ರೈತರ ಬೇಡಿಕೆ ಈಡೇರದಿದ್ದರೆ ಜನ ಆಂದೋಲನ; ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ!

Published : Dec 11, 2020, 01:34 PM ISTUpdated : Dec 11, 2020, 01:36 PM IST

ಜನ ಲೋಕಪಾಲ್ ಕಾಯ್ದೆ ಆಂದೋಲನ ಮೂಲಕ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇದೀಗ ಜನ ಆಂದೋಲನ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.  

PREV
18
ರೈತರ ಬೇಡಿಕೆ ಈಡೇರದಿದ್ದರೆ ಜನ ಆಂದೋಲನ; ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ!

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ  ಸಾಮಾಜಿಕ ಹೋರಾಟ ಅಣ್ಣ ಹಜಾರೆ ತಮ್ಮ ಬೆಂಬಲ ವಿಸ್ತರಿಸಿದ್ದಾರೆ.  ರೈತರ ಪರ ಧ್ವನಿ ಎತ್ತಿದ ಅಣ್ಣ ಹಜಾರೆ ಇದೀಗ ಕೇಂದ್ರ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

28

ರೈತರ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಆದರೆ ಕೇಂದ್ರ ರೈತರ ಪ್ರತಿಭಟನೆಗೆ ಸೊಪ್ಪು ಹಾಕದಿದ್ದರೆ, ಜನ ಆಂದೋಲನ ನಡೆಸುವುದಾಗಿ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ. 

38

ರೈತರು ಭಾರತ್ ಬಂದ್ ನಡೆಸಿದ ದಿನ ಅಣ್ಣ ಹಜಾರೆ ತಮ್ಮ ಸ್ವ ಗ್ರಾಮ ರಾಲೆಗಣ ಸಿದ್ದಿಯಲ್ಲಿ ಆಂದೋಲನ ನಡೆಸಿದ್ದಾರೆ. ಭಾರತ್ ಬಂದ್ ದಿನ ಅಣ್ಣ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿದ್ದರು.

48

ಈ ಉಪವಾಸ ಸತ್ಯಾಗ್ರಹ ಹಾಗೂ ಆಂದೋಲನವನ್ನು ವಿಸ್ತರಿಸಲು ಅಣ್ಣಾ ಹಜಾರೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸದಿದ್ದರೆ ದೇಶವ್ಯಾಪಿ ಆಂದೋಲನ ನಡೆಸುವುದಾಗಿ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ.

58

2011ರಲ್ಲಿ ಜನ ಲೋಕಪಾಲ್ ಬಿಲ್‌ಗಾಗಿ ಉಪವಾಸ ಸತ್ಯಾಗ್ರಹ ನಡೆಸಿದಂತೆ ಇದೀಗ ರೈತರ ಬೇಡಿಕೆಯನ್ನು ಕೇಂದ್ರ ಈಡೇರಿಸದಿದ್ದರೆ ಮತ್ತೊಮ್ಮೆ ಜನ ಆಂದೋಲನ ನಡೆಸುವಾಗಿ ಅಣ್ಣ ಹಜಾರೆ ಸ್ಪಷ್ಟಪಡಿಸಿದ್ದಾರೆ.

68

ಕೇಂದ್ರದ 3 ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ, ಕಾಯ್ದೆ ಹಿಂಪಡೆಯುವ ಕುರಿತು ಯಾವುದೇ ಸೂಚನೆ ನೀಡಿಲ್ಲ.

78

ಹೀಗಾಗಿ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಈಗಾಲೇ ಡಿಸೆಂಬರ್ 8 ರಂದು ಭಾರತ್ ಬಂದ್ ನಡೆಸಿದ್ದ ರೈತರು, ಇದೀಗ ಡಿಸೆಂಬರ್ 12 ರಂದು ದೆಹಲಿ, ಆಗ್ರಾ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.

88

ಕೇಂದ್ರ ಸರ್ಕಾರ ಕೃಷಿ ಮಸೂದೆ ಹಿಂಪಡೆಯುವ ವರೆಗೂ ಹೋರಾಟ ಮುಂದುವರಿಯಲಿದೆ. ಪಂಜಾಬ್ ಹಾಗೂ ಹರ್ಯಾಣದಲ್ಲಿ ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಳ್ಳುತ್ತಿದೆ.

click me!

Recommended Stories