ಹಿಮದ ಹೊದಿಕೆ ಹೊತ್ತ ಕಣಿವೆ ನಾಡು, ಭೂಮಿ ಮೇಲಿನ ಸ್ವರ್ಗದಂತಾದ ಗಡಿ ಪ್ರದೇಶ!

First Published Dec 12, 2020, 5:10 PM IST

ಜಮ್ಮು ಕಾಶ್ಮೀರದಲ್ಲಿ ಶನಿವಾರದಂದು ಚಳಿಗಾಲದ ಮೊದಲ ಮಂಜು ಸುರಿದಿದೆ. ಶ್ರೀನಗರವಂತೂ ದಪ್ಪಗಿನ ಹಿಮದ ಹೊದಿಕೆಯಿಂದ ಮುಚ್ಚಿದೆ. ಇದರಿಂದಾಗಿ ಕಣಿವೆ ನಾಡಿನಲ್ಲಿ ಚಳಿ ತೀವ್ರತೆಯೂ ಹೆಚ್ಚಿದೆ. ಕಾಶ್ಮೀರದ ಗುಲ್ಮರ್ಗ್ ಹಾಗೂ ಪಹಲ್‌ಗಾಮ್‌ನಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದಿದೆ. ಅತ್ತ ಹಿಮಾಚಲದ ಲಾಹೌಲ್ ಸ್ಪೀತಿಯಲ್ಲೂ ಮಂಜು ಸುರಿದಿದೆ. ಫೋಟೋಗಳಲ್ಲಿ ನೀವೇ ನೋಡಿ ಭೂಮಿ ಮೇಲಿನ ಸ್ವರ್ಗದಂತಿರುವ ಗಡಿ ಪ್ರದೇಶದ ಮನಮೋಹಕ ದೃಶ್ಯ

ಜಮ್ಮು ಕಾಶ್ಮೀರದಲ್ಲಿ ಶ್ರೀನಗರ ಹೊರತುಪಡಿಸಿ ಉದಂಪುರದಲ್ಲೂ ಮಂಜು ಸುರಿದಿದೆ. ಹವಾಮಾನ ಇಲಾಖೆ ಕೂಡಾ ಜಮ್ಮುವಿನಲ್ಲಿ ಮಂಜು ಸುರಿಯುವ ವರದಿ ನೀಡಿದ್ದರೆ, ಕಾಶ್ಮೀರದಲ್ಲಿ ಮಂಜು ಹಾಗೂ ಮಳೆ ಸುರಿಯುವ ಎಚ್ಚರಿಕೆ ನೀಡಿದೆ.
undefined
ಅಲ್ಲದೇ ಹವಾಮಾನ ಇಲಾಖೆ ಕಣಿವೆ ನಾಡಿನಲ್ಲಿ ಡಿಸೆಂಬರ್ 20ವರೆಗೆ ಶೂನ್ಯ ತಾಪಮಾನ ಇರುವ ಅಂದಾಜು ವ್ಯಕ್ತಪಡಿಸಿದೆ.
undefined
ಹಿಮದಿಂದಾಗಿ ಜಮ್ಮು ಕಾಶ್ಮೀರದ ಪುಂಚ್, ಡೋಡಾ, ಕಿಶ್ತವಾಡ ಹಾಗೂ ಕುಲಗಾಂ ಹಾಗೂ ಲಡಾಖ್‌ನ ಕಾರ್ಗಿಲ್‌ನ ಎತ್ತರ ಪ್ರದೇಶಗಳಲ್ಲಿ ಹಿಮ ಕುಸಿತವುಂಟಾಗುವುದಾಗಿ ಎಚ್ಚರಿಕೆ ನೀಡಿದೆ.
undefined
ಹಿಮಾವೃತದಿಂದಾಗಿ ಜಮ್ಮು ಹಾಗೂ ಶ್ರೀನಗರ ನಡುವಿನ ಹೆದ್ದಾರಿ ಬಂದ್ ಆಗಿದೆ. ಜವಾಹರ್ ಸುರಂಗದೊಳಗೂ ಸುಮಾರು ಒಂಭತ್ತು ಇಂಚಿನಷ್ಟು ದಪ್ಪದ ಹಿಮ ಬಿದ್ದಿದೆ.
undefined
ಜಮ್ಮು ಕಾಶ್ಮೀರ ಹೊರತುಪಡಿಸಿ ಹಿಮಾಚಲ ಪ್ರದೇಶದ ಕೆಲ ಪ್ರದೇಶಗಳಲ್ಲೂ ಹಿಮ ಸುರಿದಿದೆ.
undefined
ಲಾಹೌಲ್ ಸ್ಪೀತಿಯರಶೇಲ್ ಹಳ್ಳಿಯಲ್ಲಿ ಕಂಡು ಬಂದ ದೃಶ್ಯ.
undefined
click me!