Republic Day: ರಾಜಸ್ಥಾನಿ ಬಂದೇಜ್‌ ಟರ್ಬನ್‌ನಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ!

First Published Jan 26, 2023, 4:14 PM IST

ಜನವರಿ 26 ರಂದು ದೆಹಲಿಯ ಕರ್ತವ್ಯ ಪಥದಲ್ಲಿ 74 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹು ಬಣ್ಣದ ಆಕರ್ಷಕ ಪೇಟವನ್ನು ಧರಿಸಿದ್ದರು. ಪ್ರಧಾನಮಂತ್ರಿಯವರು ವಿವಿಧ ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ಕಾರ್ಯಕ್ರಮಗಳಲ್ಲಿ ವರ್ಷಗಳಲ್ಲಿ ವಿಭಿನ್ನವಾದ ಪೇಟಗಳನ್ನು ಆಯ್ಕೆ ಮಾಡಿದ್ದಾರೆ. 2015ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿ ಗಣರಾಜ್ಯೋತ್ಸವದ ದಿನ ಧರಿಸಿದ್ದ ಆಕರ್ಷಕ ಪೇಟಗಳ ವಿವರ ಇಲ್ಲಿದೆ.
 

2023: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ರಾಜಸ್ಥಾನಿ ಬಂದೇಜ್‌ ಟರ್ಬನ್‌ನಲ್ಲಿ ಕಾಣಿಸಿಕೊಂಡರು. ಕಿತ್ತಳೆ, ಹಳದಿ, ಕೆಂಪು ಮತ್ತು ಹಸಿರು ಸೇರಿದಂತೆ ವಿವಿಧ ಬಣ್ಣಗಳನ್ನು ಈ ಪೇಟ ಹೊಂದಿತ್ತು.
 

2022: ಪ್ರಧಾನಿಯವರ ಪೇಟವು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಬಾರಿ ಅವರು ಪೇಟದ ಬದಲಿಗೆ ಸುಂದರವಾದ ಉತ್ತರಾಖಂಡದ ಕ್ಯಾಪ್ ಧರಿಸಿದ್ದರು. ಪೇಟದಲ್ಲಿ ಉತ್ತರಾಖಂಡದ ಅಧಿಕೃತ ಹೂವನ್ನು ಕೂಡ ಮುದ್ರಿಸಲಾಗಿತ್ತು.
 

2021: ಗಣರಾಜ್ಯೋತ್ಸವದಂದು, ಮೋದಿ ಅವರು ಪೇಟದ ಬದಲಿಗೆ ರಾಜಸ್ಥಾನಿ ಟರ್ಬನ್‌ಅನ್ನು ಧರಿಸಿದ್ದರು. ಇದು ರಾಜಸ್ಥಾನದ ರಾಜ ಮನೆತನದ ಟರ್ಬನ್‌ ಅಥವಾ ಪಗ್ಡಿ ಆಗಿತ್ತು. ಹಳದಿ ಬಣ್ಣದ ಚುಕ್ಕೆಗಳನ್ನು ಹೊಂದಿದ್ದ ಈ ಪಗ್ಡಿಯನ್ನು ಜಾಮ್‌ನಗರದ ರಾಜಮನೆತನ ಪ್ರಧಾನಿಗೆ ಉಡುಗೊರೆಯಾಗಿ ನೀಡಿತ್ತು.

2020: ಈ ವರ್ಷದ ಗಣರಾಜ್ಯೋತ್ಸವದಲ್ಲೂ ಕೂಡ ಪ್ರಧಾನಿ ಬಂದೇಜ್‌ ಪೇಟವನ್ನು ಧರಿಸಿದ್ದರು. ಕೇಸರಿ ಬಣ್ಣದ ಈ ಪೇಟಕ್ಕೆ ಹಿಂದೆ ಉದ್ದನೆಯ ವಸ್ತ್ರವನ್ನು ಇಳಿಬಿಡಲಾಗಿತ್ತು.
 

2019: ಗಣರಾಜ್ಯೋತ್ಸವದಂದು ಮಸ್ಟರ್ಡ್‌ ಸಫಾ ಪೇಟ ಕೂಡ ಸಾಕಷ್ಟು ಗಮನಸೆಳೆದಿತ್ತು. ಅದಲ್ಲದೆ, ಇದಕ್ಕಿದ್ದ ಗೋಲ್ಡನ್‌ ಥ್ರೆಡ್‌ ಕಾರಣದಿಂದಾಗಿ ದಿನಪತ್ರಿಕೆಗಳಲ್ಲೂ ಮೋದಿಯ ಪೇಟ ಸಾಕಷ್ಟು ಸುದ್ದಿ ಮಾಡಿತ್ತು.

2018: ಗಣರಾಜ್ಯೋತ್ಸವದಂದು ಪ್ರಧಾನಿ  ವರ್ಣರಂಜಿತ ಪೇಟವನ್ನು ಧರಿಸಿದ್ದರು. ಅವರು ಬಹುವರ್ಣದ ಪಗ್ಡಿಯನ್ನು ಗಣರಾಜ್ಯ ಸಂಭ್ರಮಕ್ಕೆ ಆರಿಸಿಕೊಂಡಿದ್ದರು.
 

2017:  ಪ್ರಧಾನಿ ನರೇಂದ್ರ ಮೋದಿ ಬಿಳಿ ಬಣ್ಣದ ಅಂಚು ಹೊಂದಿದ್ದ ಗುಲಾಬಿ ಬಣ್ಣದ ಪೇಟವನ್ನು ಧರಿಸಿದ್ದರು. ಈ ಪೇಟವನ್ನು ಸರಳವಾಗಿ ಮತ್ತು ಸೊಗಸಾಗಿ ವಿನ್ಯಾಸ ಮಾಡಲಾಗಿತ್ತು.
 

2016: ಪ್ರಧಾನಿ ನರೇಂದ್ರ ಮೋದಿ 2016ರ ಗಣರಾಜ್ಯೋತ್ಸವ ದಿನದ ಸಂಭ್ರಮಕ್ಕಾಗಿ ಹಳದಿ ಬಣ್ಣದ ಟರ್ಬನ್‌ ಆಯ್ಕೆ ಮಾಡಿಕೊಂಡಿದ್ದರು. ಉತ್ಕೃಷ್ಟ ಮಟ್ಟದ ರೇಷ್ಮೆಯಿಂದ ಇದನ್ನು ನೇಯಲಾಗಿತ್ತು.
 

2015: ಪ್ರಧಾನಿಯಾಗಿ ಮೊದಲ ಬಾರಿಗೆ ನರೇಂದ್ರ ಮೋದಿ ಗಣರಾಜ್ಯೋತ್ಸವದಲ್ಲಿ ಭಾಗಿಯಾದ ವರ್ಷ ಇದಾಗಿತ್ತು. ರಾಜಸ್ಥಾನದ ಬಂಧನಿ ಶೈಲಿಯ ಟರ್ಬನ್‌/ಪಗ್ಡಿ ಧರಿಸಿ ಮೋದಿ ಹಾಜರಾಗಿದ್ದರು. ಈ ವೇಳೆ ಬರಾಕ್‌ ಒಬಾಮ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.

click me!