪ್ಪು ವರ್ಣ ಬೇಧ ನೀತಿ ವಿರುದ್ಧ ಲಂಡನ್ ಸೇರಿದಂತೆ ಎಲ್ಲಾ ದೇಶದಲ್ಲಿ ಪ್ರತಿಭಟನೆ ಜೋರಾಗಿತ್ತು.
undefined
ಜಾರ್ಜ್ ಫ್ಲಾಯ್ದ್ ಅಮೇರಿಕದವನಾಗಿದ್ದರೂ, ಬದುಕುವ ಹಕ್ಕಿಗಾಗಿ ಹೋರಾಟ ನಡೆಸಲಾಗಿತ್ತು. ಇದು ಕೂಡ ಅದೇ ರೀತಿ ಭಾರತದ ರೈತರಾಗಿದ್ದರೂ, ಲಂಡನ್‌ಗೂ ಸಂಬಂಧ ಹೊಂದಿದೆ. ಹೀಗಾಗಿ ರೈತರಿಗೆ ಸಂಪೂರ್ಣ ಬೆಂಬಲವಿದೆ ಎಂದು ಗುಪಿ ಸಂಧು ಹೇಳಿದ್ದಾರೆ. ಅತೀ ದೊಡ್ಡ ರ್ಯಾಲಿ ಆಯೋಜಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
undefined
ಗುಪಿ ಸಂದು ಪುತ್ರಿ ಸಾಮಾಜಿಕ ಜಾಲತಾಣದ ಮೂಲಕ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ರೈತರ ಬೇಡಿಕೆ ಈಡೇರುವ ವರೆಗೆ ಸಾಮಾಜಿಕ ಜಾಲತಾಣದಲ್ಲಿ ರೈತರ ಪರವಾಗಿ ಆಂದೋಲನ ನಡೆಸುವುದಾಗಿ ಹೇಳಿದ್ದಾರೆ.
undefined
ಲಂಡನ್ ನಿವಾಸಿಯಾಗಿರುವ ಮತ್ತೊರ್ವ ಪಂಜಾಬ್ ಮೂಲದ ಭಾರತೀಯ ಕೂಡ ರೈತರ ಪರವಾಗಿ ಲಂಡನ್ ಬೀದಿಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ನನ್ನ ತಂದೆ ಗುರ್ದೀಪ್ ಸಿಂಗ್ ಬಾಸಿ ರೈತರಾಗಿದ್ದಾರೆ. ಅವರ ಪರಿಶ್ರಮದಿಂದ ನಾನು ಲಂಡನ್‌ನಲ್ಲಿದ್ದೇನೆ ಎಂದಿದ್ದಾರೆ.
undefined
ರೈತರ ಪರವಾಗಿ ನಾನು ಧ್ವನಿ ಎತ್ತುತ್ತೇನೆ. ನನ್ನ ತಂದೆ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಹೋರಾಟಕ್ಕೆ ಯಶಸ್ಸು ಸಿಗಲಿದೆ ಎಂದಿದ್ದಾರೆ.
undefined