ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುವ ರಾಜ್ಯವಿದು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

First Published | Dec 8, 2024, 6:48 PM IST

ದೇಶದಲ್ಲೇ ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುವ ರಾಜ್ಯ ಯಾವುದು  ಎಷ್ಟು ಜನ ಅಧಿಕೃತ ಲೈಂಗಿಕ ಕಾರ್ಯಕರ್ತೆಯರಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧವಲ್ಲ, ಅತೀ ಪುರಾತನ ವೃತ್ತಿ ಎನಿಸಿಕೊಂಡಿರುವ ವೇಶ್ಯಾವಾಟಿಕೆಗೆ ಸಮಾಜದಲ್ಲಿ ಸ್ಥಾನಮಾನವಿಲ್ಲ, ಆದರೆ ಅದು ಕಾಲ ಕಳೆದಂತೆ ತನ್ನ ಸ್ವರೂಪವನ್ನು ಬದಲಿಸಿಕೊಂಡು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಬೇರೆ ಬೇರೆ ರೂಪದಲ್ಲಿ ಹೆಚ್ಚುತ್ತಲೇ ಇದೆ.  ಇದಕ್ಕಾಗಿಯೇ ದೇಶದ ಹಲವೆಡೆ ರೆಡ್‌ಲೈಟ್ ಏರಿಯಾಗಳೂ ಇವೆ. ಹೀಗಿರುವಾಗ ದೇಶದಲ್ಲೇ ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುವ ರಾಜ್ಯ ಯಾವುದು  ಎಷ್ಟು ಜನ ಅಧಿಕೃತ ಲೈಂಗಿಕ ಕಾರ್ಯಕರ್ತೆಯರಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಭಾರತದ ಒಟ್ಟು ಮಹಿಳಾ ಲೈಂಗಿಕ ಕಾರ್ಯಕರ್ತೆಯರಲ್ಲಿ  ಅರ್ಧಕ್ಕಿಂತ ಹೆಚ್ಚು ಜನ ದಕ್ಷಿಣ ಭಾರತದ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.  ಅವರಲ್ಲಿ ಯಾವ ಯಾವ ರಾಜ್ಯಗಳಲ್ಲಿ ಎಷ್ಟೊಂದು ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ ಎಂಬ ಮಾಹಿತಿ ಇಲ್ಲಿದೆ. 

Tap to resize

ಪಂಜಾಬ್‌ನಲ್ಲಿ 19,573 ಲೈಂಗಿಕ ಕಾರ್ಯಕರ್ತೆಯರಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 46,787 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಹಾಗೆಯೇ ಉತ್ತರ ಪ್ರದೇಶದಲ್ಲಿ 22,060 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. 

ಗುಜರಾತ್‌ನಲ್ಲಿ 26,042 ಜನ ಲೈಂಗಿಕ ಕಾರ್ಯಕರ್ತೆಯರಿದ್ದರೆ, ಮಹಾರಾಷ್ಟ್ರದಲ್ಲಿ 78,361 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಹಾಗೆಯೇ ನೆರೆ ರಾಜ್ಯ ತೆಲಂಗಾಣದಲ್ಲಿ 1,00,818 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. 

ಹಾಗೆಯೇ ಮಿಜೋರಾಂನಲ್ಲಿ ಅತೀ ಕಡಿಮೆ ಅಂದರೆ 833 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 17, 327 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ತಮಿಳುನಾಡಿನಲ್ಲಿ 65,886 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. 

ನೆರೆಯ ತೆಲುಗು ರಾಜ್ಯ ಆಂಧ್ರ ಪ್ರದೇಶವೂ 1,33, 447 ಜನ ಲೈಂಗಿಕ ಕಾರ್ಯಕರ್ತೆಯರನ್ನು ಹೊಂದುವ ಮೂಲಕ ದೇಶದಲ್ಲೇ ಅತೀ ಹೆಚ್ಚು ಲೈಂಗಿಕ ಕಾರ್ಯಕರ್ತೆಯರಿರುವ ರಾಜ್ಯ ಎನಿಸಿದೆ. ಹಾಗೆಯೇ ಕರ್ನಾಟಕವೂ 1,16,288 ಲೈಂಗಿಕ ಕಾರ್ಯಕರ್ತೆಯರನ್ನು ಹೊಂದುವುದರೊಂದಿಗೆ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.  ಅಂದಹಾಗೆ ಇದು ಕೇಂದ್ರ ಗೃಹ ಸಚಿವಾಲಯವೂ 2021ರ ಸೆಪ್ಟೆಂಬರ್‌ನಲ್ಲಿ ನೀಡಿದ ಮಾಹಿತಿಯಾಗಿದೆ. 

Latest Videos

click me!