ಲಡಾಕ್‌ನ ಮೈ ಕೊರೆಯೋ ಚಳಿಯಲ್ಲಿ ಧರಣಿ ಮಾಡ್ತಿರೋದ್ಯಾಕೆ? ಸೋನಮ್ ವಾಂಗ್ಚುಕ್ ಯಾರು ?

First Published Jan 29, 2023, 2:59 PM IST

3 ಈಡಿಯಟ್ಸ್’ಗೆ (3 Idiots) ಸ್ಫೂರ್ತಿಯಾಗಿದ್ದ ಲಡಾಖ್‌ನ ಸಾಮಾಜಿಕ ಸುಧಾರಣಾವಾದಿ ಇಂಜಿನಿಯರ್, ಸಂಶೋಧಕ ಮತ್ತು ಶಿಕ್ಷಣ ತಜ್ಞ ಮತ್ತು ಶಾಲಾ ಶಿಕ್ಷಣದಲ್ಲಿ ಹೊಸತನವನ್ನು ತಂದ ದೇಶದ ಹೆಮ್ಮೆಯ ವ್ಯಕ್ತಿ ಸೋನಮ್ ವಾಂಗ್ಚುಕ್.

ಇಂತಹ  ಸೋನಮ್ ವಾಂಗ್ಚುಕ್ ಅವರು ಈಗ ಲಡಾಕ್‌ನ 18,000 ಅಡಿ ಎತ್ತರದ 40 ಡಿಗ್ರಿ ಸೆಲ್ಸಿಯಸ್‌ ಇರುವ ಖರ್ದುಂಗ್ಲಾ ಪಾಸ್‌ನಲ್ಲಿ ಲಡಾಕ್ ಉಳಿವಿಗಾಗಿ ಉಪವಾಸ ಶುರು ಮಾಡಿದ್ದಾರೆ. 

ಜನವರಿ 26ರರಿಂದ ಐದು ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ ಅವರು ಈಗ ಅದನ್ನು ಮುಂದುವರಿಸಿದ್ದಾರೆ. ಲಡಾಕ್‌ನಲ್ಲಿ ಹಿಮಗಡ್ಡೆಗಳು ಅಳಿವಿನಂಚಿನಲ್ಲಿ ಇದ್ದು, ಕೇಂದ್ರಾಡಳಿತ ಪ್ರದೇಶವಾದ ಲಡಾಕ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬುದು ಅವರ ವಾದ

ಲಡಾಕ್‌ನ ಖರ್ದುಂಗ್ಲಾ ಎಂಬ ಪ್ರದೇಶದಲ್ಲಿ ಐದು ದಿನ ಉಪವಾಸ ಶುರು ಮಾಡಿದ ಅವರು ಈಗ ಅದನ್ನು ಮುಂದುವರೆಸಿದ್ದು, ಪ್ರಧಾನಿ ಮೋದಿಗೆ ಲಡಾಕ್ ಉಳಿಸುವಂತೆ ಮನವಿ ಮಾಡುತ್ತಿದ್ದಾರೆ. 

ಭಾರತಕ್ಕೆ ಮಿಲಿಟರಿ ಹಾಗೂ ರಕ್ಷಣಾ ವಿಚಾರದಲ್ಲಿ ಲಡಾಕ್ ಅತ್ಯಂತ ಮಹತ್ವದ ಸ್ಥಳ. ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ಸಂಘರ್ಷಗಳ ಸಮಯದಲ್ಲಿ ಲಡಾಕ್ ಪ್ರಮುಖ ಪಾತ್ರವಹಿಸಿದೆ. ಇಂತಹ ಮಹತ್ವದ ಪ್ರದೇಶದಲ್ಲಿ ಉದ್ಯಮ ವಿಸ್ತರಣೆಯಿಂದ ನೀರಿನಂತಹ ಅತೀ ಅಮೂಲ್ಯ ಸಂಪತ್ತಿನ ಕೊರತೆ ಆಗಬಹುದು ಎಂಬುದು ಅವರ ಆತಂಕ

ಲಡಾಕ್ ತುಂಬಾ ಸೂಕ್ಷ್ಮ ಪ್ರದೇಶವಾಗಿದ್ದು,  ಅಲ್ಲಿ ಹಿಮಗಲ್ಲುಗಳು ನಾಶವಾಗುತ್ತಿವೆ.  ಹೀಗಾದಲ್ಲಿ ದೇಶಕ್ಕೂ ಅಪಾಯ ಹಾಗಾಗಿ ಇದನ್ನು ಸಂವಿಧಾನದಡಿ ರಕ್ಷಣೆ ಮಾಡುವಂತೆ ಪ್ರಧಾನಿಗೆ ವಾಂಗ್ಚುಕ್ ಮನವಿ ಮಾಡಿದ್ದಾರೆ. 

ಉದ್ಯಮದ ವಿಸ್ತರಣೆ, ಹಾಗೂ ಗಣಿಗಾರಿಕೆಯಿಂದ ಅಲ್ಲಿನ ಹಿಮನದಿಗಳು ಕರಗಲು ಶುರುವಾಗಬಹುದು. ಇದು ಇಡೀ ಪರಿಸರಕ್ಕೆ ಅಪಾಯ ಹೀಗಾಗಿ ಕೂಡಲೇ ಸರ್ಕಾರ ಇತ್ತ ಗಮನಹರಿಸಿ ಇದರ ರಕ್ಷಣೆಗೆ ಮುಂದಾಗಬೇಕು ಎಂಬುದು ಅವರ ಒತ್ತಾಯ.

ಉಪವಾಸಕ್ಕೂ ಮೊದಲು ಅವರು 13 ನಿಮಿಷಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.  ಅದರಲ್ಲಿ ಅವರ ಪ್ರಪಂಚದ ಮೂರನೇ ಧ್ರುವ ಎಂದು ಕರೆಯಲ್ಪಡುವ  ಲಡಾಕ್ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದನ್ನು ರಕ್ಷಿಸಲು ದೇಶದ ಪ್ರಪಂಚದ ಜನ ಮುಂದಾಗುವಂತೆ ಅವರು ಮನವಿ ಮಾಡಿದರು. 


ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಯಿಂದ ಹಿಮನದಿಗಳು ಕರಗುತ್ತಿವೆ. ಈಗಾಗಲೇ ಮೂರನೇ ಎರಡರಷ್ಟು ಹಿಮನದಿ ಕರಗಿದೆ. ಹೀಗಾಗಿ ಭಾರತದ ಸಂವಿಧಾನದ 6ನೇ ವಿಭಾಗದಡಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರದೇಶದ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

1966ರಲ್ಲಿ ಜನಿಸಿದ ಸೋನಮ್ ವಾಂಗ್ಚುಕ್ ಅವರು ಮೆಕಾನಿಕಲ್ ಇಂಜಿನಿಯರ್ ಆಗಿದ್ದು, 2018ರಲ್ಲಿ ಮ್ಯಾಗೆಸ್ಸೆ ಪ್ರಶಸ್ತಿಗೆ ಭಾಜನರಾಗಿದ್ದರು.  ಹಿಮಾಲಯನ್‌ ಇನ್ಸಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್, ಲಡಾಕ್‌ನ ನಿರ್ದೇಶಕರು ಆಗಿರುವ ಇವರು ಅಮೀರ್ ಖಾನ್ ನಟನೆಯ 2009ರ ತ್ರಿ ಈಡಿಯಟ್ಸ್ ಸಿನಿಮಾಕ್ಕೆ ಸ್ಪೂರ್ತಿಯಾಗಿದ್ದರು. 

click me!